ಲೈಂಗಿಕ ದೌರ್ಜನ್ಯದ ವಿರುದ್ಧ ಮಹಿಳಾ ಕುಸ್ತಿಪಟುಗಳ ಹೋರಾಟಕ್ಕೆ ಬೆಂಬಲಿಸಿ ನ್ಯಾಯಕ್ಕಾಗಿ ಪ್ರತಿಭಟನೆ

ಬೆಂಗಳೂರು : ಲೈಂಗಿಕ ದೌರ್ಜನ್ಯದ ವಿರುದ್ಧ ಹೋರಾಟವನ್ನುನಡೆಸುತ್ತಿರುವ ಮಹಿಳಾ ಕುಸ್ತಿಪಟುಗಳಿಗೆ ಬೆಂಬಲವಾಗಿ ಹಾಗೂ ಕಿರುಕಳಕ್ಕೆ ಕಾರಣ ಎನ್ನಲಾದ WFI ಅಧ್ಯಕ್ಷರು ಮತ್ತು ಬಿಜೆಪಿ ಹಾಲಿ ಸಂಸತ್ ಸದಸ್ಯರಾದ ಬ್ರಿಜು ಭೂಷಣ್ ಶರಣ್ ಸಿಂಗ್ ಅವರ ವಿರುದ್ಧ ನ್ಯಾಯಕ್ಕಾಗಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ವತಿಯಿದ ಇಂದು ಪ್ರತಿಭಟನೆ ನಡೆಸಲಾಯಿತು.

ಎ ಐ ಎಂ ಎಸ್ ಎಸ್ ನ ರಾಜ್ಯ ಕಾರ್ಯದರ್ಶಿಗಳಾದ ಶೋಭಾ. ಎಸ್ ಅವರು ಮಾತನಾಡುತ್ತಾ ಮಹಿಳಾ ಕುಸ್ತಿಪಟುಗಳ ಲೈಂಗಿಕ ದೌರ್ಜನ್ಯದ ವಿರುದ್ಧದ ಹೋರಾಟ ಕಳೆದ ಜನವರಿಯಿಂದಲೇ ಆರಂಭವಾಗಿದೆ. ಹಲವಾರು ವರ್ಷಗಳಿಂದ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳಕ್ಕೆ ಒಳಪಟ್ಟಿದ್ದು, ಭಾರತೀಯ ಕುಸ್ತಿ ಮಹಾಮಂಡಳಿಯಿಂದ ಜೀವ ಬೆದರಿಕೆಯನ್ನೂ ಎದುರಿಸಿದ್ದಾರೆ ಎಂದು ಸ್ವರ್ಣ ಪದಕ ಗೆದ್ದಿರುವ ಪ್ರಪ್ರಥಮ ಮಹಿಳಾ ಕುಸ್ತಿಪಟು ವಿನೇಶ್ ಪೋಘಾಟ್ ಸೇರಿದಂತೆ ಇನ್ನೂ ಹಲವಾರು ಕುಸ್ತಿಪಟುಗಳು ಆರೋಪವನ್ನು ಮಾಡಿದ್ದಾರೆ. ಕಳೆದ ಕೆಲವು ದಿನಗಳಿಂದ ದೆಹಲಿಯಲ್ಲಿ ಅವಿರತ ಹೋರಾಟ ನಡೆಸುತ್ತಿದ್ದರೂ ಹಲವಾರು ತಾಂತ್ರಿಕ ನೆಪಗಳನ್ನು ನೀಡಿ ಈವರೆಗೆ ಆರೋಪಿಗಳ ಮೇಲೆ ಯಾವುದೇ ರೀತಿಯ ಕಾನೂನು ಕ್ರಮಗಳನ್ನು ಜರುಗಿಸಿಲ್ಲ. ಇದು ಅತ್ಯಂತ ನಾಚಿಕೆಗೇಡಿನ ಸಂಗತಿ! ಬೇಟಿ ಬಚಾವೋ ಬೇಟಿ ಬಚಾವೋ ಎಂದು ಹೇಳಿಕೊಳ್ಳುವ ಬಿಜೆಪಿ ಸರ್ಕಾರದ ಮಹಿಳಾ ಪರ ಧೋರಣೆ ಇದೆಯೇ ಎಂದು ಅವರು ಪ್ರಶ್ನಿಸಿದರು. ಇಂತಹ ಸೂಕ್ಷ್ಮ ವಿಷಯಗಳ ಕುರಿತು ಆರೋಪ ಮಾಡಿದಾಗ ವಿಚಾರಣೆಗೆ ಮುಕ್ತ ಮನಸ್ಸನ್ನು ಹೊಂದಿರುವ ಬದಲು ಇಂತಹ ಯಾವುದೇ ಸಮಸ್ಯೆ ಏರ್ಪಟ್ಟಿಲ್ಲ ಎಂದು ಸಮಜಾಯಿಷಿ ನೀಡುತ್ತಿರುವ ಅಧ್ಯಕ್ಷರ ಮನೋಭಾವ ಅತ್ಯಂತ ಖಂಡನೀಯ. ಮಹಿಳಾ ಕುಸ್ತಿಪಟುಗಳ ಹೋರಾಟವನ್ನು ಎ ಐ ಎಂ ಎಸ್ ಎಸ್ ಪ್ರಾರಂಭದಿಂದಲೂ ಬೆಂಬಲಿಸುತ್ತಿದೆ. ಈ ದಿನ ಅವರ ಹೋರಾಟವನ್ನು ಬೆಂಬಲಿಸಿ ಅಖಿಲ ಭಾರತ ಬೆಂಬಲ ದಿನವನ್ನು ಘೋಷಿಸಲಾಗಿದೆ. ಕುಸ್ತಿಪಟುಗಳ ಹೋರಾಟಕ್ಕೆ ಹಲವಾರು ಪ್ರತಿಷ್ಠಿತ ಕ್ರೀಡಾಪಟುಗಳು, ಪ್ರಗತಿಪರರು ಸೇರಿದಂತೆ ಒಟ್ಟಾರೆ ಮಹಿಳಾ ಸಮುದಾಯ ವ್ಯಾಪಕ ಬೆಂಬಲ ವ್ಯಕ್ತಪಡಿಸುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ : ಬ್ರಿಜ್ ಭೂಷಣ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ಕುಸ್ತಿಪಟುಗಳ ಅರ್ಜಿ: ನೊಟೀಸ್ ಜಾರಿ ಮಾಡಿದ ಸುಪ್ರೀಂ

ಪ್ರತಿಭಟನಾ ಪ್ರತಿಭಟನೆಯಲ್ಲಿ ಸಂಘಟನೆಯ ಕಾರ್ಯಕರ್ತರು, ಬೆಂಬಲಿಗರು ಪಾಲ್ಗೊಂಡಿದ್ದರು. ಜೊತೆಗೆ ಈ ಕೂಡಲೇ WFI ಅಧ್ಯಕ್ಷರ ಮೇಲೆ ಕಠಿಣ ಕ್ರಮವನ್ನು ಕೈಗೊಳ್ಳಬೇಕೆಂದು ಎ ಐ ಎಂ ಎಸ್ ಎಸ್ ಈ ಮೂಲಕ ಒತ್ತಾಯಿಸಿದರು.

Donate Janashakthi Media

Leave a Reply

Your email address will not be published. Required fields are marked *