ಜನಮತ 2023 : ವಿಧಾನಸಭಾ ಚುನಾವಣೆಗೆ ಸಲ್ಲಿಕೆಯಾಗಿದ್ದ ನಾಮಪತ್ರಗಳಲ್ಲಿ 3.044 ಸ್ವೀಕೃತ, 406 ತಿರಸ್ಕೃತ

ಬೆಂಗಳೂರು : ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ  ನಾಮಪತ್ರ ಪರಿಶೀಲನೆ ಮುಕ್ತಾಯವಾಗಿದ್ದು, 3.044 ಮಂದಿಯ ನಾಮಪತ್ರಗಳು ಸ್ವೀಕೃತವಾಗಿದ್ದು,406 ನಾಮಪತ್ರಗಳು ತಿರಸ್ಕೃತಗೊಂಡಿವೆ.

ನಾಮಪತ್ರ ಸಲ್ಲಿಕೆಗೆ ಗುರುವಾರ ಕೊನೆಯ ದಿನವಾಗಿತ್ತು, 3.632 ಮಂದಿ 5.102 ನಾಮಪತ್ರಗಳನ್ನು ಸಲ್ಲಿಸಿದ್ದರು. 5.102 ನಾಮಪತ್ರಗಳನ್ನ ಶುಕ್ರವಾರ ಪರಿಶೀಲನೆ ನಡೆಸಲಾಯ್ತು. ಕೆಲವು ಅಭ್ಯರ್ತಿಗಳ ನಾಮಪತ್ರಗಳಿಗೆ ಸಂಬಂಧಿಸಿ ತಕರಾರು ಸಲ್ಲಿಕೆಯಾಗಿರುವುದರಿಂದ ಸವದತ್ತಿ ಯಲ್ಲಮ್ಮ,ಔರಾದ್‌,ಹಾವೇರಿ ಮತ್ತು ಶಿವಾಜಿನಗರ ಕ್ಷೇತ್ರಗಳ ನಾಮಪತ್ರಗಳ ಪರಿಶೀಲನೆ ಬಾಕಿ ಉಳಿದಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ತಿಳಿಸಿದ್ದಾರೆ.

220 ಕ್ಷೇತ್ರಗಳಲ್ಲಿ ಪುರುಷರಿಂದ 4.607 ಮಹಿಳೆಯರಿಂದ 381 ಮತ್ತು ಅಲ್ಪಸಂಖ್ಯಾತರಿಂದ ಒಂದು ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಬಿಜೆಪಿಯ 219 ಕಾಂಗ್ರೆಸ್‌ ನ 218 ಜೆಡಿಎಸ್‌ ಮತ್ತು ಆಮ್‌ ಆದ್ಮಿ ಪಕ್ಷದ ತಲಾ 207 ಬಹುಜನ ಸಮಾಜ ಪಕ್ಷದಿಂದ 135,ಸಿಪಿಎಂನ ನಾಲ್ವರು ಅಭ್ಯರ್ಥಿಗಳ ನಾಮಪತ್ರಗಳು ಅಂಗಿಕಾರವಾಗಿವೆ.

ಇದನ್ನೂ ಓದಿಜನಮತ 2023 : ವಿಧಾನಸಭೆ ಚುನಾವಣೆಗೆ ಒಟ್ಟು 5,102 ನಾಮಪತ್ರ ಸಲ್ಲಿಕೆ

ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥೀ ಬಿ.ಝಡ್.ಜಮೀರ್‌ ಅಹಮ್ಮದ್‌ ಖಾನ್‌,ಯಲಹಂಕ ಕ್ಷೇತ್ರದಲ್ಲಿ ಬಿಜೆಪಿಯ ಎಸ್.ಆರ್‌ ವಿಶ್ವನಾಥ್‌,ಯಶವಂತಪುರ ಕ್ಷೇತ್ರದಲ್ಲಿ ಜೆಡಿಎಸ್‌ ನ ಟಿ.ಎನ್‌ ಜವರಾಯಿ ಗೌಡ ಸೇರಿದಂತೆ ಹಲವು ಅಭ್ಯರ್ಥಿಗಳ ನಾಮಪತ್ರಗಳಿಗೆ ಪ್ರತಿಸ್ಪರ್ಧಿಗಳು ತಕರಾರು ಸಲ್ಲಿಸಿದ್ದರು.ಬಹುತೇಕ ಕಡೆ ವಿಚಾರಣೆ ನಡೆಸಿ,ತಕರಾರು ವಜಾಗೊಳಿಸಿದ ಬಳಿಕ ನಾಮಪತ್ರಗಳನ್ನು ಅಂಗೀಕರಿಸಲಾಯಿತು.

Donate Janashakthi Media

Leave a Reply

Your email address will not be published. Required fields are marked *