ಕೊಡಗು : ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಗೌಡಳ್ಳಿ ಗ್ರಾಮದಲ್ಲಿರುವ ಡಿಜಿಟಲ್ ಗ್ರಂಥಾಲಯಕ್ಕೆ ಬರುವ ಓದುಗರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕಳೆದ 6 ತಿಂಗಳಿನಿಂದ ಸತತವಾಗಿ ಗ್ರಂಥಾಲಯಕ್ಕೆ ಬಾರದ ದಿನ ಪತ್ರಿಕೆಗಳು ಹಾಗೂ ಡಿಜಿಟಲ್ ಗ್ರಂಥಾಲಯಕ್ಕೆ ಸರ್ಕಾರದಿಂದ ನೀಡಿರುವ ಕಂಪ್ಯೂಟರ್ ಮತ್ತು ಪೀಠೋಪಕರಣಗಳನ್ನು ಗ್ರಂಥಾಲಯಕ್ಕೆ ಬಳಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕೆಂದು ಕರವೇಯ ಶಿವರಾಮೇಗೌಡರು ಹಾಗೂ ಕಾರ್ಯಕರ್ತರು ಮನವಿ ಮಾಡಿದ್ದಾರೆ.
ಈ ಸಂಬಂಧ ಹಲವು ಬಾರಿ ಗೌಡಳ್ಳಿ ಗ್ರಾಮ ಪಂಚಾಯಿತಿಯವರಿಗೆ ಡಿಜಿಟಲ್ ಗ್ರಂಥಾಲಯದಿಂದ ಮನವಿ ಮಾಡಿದರು ಸಹ ಪತ್ರಿಕೆಗಳು ತರಿಸುತ್ತಿಲ್ಲ ಎಂದು ಗ್ರಂಥಾಲಯದ ನಾಗರಾಜ್ ರವರು ಬೇಸರ ಹೊರಹಾಕಿದ್ದಾರೆ. ಈ ಹಿಂದೆ ಆರು ತಿಂಗಳಿಂದ ಪತ್ರಿಕೆಗಳ ಓದಲು ಮಕ್ಕಳು ಮತ್ತು ಪುಸ್ತಕ ಓದುವವರು ಡೀಟಲ್ ಗ್ರಂಥಾಲಯಕ್ಕೆ ಭೇಟಿ ನೀಡಿ ಓದುವ ಪತ್ರಿಕೆಗಳನ್ನು ಕೇಳಿದರೆ ನಮ್ಮಲ್ಲಿ ಇಲ್ಲ ಎಂದು ಹೇಳುತ್ತಾರೆ. ಹಾಗೂ ಕಂಪ್ಯೂಟರ್ ತೆಗೆದು ತೋರಿಸುತ್ತಾರೆ ಪತ್ರಿಕೆಗಳನ್ನು ಹೆಸರಿಗೆ ಮಾತ್ರ ಡಿಜಿಟಲ್ ಗ್ರಂಥಾಲಯ ಪತ್ರಿಕೆಗಳು ಮಾತ್ರ ತರಿಸಲು ಇವರಿಗೆ ಆಗುತ್ತಿಲ್ಲ ಎಂದು ಕರವೇ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ : ಸ್ಪರ್ಧಾತ್ಮಕ ಪರೀಕ್ಷೆಗಳ ಗ್ರಂಥಾಲಯ ಉದ್ಘಾಟನೆ
ಗ್ರಂಥಾಲಯದ ಕಂಪ್ಯೂಟರ್ ಗ್ರಾಮ ಪಂಚಾಯಿತಿಯ ಕೆಲಸಕ್ಕೆ ಬಳಕೆ :
ಡಿಜಿಟಲ್ ಗ್ರಂಥಾಲಯಕ್ಕೆ ಮುಂದಿನ ದಿನಗಳಾದರೂ ಪತ್ರಿಕೆಗಳು ಬರುವಂತಾಗಲಿ ಹಾಗೂ ಸರ್ಕಾರದ ಆದೇಶವಾಗಿರುವ ಪ್ರಕಾರ ರೂ.1000ಯವರೆಗೆ ಓದುವ ಪತ್ರಿಕೆಗಳನ್ನು ತೆಗೆದುಕೊಳ್ಳಬೇಕೆಂದು ಸರ್ಕಾರದಿಂದ ಆದೇಶದ ಕಾಪಿ ಸಹ ಗ್ರಾಮ ಪಂಚಾಯಿತಿಗೆ ತಲುಪಿದರು ಸಹ ಗ್ರಾಮ ಗೌಡಳ್ಳಿ ಪಂಚಾಯತಿಯವರು ನಿರ್ಲಕ್ಷ ಮಾಡಿರುತ್ತಾರೆ ಹಾಗೂ ಕಂಪ್ಯೂಟರ್ ಸಹ ಒಂದೇ ಇರುತ್ತದೆ ಸರ್ಕಾರದಿಂದ ಎರಡು ಕಂಪ್ಯೂಟರ್ ಕೊಟ್ಟಿರುತ್ತಾರೆ ಆದರೆ ಇನ್ನೊಂದು ಕಂಪ್ಯೂಟರ್ ಗ್ರಾಮ ಪಂಚಾಯಿತಿ ಕೆಲಸಕ್ಕೆ ಗ್ರಾಮ ಪಂಚಾಯಿತಿಯಲ್ಲಿ ತೆಗೆದುಕೊಂಡಿರುತ್ತಾರೆ ಹಾಗೂ ಸರ್ಕಾರದಿಂದ ಕೊಟ್ಟಂತಹ ಗ್ರಂಥಾಲಯಕ್ಕೆ ಪೀಠಪಕರಣಗಳು ಸಹ ಗ್ರಾಮ ಪಂಚಾಯಿತಿಗೆ ತೆಗೆದುಕೊಂಡು ಹೋಗಿ ಗ್ರಾಮ ಪಂಚಾಯಿತಿಯಲ್ಲಿ ಉಪಯೋಗಿಸಿಕೊಂಡಿರುತ್ತಾರೆ ಕರವೇ ಪ್ರಶ್ನೆ ಏನೆಂದರೆ ಡಿಜಿಟಲ್ ಗ್ರಂಥಾಲಯಕ್ಕೆ ಕೊಟ್ಟಂತಹ ಕಂಪ್ಯೂಟರ್ ಗಳನ್ನು ಗ್ರಾಮ ಪಂಚಾಯಿತಿ ಕೆಲಸಕ್ಕೆ ಗ್ರಾಮ ಪಂಚಾಯತಿಯಲ್ಲಿ ಬಳಸುವುದು ಎಷ್ಟು ಸರಿ ಎಂದು ಕರವೇ ಪ್ರಶ್ನಿಸಿದೆ.
ಹಾಗೂ ಡಿಜಿಟಲ್ ಗ್ರಂಥಾಲಯಕ್ಕೆ ಕೊಟ್ಟಂತಹ ಪೀಠೋಪಕರಣಗಳನ್ನು ಗ್ರಾಮ ಪಂಚಾಯತಿ ಕೆಲಸಕ್ಕೆ ಗ್ರಾಮ ಪಂಚಾಯಿತಿಯಲ್ಲಿ ಬಳಸುವುದು ಎಷ್ಟೊಂದು ಸರಿ ಎಂದು ಕರವೇ ಪ್ರಶ್ನೆ ಹಾಗಾಗಿ ಇದರಲ್ಲರ ಬಗ್ಗೆ ಸಹ ತನಿಖೆ ಆಗಬೇಕೆಂದು ಕರವೇ ಕಾರ್ಯಕರ್ತರು ಮನವಿ ಮಾಡಿದ್ದಾರೆ.
ಮುಂದಿನ ದಿನಗಳಲ್ಲಿ ಈ ಸಂಬಂಧ ಕ್ರಮ ಕೈಗೊಳ್ಳುವುದೇ ಹೋದರೆ ಗ್ರಾಮ ಪಂಚಾಯತಿಯವರು ಕರ್ನಾಟಕ ರಕ್ಷಣಾ ವೇದಿಕೆಯಿಂದ ಕೊಡಗು ಜಿಲ್ಲಾಧಿಕಾರಿಗಳಿಗೆ ಹಾಗೂ ಕೊಡಗು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿರವರಿಗೆ ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಮಾನ್ಯ ಲೋಕಾಯುಕ್ತ ಗಳಿಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ದೂರು ಕೊಡಲಾಗುವುದು ಎಂದು ಪ್ರಾಸ್ಸಿಸ್ ಡಿಸೋಜ ಅಧಿಕಾರಿಗಳುಗೆ ಎಚ್ಚರಿಸಿದ್ದಾರೆ.