“ಹಕ್ಕಿ ನುಂಗಿದ ನಾಯಿ” ಟ್ವಿಟ್ವರ್ ಲೊಗೊ ಬದಲಾವಣೆ

ವಾಷಿಂಗ್ಟನ್ :  ಜನಪ್ರಿಯ ಸಾಮಾಜಿಕ ಜಾಲತಾಣ ಟ್ವಿಟ್ವರ್ ಹಕ್ಕಿ ಲೊಗೊ ನಾಯಿ ಮರಿಯಾಗಿ ಮಂಗಳವಾರ ಬದಲಾಣೆಗೊಂಡಿದೆ. ಈ ಬಗ್ಗೆ ಜಾಲತಾಣ ಬಳಕೆದಾರರು ಮೀಮ್ಸ್, ಟ್ರೋಲ್ ಮಾಡುವುದರ ಮೂಲಕ ಹಾಸ್ಯದ ಚರ್ಚೆ ನಡೆಸುತ್ತಿದ್ದಾರೆ.

‘ನಾಯಿಯಾಗಿ ಬದಲಾದ ಟ್ವಿಟ್ಟರ್ ಹಕ್ಕಿ ಲೊಗೊವು ಎರಡು ದಿನ ತಡವಾಗಿ ಮಾಡಿದ ಎಪ್ರಿಲ್ ಪೂಲ್’ ಎಂದು ಕ್ರೈಡ್‌ಮ್ಯಾನ್ ಎಂಬ ಖಾತೆ ಹಾಸ್ಯವತ್ತಾಗಿ ಬರೆದುಕೊಂಡಿದೆ.

ಅಲ್ಲದೇ, #Doge ಎಂದು ಬಳಸಿ ಮಾನವನ ದೇಹಕ್ಕೆ ನಾಯಿ ತಲೆ ಅಂಟಿಸಿದ ವಿವಿಧ ರೀತಿಯ ಪೋಸ್ಟರ್‌ಗಳನ್ನು ಟ್ವಿಟ್ಟರ್ ಬಳಕೆದಾರರು ಹಂಚಿಕೊಂಡು ಕುಟುಕುತ್ತಿದ್ದಾರೆ.

ಇದನ್ನೂ ಓದಿ : 6 ಗಂಟೆಗಳ ಕಾಲ ಸ್ಥಗಿತಗೊಂಡಿದ್ದ ಸಾಮಾಜಿಕ ಜಾಲತಾಣ! – ಚಟಪಟಿಸಿದವರೆಷ್ಟು ಜನ ಗೊತ್ತೆ?

ಒಟ್ಟಿನಲ್ಲಿ ಹಲವು ಬಳಕೆದಾರರು ಟ್ವಿಟರ್ ಲಾಗಿನ್ ಆದ ತಕ್ಷಣ ಹೋಮ್ ಪೇಜಿನಲ್ಲಿ ನಾಯಿ ಲೊಗೊ ಕಂಡು ಬೆರಗಾಗುತ್ತಿದ್ದಾರೆ. ಅಸಲಿಗೆ ಈ ಲೊಗೊ ಬದಲಾವಣೆ ಹಿಂದಿನ ವಾಸ್ತವ ಏನೆಂದರೆ, ಟ್ವಿಟ್ವರ್ ಮಾಲೀಕ ಎಲಾನ್ ಮಾಸ್ಕ್ ಅವರ ಮುದ್ದಿನ ನಾಯಿಯಾದ ‘ಶಿಬಾ ಇನು’ ಮರಿ ಹಾಕಿದೆ. ಆ ಮರಿಗೆ ‘ಫ್ಲಾಕಿ’ ಎಂದು ಹೆಸರಿಟ್ಟಿದ್ದಾರೆ ಮಸ್ಕ್. ಈ ಖುಷಿಗೆ ಟ್ವಿಟ್ವರ್ ಹಕ್ಕಿ ಲೊಗೊ ‘ಫ್ಲಾಕಿ’ ನಾಯಿಮರಿಯಾಗಿ ಬದಲಾಗಿದೆ.

ಎಲಾನ್ ಮಸ್ಕ್ ಅವರು ಟ್ವಿಟ್ವರ್‌ಗೆ ಕಳೆದ ವರ್ಷ ಅಕ್ಟೋಬರ್ 27ರಂದು ಅಧಿಕೃತವಾಗಿ ಖರೀದಿಸಿದ್ದರು. ಎಲಾನ್​ ಮಸ್ಕ್​ ಅವರು ಕೆಲ ತಿಂಗಳ ಹಿಂದೆ ತನ್ನ ಟ್ವಿಟರ್​ ಸಿಇಒ ಬದಲಾಗಿದ್ದಾರೆ ಎಂದು ಹೇಳಿ, ನಾಯಿ ಸಿಇಒ ಸೀಟ್​ನಲ್ಲಿ ಕುಳಿತುಕೊಂಡಿರುವಂತೆ ಫೋಟೋ ಶೇರ್ ಮಾಡಿದ್ದರು. ಇದೀಗ ನಾಯಿಯ ಫೋಟೋವನ್ನೆ ಲೋಗೋ ಆಗಿ ಬದಲಾಯಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *