ನವದೆಹಲಿ : ಕೇಂದ್ರ ಸರ್ಕಾರ 2023-24 ರ ಬಜೆಟ್ ನಲ್ಲಿ ಘೋಷಿಸಿರುವ ತೆರಿಗೆ ಬದಲಾವಣೆಗಳು ಏಪ್ರಿಲ್ 1 ರಿಂದ ಅನ್ವಯವಾಗುವಂತೆ ಅಮದು ಸುಂಕವನ್ನು 2023-24 ರ ಬಜೆಟ್ ನಲ್ಲಿ ಹೆಚ್ಚಿಸಿದೆ.ಜೊತೆಗೆ ಹೊಸ ನಿಯಮಾವಳಿಗಳು ಜಾರಿಯಾಗಲಿವೆ.ಇವೆಲ್ಲದರ ವಿವರ ಇಲ್ಲಿದೆ.
ಯಾವುದು ದುಬಾರಿ ? : ಎಲ್ ಇಡಿ ಬಲ್ಪ್,ಸಿಗರೆಟ್,ಖಾಸಗಿ ಜೆಟ್,ಹೆಲಿಕಾಪ್ಟರ್,ಹೈ-ಎಂಡ್ ಎಲೆಕ್ಟ್ರಾನಿಕ್ ವಸ್ತುಗಳು,ಬೆಳ್ಳಿ ಇಮಿಟೆಷನ್ ಜ್ಯುವೆಲ್ಲರಿ,ಚಿನ್ನದ ಗಟ್ಟಿ,ಪ್ಲಾಟಿನಮ್,ಹೈ-ಗ್ಲಾಸ್ ಪೇಪರ್,ಕಿಚನ್ ಚಿಮಿಣಿಗಳು,ವಿಟಮಿನ್ ಗಳು ದುಬಾರಿಯಾಗಲಿವೆ.ಸೆಕ್ಯುರಿಟಿ ಶುಲ್ಕವು 160 ರೂ.ಗಳಿಂದ 200 ರೂ ಗೆ ಏರಿಕೆಯಾಗಿದೆ.
ಕಾರುಗಳ ದರ ಹೆಚ್ಚಳ : ಟಾಟಾ ಮೋಟಾರ್ಸ್,ಹೀರೋ ಮೋಟೋಕಾರ್ಪ್ ಸೇರಿದಂತೆ ಆಟೋ ಮೊಬೈಲ್ ವಲಯದ ಕಂಪನಿಗಳು ಕಾರುಗಳ ದರಗಳನ್ನು ಏಪ್ರಿಲ್ 1 ರಿಂದ ಏರಿಸುತ್ತಿವೆ.BS6 ಮಾಲಿನ್ಯ ನಿಯಂತ್ರಣ ನಿಯಮಗಳ ಎರಡನೇ ಹಂತ ಏ.1ರಿಂದ ಜಾರಿಯಾಗುತ್ತಿದೆ.ಇದರಿಂದ ಎಲ್ಲಾ ಹೊಸ ವಾಹನಗಳು ಬಿಗಿ ನಿಯಮಗಳನ್ನು ಪಾಲಿಸಬೇಕಾಗುತ್ತದೆ.ಹೀಗಾಗಿ ಹೊಸ ಕಾರುಗಳು ತುಟ್ಟಿಯಾಗಬಹುದು.
ಎಕ್ಸ್-ರೇ ಮಶೀನ್ ದುಬಾರಿ : ಸರ್ಕಾರ ಎಕ್ಸ್-ರೇ ಮಶೀನ್ ಗಳ ಆಮದು ಸುಂಕದಲ್ಲಿ 2023 ರ ಏಪ್ರಿಲ್ 1 ರಿಂದ ಅನ್ವಯವಾಗುವಂತೆ 15% ಬೆಲೆ ಏರಿಕೆ ಮಾಡಿದೆ.2023 ರ ಹಣಕಾಸು ವಿಧೇಯಕದ ತಿದ್ದುಪಡಿಗೆ ಅನುಸಾರವಾಗಿ ಕಸ್ಟಮ್ಸ್ ಸುಂಕದಲ್ಲಿ ಬದಲಾವಣೆ ತರಲಾಗಿದೆ.ಪ್ರಸ್ತುತ ಪೋರ್ಟಬಲ್ ಎಕ್ಸ್-ರೇ ಮಶೀನ್ ಮತ್ತು ನಾನ್ ಪೋರ್ಟಬಲ್ ಎಕ್ಸ್-ರೇ ಮಶೀನ್ 10% ಆಮದು ಸುಂಕವನ್ನು ಹೊಂದಿದೆ.
ಇದನ್ನೂ ಓದಿ : ನಾಳೆಯಿಂದ ದುನಿಯಾ ಮತ್ತಷ್ಟು ದುಬಾರಿ – ದಿನಬಳಕೆ ವಸ್ತುಗಳ ಮೇಲೆ ಜಿಎಸ್ಟಿ ಬರೇ!
ಯಾವುದು ಅಗ್ಗ : ಮೊಬೈಲ್ ಫೋನ್,ಭಾರತದಲ್ಲಿ ಉತ್ಪಾದನೆಯಾಗುವ ಸ್ಮಾರ್ಟ್ ಫೋನ್ ನ ಬಿಡಿ ಭಾಗಗಳು,ಟಿ.ವಿ,ಆಟಿಕೆಗಳು,ಸೈಕಲ್,ಲಥಿಯಂ ಬ್ಯಾಟರಿ, ಎಲ್ ಇಡಿ ಟಿವಿ,ಎಲೆಕ್ಟ್ರಿಕ್ ವಾಹನ,ಕ್ಯಾಮೆರಾ ಲೆನ್ಸ್ ಮೇಲಿನ ಸುಂಕ ಇಳಿಕೆಯ ಪರಿಣಾಮ ಇವುಗಳ ದರ ಇಳಿಕೆ ನಿರೀಕ್ಷಿಸಲಾಗಿದೆ.