ಪಟ್ನಾ: ಅನುಚಿತ ವರ್ತನೆ ತೋರಿದ ಆರೋಪಕ್ಕೆ ಸಂಬಂಧಿಸಿದಂತೆ ವಿಧಾನಸಭಾ ಕಲಾಪದಿಂದ ಬಿಹಾರ ಬಿಜೆಪಿ ಶಾಸಕ ಲಖೇಂದ್ರ ರೌಷಣ್ ಅವರನ್ನು ಎರಡು ದಿನಗಳ ಕಾಲ ಅಮಾನತುಗಳಿಸಲಾಗಿದೆ.
ಸ್ಪೀಕರ್ ಅವಧ್ ಬಿಹಾರಿ ಚೌಧರಿ ಅವರ ನಿರ್ಧಾರವನ್ನು ಖಂಡಿಸಿ ಬಿಜೆಪಿ ಶಾಸಕರು ಗದ್ದಲ ಎಬ್ಬಿಸಿ ಕಲಾಪದಿಂದ ಹೊರನಡೆದಿದ್ದಾರೆ.
ಮೈಕ್ರೋಫೋನ್ ಸರಿಡಿಸುವಾಗ ಕಿತ್ತು ಬಂತು :
ಆದಾಗ್ಯೂ ಸ್ಪೀಕರ್ ಚೌಧರಿ ಅವರು ಅಮಾನತು ಮಾಡಿ ಆದೇಶಿಸಿದ ನಂತರ ಲಖೇಂದ್ರ ರೌಷಣ್ ಅವರು ಮಾತನಾಡಿ, ‘ಮೈಕ್ರೋಫೋನ್ ಕಿತ್ತು ಬಿಸಾಡಿಲ್ಲ’ ಎಂದು ವಾದ ಮಾಡಿದರು. ಕಲಾಪದಲ್ಲಿ ಭಾಗಿಯಾಗಿದ್ದೆ. ಪ್ರಶ್ನೋತ್ತರ ಅವಧಿಯಲ್ಲಿ ನನ್ನ ಸರದಿ ಬಂದಾಗ ಮೈಕ್ರೊಫೋನ್ ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಸರಿಪಡಿಸಲು ಪ್ರಯತ್ನಿಸಿದೆ. ಆಗ ಅದು ಕಿತ್ತು ಬಂತು’ ಎಂದು ಹೇಳಿದರು. ಸತ್ಯ ದೇವ್ ರಾಮ್ ಅವರು ನನ್ನ ವಿರುದ್ಧ ನಿಂದನಾತ್ಮಕ ಭಾಷೆ ಬಳಸಿದ್ದಾರೆ. ದುರ್ನಡತೆ ಆರೋಪದಲ್ಲಿ ನನ್ನನ್ನು ತಪ್ಪಿತಸ್ಥನಾಗಿ ಮಾಡಲಾಗಿದೆ. ದಲಿತ ಶಾಸಕನಿಗೆ ಈ ರೀತಿಯಾಗಿ ಕಿರುಕುಳ ನೀಡಬಾರದು ಎಂದು ಹೇಳಿದರು.
ಈ ನಡುವೆ ಸದನದಲ್ಲಿ ಕೆಲ ಕಾಲ ಗದ್ದಲ ಉಂಟಾಗಿ, ಬಿಜೆಪಿ ಸದಸ್ಯರು ಕಲಾಪ ಬಹಿಷ್ಕರಿಸಿ ಹೊರನಡೆದರು.