H3N2 : ಒಡಿಶಾದಲ್ಲಿ 59 ಹೊಸ ಪ್ರಕರಣ ಪತ್ತೆ

ಭುವನೇಶ್ವರ : ಕೊರೊನಾ ಅಬ್ಬರ ತಗ್ಗುತ್ತಿದ್ದಂತೆ ದೇಶದಲ್ಲಿ ಎಚ್3ಎನ್2 ಸಾಂಕ್ರಾಮಿಕದ ಅಬ್ಬರ ಹೆಚ್ಚುತ್ತಿದೆ. ಒಡಿಶಾದಲ್ಲಿ 59 ಹೊಸ ಪ್ರಕರಣಗಳು ಪತ್ತೆಯಾಗಿವೆ.

ಐಎಲ್‍ಐ ಮತ್ತು ಸಾರಿ ಪ್ರಕರಣಗಳ ಮೇಲೆ ಸರ್ಕಾರಗಳು ಕಣ್ಗಾವಲನ್ನು ತೀವ್ರಗೊಳಿಸಲಾಗಿದೆ. ಹಲವು ರಾಜ್ಯಗಳಲ್ಲಿ ಹೆಚ್3ಎನ್2 ಪ್ರಕರಣಗಳ ಸಂಖ್ಯೆ ತೀವ್ರವಾಗಿ ಏರುತ್ತಿದೆ. ಹಾಗಾಗಿ ತೀವ್ರವಾದ ತೀವ್ರವಾದ ಜ್ವರ ಹಾಗೂ ಉಸಿರಾಟದ ಸಮಸ್ಯೆಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಅನುಸರಿಸಿದ ಮುಂಜಾಗ್ರತಾ ಕ್ರಮಗಳನ್ನೇ ಮುಂದುವರೆಸಲು ಸೂಚಿಸಲಾಗಿದೆ.

ಡಿಸೆಂಬರ್ ನಿಂದ ಮಾರ್ಚ್‍ವರೆಗೆ ಮಕ್ಕಳು ಮತ್ತು ವೃದ್ಧರಲ್ಲಿ ಕಂಡುಬರುವ ಸಾಮಾನ್ಯ ಜ್ವರ, ಕೆಮ್ಮು ಮತ್ತು ಮೂಗು ಸೋರುವಿಕೆ ಹಾಂಗ್‍ಕಾಂಗ್ ರೋಗ ಲಕ್ಷಣಗಳಾಗಿರಬಹುದು, ಕೊಮೊರ್ಬಿಡಿಟಿ ಇರುವ ವ್ಯಕ್ತಿಗಳಲ್ಲಿ ಅಥವಾ ವಯಸ್ಸಾದವರಲ್ಲಿ ಸೋಂಕು ಕಾಣಿಸಿಕೊಳ್ಳಬಹುದು ಎಂದು ಶಂಕಿಸಲಾಗಿದೆ.
ರೋಗ ಲಕ್ಷಣಗಳಿರುವವರು ಸ್ವಯಂ ಚೇತರಿಸಿಕೊಳ್ಳುತ್ತಾರೆ. ಕೆಲವು ಪ್ರಕರಣಗಳಲ್ಲಿ ಚಿಕಿತ್ಸೆ ಅಗತ್ಯವಾಗಬಹುದು. ಹೀಗಾಗಿ ನಿರಂತರವಾಗಿ ಕೆಮ್ಮು, ಜ್ವರದಿಂದ ಬಳಲುವವರು ವೈದ್ಯರನ್ನು ಸಂಪರ್ಕಿಸುವಂತೆ ಸಲಹೆ ನೀಡಲಾಗಿದೆ.

ಎಚ್‌3 ಎನ್‌2 ವೈರಸ್‌ ನ ಲಕ್ಷಣಗಳೇನು ? 
ಎಚ್‌3 ಎನ್‌2 ವೈರಸ್‌ ಸೋಂಕು ತಗುಲಿದ ಜನರಲ್ಲಿ ಶೀತ, ನೆಗಡಿಯ ಜತೆಗೆ ಕೆಮ್ಮು ಕಾಣಿಸಿಕೊಳ್ಳುತ್ತದೆ. ತೀವ್ರವಾದ ಮೈ ಕೈ ನೋವು, ಮತ್ತು 102-103 ಡಿಗ್ರಿಯಷ್ಟು ಜ್ವರ ಕೂಡ ಕಾಣಿಸಿಕೊಳ್ಳಬಹುದು. ಬೆಳಗ್ಗೆ ಹಾಸಿಗೆಯಿಂದ ಮೇಲೇಳಲಾರದಷ್ಟು ಮೈ ಕೈ ನೋವಿನ ತೀವ್ರತೆ ಇರುತ್ತದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಆ್ಯಂಟಿ ಬಯೋಟಿಕ್‌ ಮಾತ್ರೆಗಳಿಂದ ಎಚ್‌2 ಎನ್‌3 ಸೋಂಕು ನಿಯಂತ್ರಿಸಲು ಸಾಧ್ಯವಿಲ್ಲಎಂಬುದು ಪರೀಕ್ಷೆಯಿಂದ ಖಚಿತಪಟ್ಟಿದೆ. ಹಾಗಾಗಿ ಟಾಮಿಫ್ಲೂಎಂಬ ವೈರಸ್‌ ನಿರೋಧಕ ಮಾತ್ರೆಗಳನ್ನು ಎಚ್‌2 ಎನ್‌3 ಸೋಂಕಿನ ಚಿಕಿತ್ಸೆಗೆ ಸದ್ಯ ಬಳಕೆ ಮಾಡಲಾಗುತ್ತಿದೆ ಎಂದು ಜಿಲ್ಲಾಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಕ್ಕಳು ಮತ್ತು ವಯೋವೃದ್ಧರಿಗೆ ಈ ಸೋಂಕು ಅಪಾಯಕಾರಿ : 
ಇಂಡಿಯನ್‌ ಕೌನ್ಸಿಲ್‌ ಆಫ್‌ ಮೆಡಿಕಲ್‌ ರಿಸರ್ಚ್ (ಐಸಿಎಂಆರ್‌) ವಿಜ್ಞಾನಿಗಳ ಪ್ರಕಾರ ಇನ್‌ಫ್ಲುಯೆಂಜಾ ವೈರಸ್‌ಗಳಲ್ಲಿ ಪ್ರಮುಖವಾಗಿ ಎ,ಬಿ, ಸಿ,ಡಿ ಈ ನಾಲ್ಕು ವಿಧಗಳಿವೆ. ಈ ಪೈಕಿ ಇನ್‌ಫ್ಲುಯೆಂಜಾ ಎ ವೈರಸ್‌ನಲ್ಲಿ ಹೆಮಾಗ್ಲುಟಿನಿನ್‌ (ಎಚ್‌) ಮತ್ತು ನ್ಯುರಾಮಿನಿಡೇಸ್‌ (ಎನ್‌)ನ ಎಂಬ ರಾಸಾಯನಿಕಗಳ ಸಂಯೋಜನೆಯ ಆಧಾರದಲ್ಲಿ ಹಲವು ರೂಪಾಂತರಿ ತಳಿಗಳಿದ್ದು ಇದರಲ್ಲಿಎಚ್‌3 ಎನ್‌2 ವೈರಸ್‌ ತೀವ್ರ ಪ್ರಸರಣ ಹೊಂದುತ್ತಿದ್ದು ಜನರಲ್ಲಿಅನಾರೋಗ್ಯಕ್ಕೆ ಕಾರಣವಾಗುತ್ತಿದೆ. ವಿಪರೀತ ನೆಗಡಿ, ಕೆಮ್ಮು ಉಂಟಾಗುವುದರಿಂದ ಉಸಿರಾಟ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರಬಲ್ಲದು. ಹಾಗಾಗಿ 5 ವರ್ಷದೊಳಗಿನ ಮಕ್ಕಳು ಮತ್ತು ವಯೋವೃದ್ಧರಿಗೆ ಈ ಸೋಂಕು ಹೆಚ್ಚು ಅಪಾಯಕಾರಿ ಎಂದು ವೈದ್ಯರು ಅಭಿಪ್ರಾಯಪಡುತ್ತಾರೆ.

Donate Janashakthi Media

Leave a Reply

Your email address will not be published. Required fields are marked *