ನವದೆಹಲಿ : ಸಿಬಿಐ ಎದುರು ವಿಚಾರಣೆಗೆ ಹಾಜರಾಗಲು ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಮತ್ತೆ ನಿರಾಕರಿಸಿದ್ದಾರೆ.
ಜಮೀನು ಮತ್ತು ಉದ್ಯೋಗಕ್ಕಾಗಿ ಹಗರಣಕ್ಕೆ ಸಂಬಂಸಿದಂತೆ ಶನಿವಾರ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ನೋಟೀಸ್ ನೀಡಿತ್ತು ಆದರೂ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಇಂದು ವಿಚಾರಣೆಗೆ ಹಾಜರಾಗಿಲ್ಲ.
ಈ ಹಿಂದೆ ಮಾರ್ಚ್ 4 ರಂದು ಯಾದವ್ ಅವರನ್ನು ವಿಚಾರಣೆಗೆ ಕರೆಯಲಾಗಿತ್ತು ಆದರೆ ಅವರು ಸಿಬಿಐ ಅಕಾರಿಗಳ ಮುಂದೆ ಹಾಜರಾಗಿರಲಿಲ್ಲ, ನಂತರ ಇಂದಿಗೆ ಹೊಸ ದಿನಾಂಕ ನಿಗದಿಪಡಿಸಿದ್ದರು ಅವರು ವಿಚಾರಣೆಗೆ ಬಂದಿಲ್ಲ. ಸಿಬಿಐ ಇತ್ತೀಚೆಗೆ ಹಗರಣಕ್ಕೆ ಸಂಬಂಸಿದಂತೆ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಮತ್ತು ಅವರ ಪತ್ನಿ ರಾಬ್ರಿ ದೇವಿ ಅವರನ್ನು ಕ್ರಮವಾಗಿ ದೆಹಲಿ ಮತ್ತು ಪಾಟ್ನಾದಲ್ಲಿ ವಿಚಾರಣೆಗೊಳಪಡಿಸಿತ್ತು.
ಇದನ್ನೂ ಓದಿ : ಉದ್ಯೋಗ ಭರವಸೆ: ನನ್ನನ್ನು ಪ್ರಶ್ನಿಸುವಂತೆ ಬಿಜೆಪಿಯವರನ್ನೂ ಪ್ರಶ್ನಿಸಿ ಎಂದ ತೇಜಸ್ವಿ ಯಾದವ್
ಈ ಪ್ರಕರಣವು ಯಾದವ್ ಕುಟುಂಬ ಮತ್ತು ಅದರ ಸಹಚರರಿಗೆ ಭೂಮಿ ಪಾರ್ಸೆಲ್ಗಳನ್ನು ಉಡುಗೊರೆಯಾಗಿ ಅಥವಾ ಅಗ್ಗದ ದರದಲ್ಲಿ ಮಾರಾಟ ಮಾಡುವುದಕ್ಕೆ ಪ್ರತಿಯಾಗಿ ರೈಲ್ವೆಯಲ್ಲಿ ಉದ್ಯೋಗವನ್ನು ನೀಡಲಾಗಿತ್ತು ಎಂದು ಆರೋಪಿಸಲಾಗಿದೆ.