ಮುಂಬೈ: ಮಹಿಳೆಯೊಬ್ಬಳು ತನ್ನ ಪತಿ, ಅತ್ತೆ, ಮಾವ ಸೇರಿದಂತೆ ಕುಟುಂಬದವರ ವಿರುದ್ಧ ದಾಖಲಿಸಿದ್ದು, ತನ್ನ ಮುಟ್ಟಿನ(ಋತುಚಕ್ರದ) ರಕ್ತವನ್ನು ಸಂಗ್ರಹಿಸಿ ಅಘೋರಿ ಪೂಜೆ ಮಾಡುವವರಿಗೆ ರೂ. 50 ಸಾವಿರಕ್ಕೆ ಮಾರಾಟ ಮಾಡಿದ್ದಾರೆ ಎಂದು ದೂರಿದ್ದು, 2019ರಲ್ಲಿ ಮದುವೆಯಾದಾಗಿನಿಂದಲೂ ಪತಿ ಸೇರಿದಂ ಕುಟುಂಬದವರು ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದರು ಎಂದಿದ್ದಾಳೆ.
ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. 28 ವರ್ಷದ ಸಂತ್ರಸ್ತ ಮಹಿಳೆಯ ದೂರನನ್ವಯ ಅತ್ತೆ, ಮಾವ, ಸಹೋದಳಿಯ ಸೇರಿದಂತೆ ಏಳು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ವಿಶ್ರಾಂತವಾಡಿ ಪೊಲೀಸರು ಪ್ರಕರಣದ ಬಗ್ಗೆ ತನಿಖೆಯನ್ನು ಕೈಗೊಳ್ಳಲಾಗಿದೆ ಮತ್ತು ಹೆಚ್ಚಿನ ತನಿಖೆಗಾಗಿ ಬೀಡ್ ಪೊಲೀಸರಿಗೆ ವರ್ಗಾಯಿಸಲಾಗಿದೆ ಎಂದು ವರದಿಯಾಗಿದೆ.
ಇದನ್ನು ಓದಿ: ಮಳೆಗಾಗಿ ಮೌಢ್ಯತೆಗೆ ಮಾರು ಹೋದ ಜನ: ಹೂತಿದ್ದ ಶವದ ಮೇಲೆ ನೀರು ಹಾಕಿ ಪ್ರಾರ್ಥನೆ
ತನ್ನನ್ನು ಪತಿ, ಸೋದರಮಾವ, ಸೋದರಳಿಯ ಹಾಗೂ ನೆರೆಹೊರೆಯವರು ಅತ್ಯಂತ ಬಲವಂತವಾಗಿ, ದೈಹಿಕ ಹಿಂಸೆಯ ಮೂಲಕ ಅಘೋರಿ ಪೂಜೆಗಾಗಿ ಋತುಚಕ್ರದ ರಕ್ತವನ್ನು ತೆಗೆದುಕೊಂಡು ಬಾಟಲಿನಲ್ಲಿ ತುಂಬಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಈ ಪ್ರಕರಣವು 2022ರಲ್ಲಿ ತನ್ನ ಪತಿಯ ಕುಟುಂಬ ವಾಸವಾಗಿರುವ ಬೀಡ್ ಜಿಲ್ಲೆಯಲ್ಲಿ ನಡೆದಿದೆ. ಸಂತ್ರಸ್ತ ಮಹಿಳೆಯೂ ತನ್ನ ಮೇಲಿನ ದೈಹಿಕ ಹಿಂಸಾಚಾರದ ಬಗ್ಗೆ ಪುಣೆಯಲ್ಲಿರುವ ತನ್ನ ಪೋಷಕರಿಗೆ ಮೊದಲು ತಿಳಿಸಿದ್ದಾಳೆ. ನಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಅಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪೊಲೀಸರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ(ಐಪಿಸಿ) ಸೆಕ್ಷನ್ 354 (ಎ), 377, 504, 498 (ಎ), 323 ಮತ್ತು 34 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಕಂಕರ್ ಮಾತನಾಡಿ, ಮಾನವೀಯತೆಗೆ ಮಸಿ ಬಳಿಯುವ ನಾಚಿಕೆಗೇಡಿನ ಘಟನೆ ಇದಾಗದೆ. ಪುಣೆಯಲ್ಲಿ ವರದಿಯಾದ ಘಟನೆಯನ್ನು ಆಯೋಗವು ಗಂಭೀರವಾಗಿ ಪರಿಗಣಿಸಲಿದೆ ಮತ್ತು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪುಣೆಯಂತಹ ಪ್ರಗತಿಪರ ನಗರಗಳಲ್ಲಿ ಮಹಿಳೆಯರು ಇನ್ನೂ ಇಂತಹ ಅಪರಾಧಗಳಿಗೆ ಬಲಿಯಾಗುತ್ತಿರುವುದು ಆಘಾತಕಾರಿ’ ಎಂದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ