ಏಳು ವರ್ಷ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವೃದ್ಧ

Please follow and like us:

ನವದೆಹಲಿ :60 ವರ್ಷದ ವೃದ್ಧನೊಬ್ಬ 7 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ಗುಲಾಬಿ ಬಾಗ್‌ ಪ್ರದೇಶದಲ್ಲಿ ನಡೆದಿದೆ.
ಸದ್ಯ, ಆರೋಪಿಯನ್ನು ಪೊಲೀಸಿನವರು ಬಂಧಿಸಿದ್ದಾರೆ.

ಆರೋಪಿ  ಬದರಿನಾಥ್‌ ಎಂಬ ವ್ಯಕ್ತಿಯು ಬಾಲಕಿಯ ಬಟ್ಟೆ ತೆಗೆದು ಆಕೆಯ ಖಾಸಗಿ ಅಂಗಗಳನ್ನು ಮುಟ್ಟಿದ್ದಾನೆ  ಎಂದು ಬಾಲಕಿಯು ತನ್ನ ತಾಯಿಯ ಬಳಿ ಹೇಳಿಕೊಂಡಿದ್ದು ಘಟನಾ ಸಂಬಂಧ ಸಂತ್ರಸ್ತೆ ಮತ್ತು ಆಕೆಯ ತಾಯಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 2ನೇ ತರಗತಿ ಓದುತ್ತಿರುವ ತನ್ನ ಏಳು ವರ್ಷದ ಮಗಳ ಮೇಲೆ ನೆರೆ ಮನೆಯಲ್ಲಿ ವಾಸವಾಗಿದ್ದ 60 ವರ್ಷ ವಯಸ್ಸಿನ ಬದರಿನಾಥ್ ಎಂಬಾತ 8–10 ದಿನಗಳಿಂದ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಸಂತ್ರಸ್ತೆ ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ : ಲೈಂಗಿಕ ದೌರ್ಜನ್ಯದ ವಿರುದ್ಧ ರಾಜ್ಯ ಮಟ್ಟದ ಸಮಾವೇಶ

ಭಾರತೀಯ ದಂಡ ಸಂಹಿತೆ 376 ಮತ್ತು ಪೋಕ್ಸೋ ಕಾಯಿದೆ 6ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಅಪರಾಧದ ಸ್ಥಳ ಪರಿಶೀಲನೆಗಾಗಿ ವಿಧಿ ವಿಜ್ಞಾನ ತಂಡವನ್ನು ಕಳುಹಿಸಲಾಗಿದೆ. ಬಾಲಕಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Please follow and like us:
Donate Janashakthi Media

Leave a Reply

Your email address will not be published. Required fields are marked *