ಕೆವೈಎಸ್‌ ಜೋಡಣೆ ಸಮಸ್ಯೆ; ಶೇ. 25ರಷ್ಟು ಮಂದಿಗೆ ತಲುಪಿಲ್ಲ ಪಿಎಂ ಕಿಸಾನ್‌ ಹಣ

ಬೆಂಗಳೂರು: 2022-2023ನೇ ಸಾಲಿನ ಆರ್ಥಿಕ ವರ್ಷದ ಮೂರನೇ ಕಂತು ಪಿಎಂ ಕಿಸಾನ್‌ ಹಣ ರೈತರ ಖಾತೆಗೆ ಸೇರಿದ್ದು, ಕಳೆದ ಏಪ್ರಿಲ್‌ ನಿಂದ ಜುಲೈ ವರೆಗೆ ಬಿಡುಗಡೆಯಾದ ಮೊತ್ತಕ್ಕೂ ಈ ಬಾರಿ ಡಿಸೆಂಬರ್‌ ನಿಂದ ಮಾರ್ಚ್‌ ವರೆಗೆ ಬಿಡುಗಡೆಯಾದ ಮೊತ್ತಕ್ಕೂ ಭಾರೀ ವ್ಯತ್ಯಾಸವಾಗಿದೆ. ಈ ಪ್ರಕಾರ ಸರಿಸುಮಾರು ಶೇ. 25ರಷ್ಟು ಫನಾನುಭವಿಗಳು ವಂಚಿತರಾಗಿದ್ದಾರೆ ಎಂದು ವರದಿಯಾಗಿದೆ.

ಕೇಂದ್ರದ ಬಿಜೆಪಿ ಸರ್ಕಾರ 2018-19ರ ಡಿಸೆಂಬರ್‌ ನಿಂದ ಮಾರ್ಚ್‌ ವರೆಗಿನ ಪಿಎಂ ಕಿಸಾನ್‌ ಯೋಜನೆ ಮೂಲಕ ರೂ. 2,000 ಮೊತ್ತವನ್ನು ರೈತರ ಬ್ಯಾಂಕ್‌ ಖಾತೆಗೆ ನೇರವಾಗಿ ವರ್ಗಾವಣೆ ಮಾಡುವ ಯೋಜನೆಯನ್ನು ಜಾರಿಗೊಳಿಸಲಾಯಿತು.

ಇದನ್ನು ಓದಿ: ಪಿಎಂ ಕಿಸಾನ್ ಸಮ್ಮಾನ್ : 12ನೇ ಕಂತಿನ ಹಣ ಬಿಡುಗಡೆ

ಈ ವರೆಗೆ 13 ಬಾರಿ ಹಣ ವರ್ಗಾವಣೆಯಾಗಿದ್ದು, ಏಪ್ರಿಲ್‌—ಜುಲೈ 2022-23ರ ಅವಧಿಯಲ್ಲಿ 11,27,72,489 ಫಲಾನುಭವಿಗಳಿಗೆ ಹಣ ವರ್ಗಾವಣೆಯಾಗಿದೆ. ಈ ಬಾರಿ ಅಂದರೆ 13ನೇ ಕಂತಿನ ಮೊತ್ತ 8,53,80,362 ಮಂದಿ ಮಾತ್ರ ತಲುಪಿಸಲಾಗಿದೆ ಎಂದು ಪಿಎಂ ಕಿಸಾನ್‌ ಯೋಜನೆಯ ಅಂತರ್ಜಾಲ ತಾಣದಲ್ಲಿ ಪ್ರಕಟಿಸಲಾಗಿದೆ. 2,73,92,127ರಷ್ಟು ಫಲಾನುಭವಿಗಳಿಗೆ ಹಣ ಬಿಡುಗಡೆಯಾಗಿಲ್ಲ.

ಏಪ್ರಿಲ್​ನಿಂದ ಜುಲೈವರೆಗಿನ ಅವಧಿಗೆ ಬಿಡುಗಡೆಯಾದ ಕಂತಿನ ಹಣಕ್ಕೆ ಹೋಲಿಸಿದರೆ ಈ 13ನೇ ಕಂತಿನ ಹಣ ಪಡೆದವರ ಸಂಖ್ಯೆಯಲ್ಲಿ ಶೇ. 25ರಷ್ಟು ಕಡಿಮೆ ಆಗಿದೆ.

ಇದನ್ನು ಓದಿ: ರೈತರು ಮತ್ತು ಜನತೆಗೆ ಸಂಸತ್ತಿನಲ್ಲಿ ಪ್ರಧಾನ ಮಂತ್ರಿಗಳಿಂದ ಅವಮಾನ

ಕಳೆದ ವರ್ಷದ ಮೇ 31ರಂದು ಬಿಡುಗಡೆಯಾದ 11ನೇ ಕಂತಿನ ಹಣ ಒಟ್ಟು 21,000 ಕೋಟಿ ರೂ. ಈ ಮೂಲಕ ಪ್ರತಿಯೊಬ್ಬ ಫಲಾನುಭವಿ ರೈತರಿಗೆ ರೂ. 2000 ಮೊತ್ತವನ್ನು ಅವರ ಬ್ಯಾಂಕ್‌ ಖಾತೆಗಳಿಗೆ ವರ್ಗಾವಣೆ ಮಾಡಲಾಗಿತ್ತು. 13ನೇ ಕಂತಿಗೆ ಬಿಡುಗಡೆಯಾದ ಹಣ 16,800 ಕೋಟಿ ರೂ ಮಾತ್ರ. ಅಂದರೆ ಬಹಳಷ್ಟು ಫಲಾನುಭವಿಗಳು ಪಟ್ಟಿಯಿಂದ ಕೈಬಿಟ್ಟುಹೋಗಿರುವುದು ಸ್ಪಷ್ಟವಾಗಿದೆ.

ಪಿಎಂ ಕಿಸಾನ್ ಯೋಜನೆಯಡಿ ಹಣ ವರ್ಗಾವಣೆಯಾಗದಿರುವ ಬಗ್ಗೆ ಸರ್ಕಾರದಿಂದ ಅಧಿಕೃತವಾಗಿ ಕಾರಣ ಕೊಡಲಾಗಿಲ್ಲ. ಆದರೆ ಈ ಬಾರಿಯ ಕಂತಿನ ಹಣ ಬಿಡುಗಡೆಗೆ ಮುನ್ನ ಎಲ್ಲಾ ಫಲಾಭವಿಗಳಿಂದ ಕೆವೈಸಿ ಅಪ್​ಡೇಟ್ ಮಾಡಲು ಸರ್ಕಾರ ನಿರ್ದೇಶಿಸಿತ್ತು. ಸರಿಯಾಗಿ ಕೆವೈಸಿ ಪರಿಷ್ಕರಿಸದ ರೈತರಿಗೆ 13ನೇ ಕಂತಿನ 2 ಸಾವಿರ ರೂ ಹಣ ಕೈಸೇರಿಲ್ಲ ಎಂದು ಹೇಳಲಾಗುತ್ತಿದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *