ರಾಜ್ಯದ 26 ಜನರಲ್ಲಿ ಹೆಚ್​3ಎನ್2 ಸೋಂಕು; ಮಾಸ್ಕ್​ ಕಡ್ಡಾಯ-ಎಚ್ಚರಿಕೆ ವಹಿಸಿ: ಸಚಿವ ಡಾ ಸುಧಾಕರ್​​

ಬೆಂಗಳೂರು: ರಾಜ್ಯದಲ್ಲಿ 26 ಜನರಲ್ಲಿ ಹೆಚ್​3ಎನ್2 ಸೋಂಕು ಪತ್ತೆಯಾಗಿದೆ. ಈ ಸೋಂಕು 15 ವರ್ಷದ ಒಳಗಿನ ಮಕ್ಕಳಿಗೆ ಹೆಚ್ಚು ಅಪಾಯಕಾರಿಯಾಗಿದ್ದು, 60 ವರ್ಷ ಮೆಲ್ಪಟ್ಟವರಿಗೂ ಇದು ಸುಲಭವಾಗಿ ಹರಡುತ್ತದೆ. ಹಾಗಾಗಿ ರಾಜ್ಯದ ಜನತೆ ಹೆಚ್ಚು ಜಾಗೃತಿಯನ್ನು ವಹಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ ಸುಧಾಕರ್‌ ಹೇಳಿದ್ದಾರೆ.

ವಿಧಾನಸೌಧದಲ್ಲಿ ಹೆಚ್​3ಎನ್2 ಸೋಂಕು ನಿಯಂತ್ರಣ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಕುರಿತು ತಜ್ಞರು, ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ತಾಂತ್ರಿಕ ಸಲಹಾ ಸಭೆಯನ್ನು ನಡೆಸಿದ ಸಚಿವರು ಬಳಿಕ ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ಹಂಚಿಕೊಂಡಿದ್ದಾರೆ.

ಇದನ್ನು ಓದಿ: ದೇಶದಲ್ಲಿ ಕೆಮ್ಮು, ಜ್ವರ ಹೆಚ್ಚಳಕ್ಕೆ ಹೆಚ್‌3ಎನ್‌2 ಕಾರಣ; ಅವೈಜ್ಞಾನಿಕ ರೋಗನಿರೋಧಕಗಳ ಬಳಕೆ ಬೇಡ-ಐಸಿಎಂಆರ್‌

ಗರ್ಭಿಣಿಯರು ಹೆಚ್ಚು ಎಚ್ಚರಿಕೆ ವಹಿಸಬೇಕು.  ಸೀನುವಾಗ ಕೆಮ್ಮುವಾಗ ಮುಂಜಾಗೃತೆಗಳ ಕಡೆ ಗಮನಹರಿಸಬೇಕೆಂದು ಹೇಳಿರುವ ಸಚಿವರು, ಕಳೆದ 6 ತಿಂಗಳಿನಿಂದ ಆರೋಗ್ಯ ಸಿಬ್ಬಂದಿಗಳು ಮಾಸ್ಕ್ ಧರಿಸುತ್ತಿಲ್ಲ. ಹೀಗಾಗಿ ಇವತ್ತಿನಿಂದಲೇ ರಾಜ್ಯದ ಆರೋಗ್ಯ ಇಲಾಖೆ ಹಾಗೂ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಮಾಸ್ಕ್ ಹಾಕಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಜನರು ವೈಯಕ್ತಿಕವಾಗಿ ಚಿಕಿತ್ಸೆ ತೆಗೆದುಕೊಳ್ಳುವುದು ಸೂಕ್ತವಲ್ಲ. ಅತಿಯಾಗಿ ರೋಗನಿರೋಧಕ ಔಷಧಿಗಳನ್ನು ತೆಗೆದುಕೊಳ್ಳದಿರಿ. ರಾಜ್ಯದಲ್ಲಿ ಔಷಧಿಯ ಕೊರತೆ ಇಲ್ಲ. ಬೇಸಿಗೆಯಲ್ಲಿ ತಾಪಮಾನ ಹೆಚ್ಚಾಗಿರುತ್ತೆ. ಹೀಗಾಗಿ ಮುನ್ನೆಚ್ಚರಿಕೆ ವಹಿಸಬೇಕಿದೆ. ಬೇಸಿಗೆ ಪ್ರಸಕ್ತ ದಿನಗಳಲ್ಲಿ ಸಾಧ್ಯವಾದಷ್ಟು ಬಿಸಿಲಿನಲ್ಲಿ ಅನಗತ್ಯವಾಗಿ ಓಡಾಡುವುದನ್ನು ಕಡೆಮೆ ಮಾಡಬೇಕು. ಇಲ್ಲದಿದ್ದರೇ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ ಎಂದು ಸೂಚನೆ ನೀಡಿದ್ದಾರೆ.

ಆರೋಗ್ಯ ಇಲಾಖೆ ಇಂದು ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಿ ಎಂದು ತಿಳಿಸಿರುವ ಆರೋಗ್ಯ ಸಚಿವ ಡಾ ಸುಧಾಕರ್‌, ಹೆಚ್​3ಎನ್2 ಕೂಡಾ ಕೋವಿಡ್ ಪರೀಕ್ಷೆಯಂತೆಯೇ ಕ್ರಮಗಳನ್ನು ಮಾಡಲಾಗುವುದು. ಸ್ವ್ಯಾಬ್​ ಟೆಸ್ಟ್ ಮೂಲಕ ಹೆಚ್​3ಎನ್2 ವೈರಸ್ ಪತ್ತೆ ಹಚ್ಚಬಹುದು. ಈ ಸೋಂಕಿನಿಂದ ಗುಣಮುಖರಾಗಬಹುದು ಎಂದು ತಿಳಿಸಿದರು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *