ಬೆಂಗಳೂರು: ರಾಜ್ಯ ಸರ್ಕಾರದ ಬಹು ನಿರೀಕ್ಷಿತ ʻನಮ್ಮ ಕ್ಲಿನಿಕ್ʼಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಜನರು ಬೆಂಬಲ ನೀಡುತ್ತಿಲ್ಲ ಎಂದು ವರದಿಯಾಗಿದೆ. ಬಡವರು, ಕೂಲಿ ಕಾರ್ಮಿಕರ ಆರೋಗ್ಯ ದೃಷ್ಟಿಯಿಂದ ನಗರದ ಹಲವಾರು ಪ್ರದೇಶಗಳಲ್ಲಿ 108 ನಮ್ಮ ಕ್ಲಿನಿಕ್‍ಗಳನ್ನು ಸ್ಥಾಪಿಸಲಾಗಿದೆಯಾದರೂ ಸಾಮಾನ್ಯ ಜನರು ಇತ್ತ ಕಡೆ ತಿರುಗಿಯೂ ನೋಡುತ್ತಿಲ್ಲ ಎನ್ನಲಾಗಿದೆ.
ಆರೋಗ್ಯ ದೃಷ್ಟಿಯಿಂದ ನಗರದಲ್ಲಿ ಸ್ಥಾಪಿಸಲಾಗಿರುವ ಬಹು ನಿರೀಕ್ಷಿತ ನಮ್ಮ ಕ್ಲಿನಿಕ್ ನತ್ತ ರೋಗಿಗಳು ಮಾತ್ರ ಮುಖ ಮಾಡುತ್ತಿಲ್ಲ ಹೀಗಾಗಿ ರಾಜ್ಯ ಸರ್ಕಾರದ ಯೋಜನೆ ಹಳ್ಳ ಹಿಡಿತ ಎಂಬ ಅನುಮಾನ ಮೂಡಿದೆ.
ಇದನ್ನು ಓದಿ: ಬಿಬಿಎಂಪಿ: ನಮ್ಮ ಕ್ಲಿನಿಕ್ ಆರಂಭಕ್ಕೆ ಸಿಬ್ಬಂದಿಗಳ ಕೊರತೆ-ಉದ್ಯೋಗ ಖಾಲಿ ಇದೆ ಅಂದರೂ ಬರುತ್ತಿಲ್ಲ
108 ಪ್ರದೇಶಗಳಲ್ಲಿ ಆರಂಭವಾಗಿರುವ ನಮ್ಮ ಕ್ಲಿನಿಕ್‍ಗಳಿಗೆ ರೋಗಿಗಳು ಬರುತ್ತಿಲ್ಲ. ಹೀಗಾದರೆ ಕ್ಲಿನಿಕ್ ನಡೆಸುವುದು ಹೇಗೆ ಎಂಬ ಪೇಚಿಗೆ ಬಿಬಿಎಂಪಿ ಸಿಲುಕಿಕೊಂಡಿದೆ. ಜನರ ಮನ ಗೆಲ್ಲಲು ಸಾಧ್ಯವಾಗದಿದ್ದರೂ ಬಿಬಿಎಂಪಿಯವರು 108 ನಮ್ಮ ಕ್ಲಿನಿಕ್‍ಗಳನ್ನು ಸ್ಥಾಪಿಸಿ ಕೋಟಿ ಕೋಟಿ ಹಣ ಲೂಟಿ ಹೊಡದರಾ ಎಂಬ ಅನುಮಾನ ಕಾಡಲಾರಂಭಿಸಿದೆ.
ನಮ್ಮ ಕ್ಲಿನಿಕ್‍ಗಳಿಗೆ ರೋಗಿಗಳು ಬಾರದಿರಲು ಕಾರಣ ಏನು ಅಂತಾ ಹುಡುಕುತ್ತಾ ಹೋದರೆ ಅಲ್ಲಿನ ಸಿಬ್ಬಂದಿಗಳ ನಿರ್ಲಕ್ಷ್ಯವೇ ಕಾರಣ ಎಂಬುದು ತಿಳಿದುಬಂದಿದೆ. ಬೆಳಿಗ್ಗೆ 9 ಗಂಟೆಗೆ ನಮ್ಮ ಕ್ಲಿನಿಕ್‍ಗಳು ಆರಂಭವಾದರೆ ಮಧ್ಯಾಹ್ನ 1.30ಕ್ಕೆ ಮುಚ್ಚಲಾಗುತ್ತಿದೆ. ಮತ್ತೆ 2 ಗಂಟೆಯಿಂದ 4.30ರವರೆಗೆ ಮಾತ್ರ ತೆರೆಯದಿರುತ್ತದೆ.
ಪರಿಸ್ಥಿತಿ ಹೀಗಿರುವಾಗ ಬೆಳಿಗ್ಗೆಯಿಂದ ಸಂಜೆವರೆಗೆ ದಿನಗೂಲಿ ಮಾಡಿಕೊಂಡು ಬರುವಂಥ ಕೂಲಿ ಕಾರ್ಮಿಕರು 4.30ರೊಳಗೆ ಕ್ಲಿನಿಕ್‍ಗಳಿಗೆ ಬರೋದಾದರೂ ಹೇಗೆ ಎಂಬ ಪ್ರಶ್ನೆಗಳು ಮೂಡಿದೆ.
ಐಟಿ ಬಿಟಿ ಸಂಸ್ಥೆಗಳಂತೆ ಬಡವರ ಆರೋಗ್ಯ ರಕ್ಷಿಸುವ ಉದ್ದೇಶದಿಂದ ಸ್ಥಾಪಿಸಿರುವ ನಮ್ಮ ಕ್ಲಿನಿಕ್‍ಗಳನ್ನು ಸಂಜೆ 4.30ಕ್ಕೆ ಬಂದ್ ಮಾಡುವ ಬದಲು ರಾತ್ರಿ ಎಂಟು ಗಂಟೆ ಇಲ್ಲವೇ 9 ಗಂಟೆವರೆಗೆ ತೆರೆದಿಡುವಂತೆ ಈಗಾಗಲೇ ಹಲವಾರು ಮಂದಿ ಮನವಿ ಮಾಡಿಕೊಂಡಿದ್ದಾರೆ.
ಬಿಬಿಎಂಪಿಯವರು ಈಗಾಗಲೇ 1900ಕ್ಕೂ ಹೆಚ್ಚು ಮಂದಿಯನ್ನು ನೇಮಕ ಮಾಡಿಕೊಂಡಿರುವುದು ಕಂಡು ಬಂದಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ