ನವದೆಹಲಿ: ಒಂದೇ ದಿನ ಎರಡು ಬೇರೆ ಬೇರೆ ಸ್ಥಳಗಳಲ್ಲಿ ಸೇನಾ ವಾಯಪಡೆಯು 3 ಯುದ್ಧ ವಿಮಾನಗಳು ಅಪಘಾತಕ್ಕೀಡಾಗಿರುವ ಘಟನೆ ನಡೆದಿದೆ. ಮಧ್ಯಪ್ರದೇಶದಲ್ಲಿ ಎರಡು ಮತ್ತು ರಾಜಸ್ಥಾನದಲ್ಲಿ ಒಂದು ಯುದ್ಧ ವಿಮಾನ ಪತನಗೊಂಡಿದೆ. 100 ಕಿ.ಮೀ ಅಂತರದಲ್ಲಿ ಬೇರೆ ಬೇರೆ ಸ್ಥಳದಲ್ಲಿ ವಿಮಾನ ದುರಂತ ಸಂಭವಿಸಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಇದನ್ನು ಓದಿ: 83 ತೇಜಸ್ ಯುದ್ಧ ವಿಮಾನ ಖರೀದಿ : HAL ಜೊತೆ ಒಪ್ಪಂದ
ಮಧ್ಯಪ್ರದೇಶದಲ್ಲಿ ಮೊರೇನಾದ ಬಳಿ ಎರಡು ಯುದ್ಧ ವಿಮಾನಗಳು ಒಂದಕ್ಕೊಂದು ಢಿಕ್ಕಿ ಹೊಡೆದು ಪತನವಾಗಿದೆ ಎನ್ನಲಾಗಿದೆ. ಸುಖೋಯ್-30 ಹಾಗೂ ಮಿರಾಜ್ 2000 ಯುದ್ಧ ವಿಮಾನಗಳು ಪತನವಾಗಿದೆ. ಗ್ವಾಲಿಯರ್ ಏರ್ಬೇಸ್ನಿಂದ ಈ ವಿಮಾನಗಳು ಆಕಾಶಕ್ಕೆ ಹಾಕಿದವು. ರಾಜಸ್ಥಾನದ ಭಾರತ್ಪುರದಲ್ಲಿ ಭಾರತೀಯ ಸೇನೆಯ ಫೈಟರ್ ಜೆಟ್ ವಿಮಾನ ಪತನಗೊಂಡಿದೆ ಎಂದು ತಿಳಿದುಬಂದಿದೆ. ಭಾರತ್ಪುರದ ಸೇವರ್ ಪೊಲೀಸ್ ಠಾಣೆ ವ್ಯಾಪ್ತಿಯ ನಾಗ್ಲಾ ವೀಸಾದಲ್ಲಿ ಫೈಟರ್ ಜೆಟ್ ಪತನಗೊಂಡಿದೆ.
ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ತಾಲೀಮು ನಡೆಸುತ್ತಿದ್ದ ಭಾರತದ ವಾಯು ಸೇನೆಯ ವಿಮಾನಗಳು ಪತನ ಗೊಂಡಿತ್ತು. ಸುಖೋಯ್ – 30 ಯುದ್ಧ ವಿಮಾನದಲ್ಲಿ ಇಬ್ಬರು ಪೈಲಟ್ಗಳಿದ್ದರು. ಈ ಪೈಕಿ, ಒಬ್ಬರನ್ನು ರಕ್ಷಿಸಲಾಗಿದ್ದು, ಅವರು ಬದುಕುಳಿದಿದ್ದಾರೆ. ಅಲ್ಲದೆ, ಮಿರಾಜ್ 2000 ವಿಮಾನದಲ್ಲಿ ಒಬ್ಬರು ಪೈಲಟ್ ಇದ್ದು, ಅವರು ಸಹ ಬದುಕುಳಿದಿದ್ದಾರೆಂದು ತಿಳಿದುಬಂದಿದೆ.
ಈ ಅವಘಡಕ್ಕೆ ಕಾರಣ ಈವರೆಗೆ ತಿಳಿದುಬಂದಿಲ್ಲ. ಇನ್ನು, ಸ್ಥಳದಲ್ಲಿ ಶೋಧ ಹಾಗೂ ರಕ್ಷಣಾ ಕಾರ್ಯ ಮುಂದುವರಿದಿದೆ. ಎರಡೂ ಯುದ್ಧ ವಿಮಾನಗಳು ಡಿಕ್ಕಿ ಹೊಡೆದುಕೊಂಡಿದ್ದು, ಈ ಬಗ್ಗೆ ತನಿಖೆ ಮಾಡಲಾಗುವುದು ಎಂದು ಭಾರತೀಯ ವಾಯುಪಡೆ ತಿಳಿಸಿದೆ.
ಇದನ್ನು ಓದಿ: ಕೀಳುಮಟ್ಟದ ರಾಜಕೀಯ ಭಾಷಣ ಪ್ರಧಾನಿ ಸ್ಥಾನದ ಗೌರವಕ್ಕೆ ಶೋಭೆ ತರುವ ಮಾತಲ್ಲ: ಸೀತಾರಾಮ್ ಯೆಚೂರಿ
ಇಬ್ಬರು ಪೈಲಟ್ಗಳು ಸುರಕ್ಷಿವಾಗಿರುವ ಬಗ್ಗೆ ಮೊರೆನಾ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದು, ಇಬ್ಬರನ್ನು ಸುರಕ್ಷಿತವಾಗಿ ಯುದ್ಧ ವಿಮಾನಗಳಿಂದ ಕಾಪಾಡಲಾಗಿದೆ. ಯುದ್ಧ ವಿಮಾನವೊಂದರ ಅವಶೇಷ ಪತ್ತೆಯಾಗಿದ್ದು, ಕೇಂದ್ರ ರಕ್ಷಣಾ ಸಚಿವರಿಗೆ ಮಾಹಿತಿ ನೀಡಲಾಗಿದೆ. ಅವರು ವಾಯುಸೇನಾ ಮುಖ್ಯಸ್ಥ ಹಾಗೂ ಚೀಫ್ ಆಫ್ ಡಿಫೆನ್ಸ್ ಸ್ಟಾಪ್ ಅವರ ಜತೆ ಸಂಪರ್ಕದಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಉತ್ತರ ಪ್ರದೇಶದ ಆಗ್ರಾದಿಂದ ಹೊರಟಿದ್ದ ಫೈಟರ್ ಜೆಟ್ ವಿಮಾನ ರಾಜಸ್ಥಾನದ ಭರತ್ಪುರ ಜಿಲ್ಲೆಯ ಉಚ್ಚೈನ್ ಪ್ರದೇಶದಲ್ಲಿ ತಾಂತ್ರಿಕ ದೋಷದಿಂದ ಪತನಗೊಂಡಿದೆ. ಹಳ್ಳಿಯ ಸಮೀಪವಿರುವ ಬಂಜರು ಭೂಮಿಯಲ್ಲಿ ಫೈಟರ್ ಜೆಟ್ ಪತನಗೊಂಡಿದ್ದು, ಅಪಘಾತಕ್ಕೀಡಾದ ಕೂಡಲೇ ಅದು ಸ್ಫೋಟಗೊಂಡು ಬೆಂಕಿ ಆವರಿಸಿಕೊಂಡಿದೆ ಎಂದು ತಿಳಿದುಬಂದಿದೆ.
ಭರತ್ಪುರದ ಎಸ್ಪಿ ಶ್ಯಾಮ್ಸಿಂಗ್ ಮಾತನಾಡಿ, ವಿಮಾನ ಆಗಸದಲ್ಲಿ ಹಾರಾಟ ನಡೆಸುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡು ಕೆಳಗೆ ಬಿದ್ದಿದೆ. ಗಾಳಿಯ ತೀವ್ರತೆಗೆ ಇಡೀ ವಿಮಾನ ಬೆಂಕಿಯಲ್ಲಿ ಹೊತ್ತಿ ಉರಿದಿದೆ. ಇದು ಯಾವ ವಿಮಾನ. ಭಾರತೀಯ ವಾಯುಪಡೆಗೆ ಸೇರಿದ್ದೋ ಎಂಬುದರ ಕುರಿತಾಗಿ ವಾಯುಪಡೆ ಘಟಕದ ಸಿಬ್ಬಂದಿಯೂ ಸ್ಥಳಕ್ಕೆ ಆಗಮಿಸಿದ್ದಾರೆ ಎಂದು ತಿಳಿಸಿದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಮತ್ತು ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಅವರೊಂದಿಗೆ ಸಂಪರ್ಕದಲ್ಲಿದ್ದು, ಅಪಘಾತದ ಬಗ್ಗೆ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.