ಅಮೆರಿಕದಲ್ಲಿ ಕೆಲಸ ಕಳೆದುಕೊಂಡ 80 ಸಾವಿರಕ್ಕೂ ಹೆಚ್ಚು ಭಾರತೀಯರು ಈಗ ಅತಂತ್ರ!

ವಾಷಿಂಗ್ಟನ್​: ಭಾರತದ 80 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಅಮೆರಿಕದ ಟೆಕ್ ಕಂಪನಿಗಳಲ್ಲಿ ಕೆಲಸ ಕಳೆದುಕೊಂಡು ಪರದಾಡುತ್ತಿದ್ದಾರೆ. ಕಳೆದ ಅಕ್ಟೋಬರ್​ನಿಂದ ಇದುವರೆಗೆ ಬರೋಬ್ಬರಿ 3 ಲಕ್ಷ ಜನ ಉದ್ಯೋಗಿಗಳನ್ನ ಕಳೆದುಕೊಂಡು ಅತಂತ್ರರಾಗಿದ್ದಾರೆ. ಇದರಲ್ಲಿ 80 ಸಾವಿರ ಮಂದಿ ಭಾರತೀಯರೆಂದು ತಿಳಿದು ಬಂದಿದೆ.

ಕಳೆದ ವರ್ಷ 2022 ನವೆಂಬರ್‌ನಿಂದ ಈವರೆಗೆ ಸುಮಾರು ಎರಡೂವರೆ ತಿಂಗಳಲ್ಲಿ ಅಂದಾಜು ಎರಡು ಲಕ್ಷ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಅನೇಕರು ನಿರುದ್ಯೋಗಿಗಳಾಗಿದ್ದಾರೆ. ಇವರಲ್ಲಿ ಸುಮಾರು ಶೇ. 40ರಷ್ಟು ಮಂದಿ ಭಾರತೀಯರು ಎಂದು ವಾಷಿಂಗ್ಟನ್ ಪೋಸ್ಟ್‌ ವರದಿ ಮಾಡಿದೆ.

ಅಮೆರಿಕದಲ್ಲಿ ಫೇಸ್‌ಬುಕ್‌, ಅಮೆಜಾನ್, ಗೂಗಲ್‌ ಹಾಗೂ ಮೈಕ್ರೊಸಾಫ್ಟ್‌ನಂತ ದೈತ್ಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯರಲ್ಲಿ ಬಹುತೇಕ ಮಂದಿ ಉದ್ಯೋಗದ ಆಧಾರದಲ್ಲಿ ಎಚ್‌ 1ಬಿ ಮತ್ತು ಎಲ್‌1 ವೀಸಾ ಪಡೆದವೇ ಆಗಿದ್ದಾರೆ. ಐಟಿ ಕಂಪನಿಗಳು ತಮ್ಮ ಸಿಬ್ಬಂದಿಯನ್ನು ದಿಢೀರನೇ ಸೇವೆಯಿಂದ ವಜಾಗೊಳಿಸಿದ್ದರಿಂದ ಅವರೆಲ್ಲರು ಅಮೆರಿಕದಲ್ಲಿ ನೆಲೆಸಲು ತುರ್ತಾಗಿ ಬೇರೊಂದು ಉದ್ಯೋಗ ಹುಡುಕಬೇಕಿದೆ.

ಇದನ್ನೂ ಓದಿ : 2021ರಲ್ಲಿ ಆತ್ಮಹತ್ಯೆಗೀಡಾದವರ ಒಟ್ಟು ಸಂಖ್ಯೆ 164033-ಕಾರ್ಮಿಕರು, ನಿರುದ್ಯೋಗಿಗಳು, ರೈತರೇ ಹೆಚ್ಚು

ಸದ್ಯದ ಪರಿಸ್ಥಿತಿಯಲ್ಲಿ ಅನೇಕ ಕಂಪನಿಗಳಲ್ಲಿ ವಜಾ ಪ್ರಕ್ರಿಯೆ ನಡೆದಿವೆ ಎಂದು ಕೆಲಸ ಕಳೆದುಕೊಂಡ ಉದ್ಯೋಗಿಗಳು ಅಳಲು ತೋಡಿಕೊಂಡಿದ್ದಾರೆ. ಎಚ್‌ 1ಬಿ ವೀಸಾ ಇದು ವಲಸಿಗಯೇತರ ವೀಸಾ ಆಗಿದ್ದು, ಇದನ್ನು ಕೆಲಸದ ಆಧಾರದಲ್ಲಿ ಪಡೆಯಬಹುದಾಗಿದೆ. ಅಮೆರಿಕದದಲ್ಲಿನ ದೈತ್ಯ ಕಂಪನಿಗಳು ವ್ಯಕ್ತಿ ಜ್ಞಾನ, ಕೌಶಲ್ಯ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಈ ವೀಸಾ ಉಪಯುಕ್ತ ಎನ್ನಲಾಗುತ್ತಿದೆ. ಇನ್ನೂ ವಿಶಿಷ್ಟ ಜ್ಞಾನ, ವ್ಯವಸ್ಥಾಪನಾ ವಿಭಾಗದಲ್ಲಿ ಉದ್ಯೋಗ ಒದಗಿಸುವ ಕಂಪನಿಗಳು ತಮ್ಮದೇ ಇತರ ಶಾಖೆಗಳಿಗೆ ವರ್ಗಾವಣೆ ಮಾಡಲು ಪೂರಕವಾಗಿ ಈ ಎಲ್‌ 1ಎ ಹಾಗೂ ಎಲ್‌ 1ಬಿ ವೀಸಾ ನೀಡಿರುತ್ತವೆ. ಅಮೆರಿಕದಲ್ಲಿ ಕೆಲಸ ಕಳೆದುಕೊಂಡು ಬಹುತೇಕ ಭಾರತೀಯರು ಈ ವಲಸಿಗಯೇತರ ವೀಸಾ ಪಡೆದವರಾಗಿದ್ದಾರೆ ಎಂದು ಮಾಧ್ಯಮಗಳಿಂದ ತಿಳಿದು ಬಂದಿದೆ.  ತಾಂತ್ರಿಕ ಕ್ಷೇತ್ರದಲ್ಲಿ ದೊಡ್ಡಮಟ್ಟದ ಉದ್ಯೋಗಿಗಳ ಕಡಿತವಾಗಿದೆ. ಭಾರತ ಸೇರಿದಂತೆ ಬೇರೆ ದೇಶಗಳ ಸಾಕಷ್ಟು ಪ್ರತಿಭಾವಂತರು ನೌಕರಿ ಕಳೆದುಕೊಂಡಿದ್ದಾರೆ. ಐಟಿ ಕಂಪನಿಗಳ ವಜಾ ನಿರ್ಧಾರವು ಲಕ್ಷಾಂತರ ನೌಕರರ ಬದುಕು, ಅವರ ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರಿದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

60 ದಿನದಲ್ಲಿ ಬೇರೆ ಕೆಲಸ ಹುಡುಕಬೇಕು ಎಂದು ಉದ್ಯೋಗಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮೂರು ತಿಂಗಳ ಹಿಂದಷ್ಟೇ ಅಮೆರಿಕಕ್ಕೆ ಬಂದಿದ್ದು, ಒಂದೂವರೆ ತಿಂಗಳ ಮಾತ್ರ ಕೆಲಸ ಅವಧಿ ಬಾಕಿ ಇದೆ. ನಿಮ್ಮನ್ನೂ ಸೇವೆಯಿಂದ ತೆಗೆಯಲಾಗಿದೆ ಎಂದು ತಿಳಿಸಿದ್ದಾರೆ. ಎಚ್‌ 1ಬಿ ವೀಸಾ ಇರುವವರು ಕೇವಲ 60 ದಿನದಲ್ಲಿ ಬೇರೊಂದು ಉದ್ಯೋಗ ಹುಡಕಬೇಕಾದ ಸವಾಲಿಗೆ ಸಿಲುಕಿದ್ದೇವೆ. ಜನವರಿ 18ರಂದು ನನ್ನನ್ನು ಕೆಲಸದಿಂದ ತೆಗೆಯಲಾಗಿದೆ. ನನ್ನ ಬದುಕು ಹೆಚ್ಚು ಕಷ್ಟಕರವಾಗಿದೆ. ಮಕ್ಕಳ ಶಾಲೆಗೆ ಸೇರಿಸಬೇಕಿದ್ದು, ನನಗೆ ಕೆಲಸದ ಅವಶ್ಯಕತೆ ಹೆಚ್ಚಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಸದ್ಯ ಕೆಲಸ ಕಳೆದುಕೊಂಡು ಅತಂತ್ರರಾಗಿರುವ ಭಾರತೀಯ ವೃತ್ತಿಪರರಿಗೆ ಅಲ್ಲಿನ ಕೆಲವು ಉದ್ಯಮ- ಸಮುದಾಯ ಆಧಾರಿತ ಸಂಘ, ಸಂಸ್ಥೆಗಳು ನೆರವಿಗೆ ಧಾವಿಸಿವೆ. ಕೆಲಸ ಕಳೆದುಕೊಂಡವರಿಗೂ ಹಾಗೂ ಅಮೆರಿಕದಲ್ಲಿ ಉದ್ಯೋಗಿಗಳ ಅಗತ್ಯತೆ ಇರುವ ಬೇರೆ ಕಂಪನಿಗಳ ನಡುವೆ ಈ ಸಂಘಟನೆಗಳು ಸಂಪರ್ಕ ಸಾಧಿಸುತ್ತಿವೆ. ಉದ್ಯೋಗ ಕೊಡಿಸುವ ಪ್ರಯತ್ನ ಮಾಡುತ್ತಿವೆ. ಸಂಕಷ್ಟದಲ್ಲಿರುವ ಅನೇಕ ಉದ್ಯೋಗಿಗಳಿಗೆ ಹೊಸ ಉದ್ಯೋಗದ ಸಂದೇಶ ಕಳುಹಿಸುವ ಮೂಲಕ ಆಸರೆಯಾಗುತ್ತಿವೆ ಎಂದು ವರದಿಯಾಗಿದೆ.

Donate Janashakthi Media

Leave a Reply

Your email address will not be published. Required fields are marked *