ಹಾವೇರಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕ್ರಾಂತಿಕಾರಿ ವಿಚಾರ ಮತ್ತು ಆದರ್ಶಗಳನ್ನು ಇಂದಿನ ವಿದ್ಯಾರ್ಥಿ-ಯುವಜನರು ಮೈಗೂಡಿಸಿಕೊಳ್ಳಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‌ಎಫ್‌ಐ) ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಭೋವಿ ಕರೆ ನೀಡಿದರು.
ನಗರದ ಇಂಡಸ್ಟ್ರಿಯಲ್ ಎಸ್ಟೇಟ್, ವಿನಾಯಕ ನಗರದಲ್ಲಿರುವ ಹೊಯ್ಸಳ ಐಟಿಐ ಕಾಲೇಜಿನಲ್ಲಿ ಎಸ್‌ಎಫ್‌ಎ ಹಾವೇರಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕ್ರಾಂತಿಕಾರಿ, ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನ ಆಚರಣೆಯಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಗೌರವ ಸಲ್ಲಿಸಿ ಮಾತನಾಡಿದರು.
ಇದನ್ನು ಓದಿ : ಡಿವೈಎಫ್‌ಐ ವತಿಯಿಂದ ಸುಭಾಶ್ ಚಂದ್ರಬೋಸ್ ಜನ್ಮದಿನ ಆಚರಣೆ
ಸುಭಾಷ್ ಚಂದ್ರ ಬೋಸ್ ಬಡ ಕುಟುಂಬದ ಹಿನ್ನೆಲೆಯುಳ್ಳರಾಗಿದ್ದು, ಬಾಲ್ಯದಲ್ಲಿ ಅನ್ಯಾಯದ ವಿರುದ್ಧ ಹೋರಾಡುವ ಗುಣ ಬೆಳೆಸಿಕೊಂಡಿದ್ದರು. ನಮ್ಮ ದೇಶ ಸ್ವಾತಂತ್ರ್ಯ ಪಡೆಯಲು ನೇತಾಜಿ ಹಾಗೂ ಅವರ ಐಎನ್‌ಎ ಸೈನ್ಯದ ಪಾತ್ರ ಮಹತ್ವವಾಗಿದೆ. ಐಎನ್‌ಎ ಸೈನಿಕರ ರಾಜಿರಹಿತ ಹೋರಾಟದ ಇತಿಹಾಸ ವಿದ್ಯಾರ್ಥಿ-ಯುವಜನರು ಹೆಚ್ಚು ತಿಳಿದುಕೊಳ್ಳಬೇಕಾಗಿದೆ ಎಂದರು.
“ನೀವು ನಿಮ್ಮ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ತಂದು ಕೊಡುತ್ತೇನೆ. ಸ್ವಾತಂತ್ರ್ಯ ಎಂಬುದು ಯಾರೂ ಕೊಡುವಂಥ ಸರಕಲ್ಲ. ಅದು ನಾವು ಪಡೆದುಕೊಳ್ಳಬೇಕಾದದ್ದು” ಎನ್ನುತ್ತಿದ್ದ ಸುಭಾಷ್ ಚಂದ್ರ ಬೋಸ್ ಅವರ ವಿಚಾರಗಳು ಯುವಕರನ್ನು ಸ್ವಾತಂತ್ರ್ಯ ಚಳುವಳಿಗೆ ಒಗ್ಗೂಡಿಸಲು ಸ್ಪೂರ್ತಿಯಾಗಿದ್ದರು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಎಸ್‌ಎಫ್ಐ ಜಿಲ್ಲಾ ಮುಖಂಡರಾದ ಗುಡ್ಡಪ್ಪ ಮಡಿವಾಳರ, ವಿವೇಕ್ ಫನಸೆ, ಸಂತೋಷ ಪೂಜಾರ, ರಮೇಶ ಕಮ್ಮಾರ, ಅನೀಲ ಬೆಂಚಿಹಳ್ಳಿ, ಪ್ರವೀಣ ಚಿನ್ನಿಕಟ್ಟಿ, ಕಿರಣ ಪಿ ಎಚ್, ಮಾಳಪ್ಪ ಗುಡಗೂರ, ರಮೇಶ ದ್ಯಾಮನಗೌಡರ, ಸತೀಶ್ ಮುತ್ತಹಳ್ಳಿ, ಶಂಬುಲಿಂಗ ಅಗಡಿ, ಕಿರಣ ಹಿರೇಮಠ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ