ಬೆಂಗಳೂರು: ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತನ್ನ ಅಂತರ್ಜಾಲ ವಿಳಾಸವನ್ನು ಬದಲಾವಣೆ ಮಾಡಿದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಎಂದು ಬದಲಾಯಿಸಿರುವುದರಿಂದ ಈ ಬದಲಾವಣೆ ಮಾಡಲಾಗಿದೆ.
ಈ ಹಿಂದೆ ಇದ್ದ ಜಾಲತಾಣದ ವಿಳಾಸ http://sslc.karnataka.gov.in ವನ್ನು ಇ-ಆಡಳಿತದ ನೆರವಿನಿಂದ http://kseab.karnataka.gov.in ಎಂದು ಬದಲಿಸಲಾಗಿದೆ. ಇದು ಜನವರಿ 10ರಿಂದಲೇ ಬಳಕೆಗೆ ಮುಕ್ತವಾಗಿದೆ.
ಎಸ್ಎಸ್ಎಲ್ಸಿ ಪರೀಕ್ಷೆಗಳು, ಮಂಡಳಿಯ ಇತರ ಪರೀಕ್ಷೆಗಳು, ಪಿಯುಸಿ ಪರೀಕ್ಷೆಗೆ ಸಂಬಂಧಿಸಿದ ಚಟುವಟಿಕೆಗಳ ಅಂತರ್ಜಾಲ ಆಧಾರಿತ ಕಾರ್ಯಗಳು, ಶಾಲಾ/ಬಿಇಒ ಲಾಗಿನ್ ಸೇರಿ ಇತರ ಸೇವೆಗಳು ಇನ್ನು ಮುಂದೆ ಬದಲಾದ ಅಂತರ್ಜಾಲ ವಿಳಾಸದಲ್ಲಿಯೇ ಲಭ್ಯವಾಗಲಿದೆ.
ಇದನ್ನು ಓದಿ: 2022-23ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ