ಸಂಘಸಂಸ್ಥೆಗಳಿಗೆ ಸಹಾಯ ಧನ ಹೆಚ್ಚಳ: ಕರ್ನಾಟಕ ರಾಜ್ಯ ಸಾಹಿತಿ ಕಲಾವಿದರ ಸಂಘ ಸಂಸ್ಥೆಗಳ ಒಕ್ಕೂಟ ಅಭಿನಂದನೆ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾರ್ಗಸೂಚಿ ಬದಲಾವಣೆ ಮಾಡಿ ಸರಳೀಕರಣಗೊಳಿಸಿ ಸರ್ಕಾರ ಸಂಘ ಸಂಸ್ಥೆಗಳಿಗೆ ಸಹಾಯ ಧನವನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದಕ್ಕಾಗಿ ಕರ್ನಾಟಕ ರಾಜ್ಯ ಸಾಹಿತಿ ಕಲಾವಿದರ ಸಂಘ ಸಂಸ್ಥೆಗಳ ಒಕ್ಕೂಟವು ಅಭಿನಂದನೆ ಸಲ್ಲಿಸಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ ಸುನೀಲ್‌ ಕುಮಾರ್‌, ಇಲಾಖೆ ಪ್ರಧಾನ ಕಾರ್ಯದರ್ಶಿ ಕಾರ್ಯದರ್ಶಿ, ನಿರ್ದೇಶಕರು ಮುಂತಾದವರನ್ನು ಭೇಟಿ ಮಾಡಿದ ಒಕ್ಕೂಟದ ಪದಾಧಿಕಾರಿಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಮುಖಂಡರು ಅಭಿನಂದಿಸಿದರು.

ಹಿರಿಯ ಗಾಯಕ ವೈ ಕೆ ಮುದ್ದುಕೃಷ್ಣ, ಒಕ್ಕೂಟದ ಅಧ್ಯಕ್ಷ ಕೆ ಹೆಚ್ ಕುಮಾರ್, ರಂಗ ತಜ್ಞ ಡಾ. ಎ ಆರ್ ಗೋವಿಂದ ಸ್ವಾಮಿ, ರಾಜ್ಯದ ವಿವಿಧ ಪ್ರಕಾರಗಳ, ತಂಡಗಳ ಮುಖ್ಯಸ್ಥರು, ಸಾಹಿತಿಗಳು ಹಾಗೂ ಪ್ರಗತಿಪರ ಚಿಂತಕರಾದ ಮಲ್ಲಿಕಾರ್ಜುನ ಸ್ವಾಮಿ ಮಹಾಮನೆ, ಕಿಕ್ಕೇರಿ ಕೃಷ್ಣಮೂರ್ತಿ, ಪ್ರತಿಭಾ ನಾರಾಯಣ, ಮಾಲತಿ ಸುಧೀರ್, ವೈ ಜಯಂತಿ ಕಾಶಿ, ಡಿ ಶ್ರೀನಾಥ್, ಡಬ್ಲ್ಯೂ ಎಚ್ ಶಾಂತಕುಮಾರ್, ಛಲಮಂಡಳಿ ರಾಮಚಂದ್ರ, ದೇವರಾಜ್, ಸವಿತಾ ಗಣೇಶ್ ಪ್ರಸಾದ್, ನಾಗರಾಜ್ ವಿ, ಶೆಕೆರೆ ಲೋಕೇಶ್, ಕುವೆಂಪು ಪ್ರಕಾಶ್, ತಮಟೆ ನಾಗರಾಜ್, ಉದಯ ಬಾನು ನರಸಿಂಹ, ಗಾನ ಧಾರಕೃಷ್ಣ, ರಂಗನಾಥ ಮಾವಿನಕೆರೆ, ಸ್ವಂತ ವಾಣಿ ಸುಧಾಕರ್, ಹೋರಾಟಗಾರ ಮುತ್ತಪ್ಪ, ಸಾಯಿ ವೆಂಕಟೇಶ್ ಮತ್ತು ನಾವು ಭಾರತೀಯರು ಸಂಘದ ಅಧ್ಯಕ್ಷ ಡಾ ಮುತ್ತುರಾಜ್  ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *