ನೀನು ಕಪ್ಪಗಿದ್ದೀಯಾ..! ನಿನ್ನನ್ನ ಒಳಗೆ ಬಿಡಲ್ಲ‌ ; ಮಹಿಳೆಗೆ ಹಿಗ್ಗಾ ಮುಗ್ಗ ಥಳಿಸಿದ ಧರ್ಮದರ್ಶಿ

ಬೆಂಗಳೂರು : “ನೀನು ಸ್ನಾನ ಮಾಡ್ದಂಗೆ ಕಾಣ್ತಿಲ್ಲ, ಕಪ್ಪಗಿದ್ದೀಯಾ! ನಿನ್ನನ್ನ ಒಳಗೆ ಬಿಡಲ್ಲ‌”, ಎಂದು ದೇವಸ್ಥಾನದಲ್ಲಿ ಮಹಿಳೆ ಮೇಲೆ ಹಲ್ಲೆ ಮಾಡಿ, ಜಡೆ ಹಿಡಿದು ಹೊರಗೆ ದಬ್ಬಿರುವ ಘಟನೆ ನಡೆದಿದೆ.

ಬೆಂಗಳೂರನ ಅಮೃತಹಳ್ಳಿಯಲ್ಲಿರುವ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ಕೃತ್ಯದ ಸಂಪೂರ್ಣ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮಹಿಳೆ ದೇವರ ದರ್ಶನಕ್ಕೆಂದು ಬಂದಿದ್ದರು, ಆ ವೇಳೆ ದೇಗುಲದಲ್ಲಿದ್ದ ಧರ್ಮದರ್ಶಿ ಮುನಿಕೃಷ್ಣ, ನೀನು ಸ್ನಾನ ಮಾಡ್ದಂಗೆ ಕಾಣ್ತಿಲ್ಲ, ಕಪ್ಪಗಿದ್ದೀಯಾ.. ನಿನ್ನನ್ನ ಒಳಗೆ ಬಿಡಲ್ಲ‌ ಎಂದು ಅಡ್ಡ ಹಾಕಿ ಹಲ್ಲೆ ನಡೆಸಿದ್ದಾರೆ.

ಮುನಿಕೃಷ್ಣ ರಾಡ್​ನಿಂದಲೂ ಹಲ್ಲೆಗೆ ಮುಂದಾಗಿದ್ದು, ಹಲ್ಲೆ ಯತ್ನದ ವೇಳೆ ಅರ್ಚಕ ರಕ್ಷಣೆಗೆ ಧಾವಿಸಿದ್ದಾರೆ. ಕಳೆದ ಡಿ.21 ರಂದು ಈ ಘಟನೆ‌ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಯಾರಿಗೂ ಹೇಳದಂತೆ ಮುನಿಕೃಷ್ಣ
ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ಈ ವಿಚಾರವನ್ನು ಹೇಮಾವತಿ, ತನ್ನ ಗಂಡನಿಗೆ ತಡವಾಗಿ ತಿಳಿಸಿದ ನಂತರ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಮುನಿಕೃಷ್ಣ ಮೇಲೆ ಸೆಕ್ಷನ್​​​ 354ರ ಅಡಿ ಕೇಸ್ ಹಾಕಿ ಅರೆಸ್ಟ್​ ಮಾಡಲಾಗಿದೆ.

Donate Janashakthi Media

One thought on “ನೀನು ಕಪ್ಪಗಿದ್ದೀಯಾ..! ನಿನ್ನನ್ನ ಒಳಗೆ ಬಿಡಲ್ಲ‌ ; ಮಹಿಳೆಗೆ ಹಿಗ್ಗಾ ಮುಗ್ಗ ಥಳಿಸಿದ ಧರ್ಮದರ್ಶಿ

  1. ಮಹಿಳಾ ಆಯೋಗ ಮತ್ತು ಮಾನವ ಹಕ್ಕು ಆಯೋಗ ಎರಡು ಕೂಡಾ ಇದಕ್ಕೆ ಕ್ರಮ ಕೈಗೊಳ್ಳಬೇಕು ,ಮಹಿಳೆ ಆಯೋಗ ನಿದ್ದೆ ಮಾಡ್ತಿದೆಯಾ ಅಂತಾ

Leave a Reply

Your email address will not be published. Required fields are marked *