ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ನಾಗರಾಳ ಹೊಬಳಿ ಗ್ರಾಮದ ಲೆಕ್ಕಾಧಿಕಾರಿ ರೈತರನ್ನು ಹಣಕ್ಕಾಗಿ ಪೀಡಿಸುತ್ತಿರುವ ಘಟನೆ ಪದೇ ಪದೇ ನಡೆಯುತ್ತಿದ್ದು, ಬೇಸತ್ತ ಗ್ರಾಮಸ್ಥರು ಲೆಕ್ಕಾಧಿಕಾರಿ ಲಂಚ ಪಡೆಯುತ್ತಿರುವ ದೃಶ್ಯವನ್ನು ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇಂತಹ ಭ್ರಷ್ಟ ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ಕ್ರಮ ಜರುಗಬೇಕು ಒತ್ತಾಯಿಸಿದ್ದಾರೆ.
ರೈತರ ಪಹಣಿ ತಿದ್ದುಪಡಿಗೆ ರೂ.5,000 ಬೇಡಿಕೆಯಿಟ್ಟಿದ್ದ ನಾಗರಾಳ ಹೊಬಳಿಯ ಗ್ರಾಮ ಲೆಕ್ಕಾಧಿಕಾರಿ ಶರಣಗೌಡರಿಗೆ ಲಂಚ ನೀಡುತ್ತಿರುವ ದೃಶ್ಯ ಸೆರೆ ಹಿಡಿಯಲಾಗಿದ್ದು, ಬೊಮ್ಮನಾಳ ಗ್ರಾಮದ ರೈತ ಹೊನ್ನನಗೌಡ ಪಾಟೀಲ್ ಅವರಿಂದ ಗ್ರಾಮ ಲೆಕ್ಕಾಧಿಕಾರಿ ಲಂಚ ಪಡೆದಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಟೀ ಅಂಗಡಿಯಿಂದರ ಬಳಿ ರೈತರಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದ ಲೆಕ್ಕಾಧಿಕಾರಿ ಯಾವುದೇ ಮುಜುಗರ, ನಾಚಿಕೆಯಿಲ್ಲದೆ ಹಣ ತೆಗೆದುಕೊಂಡಿದ್ದಾರೆ. ನಾಲ್ವರು ಅಣ್ಣ-ತಮ್ಮಂದಿರ ಹೆಸರಿಗೆ ಜಮೀನಿನ ಪಹಣಿ ತಿದ್ದುಪಡಿ ಮಾಡಿಕೊಡಲು ಹಣ ವಸೂಲಿ ಮಾಡಿದ್ದಾರೆ. ಒಬ್ಬರಿಗೆ ರೂ.5,000 ನಂತೆ ಒಟ್ಟು ನಾಲ್ವರಿಂದ ರೂ. 20,000 ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ.
ನಿಗದಿಪಡಿಸಿದ ಹಣಕ್ಕಿಂತ ಕಡಿಮೆ ಕೊಟ್ಟರೆ ವಾಪಸ್ಸು ನೀಡಲು ಮುಂದಾದ ಅಧಿಕಾರಿ ಶರಣಗೌಡ ಇದರಲ್ಲಿ ನನಗೆ ಏನೂ ಉಳಿಯುವುದಿಲ್ಲ ಎಂದು ರೈತನಿಂದ 5 ಸಾವಿರ ರೂ. ಲಂಚ ಪಡೆದಿದ್ದಾರೆ. ಪಹಣಿ ತಿದ್ದುಪಡಿಗೆ ಹಂತ ಹಂತದಲ್ಲೂ ಲಂಚ ಕೊಡಬೇಕಿರುವುದರಿಂದ ರೈತರು ಬೇಸತ್ತಿದ್ದಾರೆ. ಭ್ರಷ್ಟ ಅಧಿಕಾರಿ ವಿರುದ್ಧ ಕ್ರಮಕ್ಕೆ ರೈತರು ಆಗ್ರಹಿಸಿದ್ದಾರೆ.