ಮೈಸೂರು: ಜಿಲ್ಲೆಯ ಸರಗೂರು ತಾಲ್ಲೂಕಿನಲ್ಲಿರುವ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ಹಾಸ್ಟೆಲ್ನಲ್ಲಿರುವ ವಾರ್ಡನ್ ಕ್ಷುಲ್ಲಕ ಕಾರಣಕ್ಕೆ ಹಾಸ್ಟೇಲಿಗೆ ಬೀಗ ಜಡಿರುವ ಪರಿಣಾಮ ಬಾಲಕರು ತಡರಾತ್ರಿವರೆಗೂ ಕೊರೆಯುವ ಚಳಿಯಲ್ಲಿ ಹೊರಗೆ ಕಳೆಯುವಂತ ಘಟನೆ ನಡೆದಿದೆ.
ಶನಿವಾರ ಆಗಿದ್ದರಿಂದ ಮಧ್ಯಾಹ್ನ ವಿದ್ಯಾರ್ಥಿಗಳು ಆಟವಾಡಲು ಹೊರಗೆ ತೆರಳಿದ್ದರು. ವಿದ್ಯಾರ್ಥಿಗಳು ಹೊರಹೋಗಿದ್ದ ಸಂದರ್ಭದಲ್ಲಿ ವಾರ್ಡನ್ ಹಾಸ್ಟೆಲ್ ಬೀಗ ಹಾಕಿದ್ದಾರೆ. ಇದರಿಂದಾಗಿ ಮಕ್ಕಳು ಹಾಸ್ಟೆಲ್ ಹೊರ ಕೂರುವಂತಾಗಿದೆ. ಈ ವೇಳೆ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಮಕ್ಕಳಿಗೆ ಬನ್, ಬಿಸ್ಕತ್ ನೀಡಿ ಊಟ ನೀಡಿ ನೆರವಾಗಿದ್ದಾರೆ.
ರಾತ್ರಿ 11 ಗಂಟೆವರೆಗೂ ಮಕ್ಕಳು ಚಳಿಯಲ್ಲೇ ಹೊರಗೆ ಕುಳಿತಿದ್ದರು. ಬಳಿಕ ಸ್ಥಳೀಯರು ವಾರ್ಡನ್ಗೆ ಕರೆ ಮಾಡಿ ಕರೆಸಿ ಬೀಗ ತೆಗೆಸಿದ್ದಾರೆ. ಹಾಗೂ ಹಾಸ್ಟೆಲ್ ಅವ್ಯವಸ್ಥೆ, ವಾರ್ಡನ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.