ಬೆಂಗಳೂರು : ರಾಯಚೂರು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಕಲುಷಿತ ನೀರು ಕುಡಿದು ಜನರು ಅಸ್ವಸ್ಥಗೊಂಡಿದ್ದು, ಈ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ.
ಈ ಬಗ್ಗೆ ಸರಣಿ ಟ್ವೀಟ್ ಗಳನ್ನು ಮಾಡಿರುವ ಕಾಂಗ್ರೆಸ್, ರಾಯಚೂರಿನಲ್ಲಿ ಕುಲುಷಿತ ನೀರು ಕುಡಿಸಿ ಜನರನ್ನು ಕಾಯಿಲೆಗೆ ತಳ್ಳುತ್ತಿದೆ. ಜನರ ಜೀವಗಳಿಗೆ ಬೆಲೆ ಇಲ್ಲವೇ?
ಬಸವರಾಜ ಬೊಮ್ಮಾಯಿ ಅವರೇ, ಅಧಿಕಾರಿಗಳು ನಿಮ್ಮ ಮಾತು ಕೇಳುತ್ತಿಲ್ಲವೇ ಅಥವಾ ನೀವೇ ನಿಷ್ಕ್ರಿಯರಾಗಿರುವಿರಾ? ಸರ್ಕಾರ ಕೂಡಲೇ ಈ ಬಗ್ಗೆ ಕ್ರಮ ವಹಿಸಿ ಸ್ವಚ್ಛ ನೀರು ನೀಡಬೇಕು, ರೋಗ ಪೀಡಿತರ ಚಿಕಿತ್ಸೆ ವೆಚ್ಚ ಭರಿಸಬೇಕು. ಬೆಳಗಾವಿಯಲ್ಲಿ ಕುಡಿಯುವ ನೀರಿನ ಪೈಪ್ ಸಮಸ್ಯೆಯಿಂದ ಕುಲುಷಿತಗೊಂಡ ನೀರು ಕುಡಿದು 50 ಜನ ಅಸ್ವಸ್ಥಗೊಂಡಿದ್ದಾರೆ, ಇಬ್ಬರು ಮೃತಪಟ್ಟಿದ್ದಾರೆ.
ಬೆಳಗಾವಿಯಲ್ಲಿ ಕುಡಿಯುವ ನೀರಿನ ಪೈಪ್ ಸಮಸ್ಯೆಯಿಂದ ಕುಲುಷಿತಗೊಂಡ ನೀರು ಕುಡಿದು 50 ಜನ ಅಸ್ವಸ್ಥಗೊಂಡಿದ್ದಾರೆ, ಇಬ್ಬರು ಮೃತಪಟ್ಟಿದ್ದಾರೆ. ಗ್ರಾಮೀಣಾಭಿವೃದ್ಧಿ ಇಲಾಖೆ ಬದುಕಿದೆಯೇ? ಈ ಸಾವಿಗೆ ಜನರ ಅನಾರೋಗ್ಯಕ್ಕೆ #40PercentSarkara ಹೊಣೆಯಲ್ಲವೇ @BSBommai ಅವರೇ?#SayCM. ಕನಿಷ್ಠ ಮೂಲಸೌಕರ್ಯ ಒದಗಿಸಲಾಗದ ಅಸಮರ್ಥ ಸರ್ಕಾರವಿದು ಎಂದು ಟ್ವೀಟ್ ಮಾಡಿದ್ದಾರೆ.
ಬೆಳಗಾವಿಯಲ್ಲಿ ಕುಡಿಯುವ ನೀರಿನ ಪೈಪ್ ಸಮಸ್ಯೆಯಿಂದ ಕುಲುಷಿತಗೊಂಡ ನೀರು ಕುಡಿದು 50 ಜನ ಅಸ್ವಸ್ಥಗೊಂಡಿದ್ದಾರೆ, ಇಬ್ಬರು ಮೃತಪಟ್ಟಿದ್ದಾರೆ.
ಗ್ರಾಮೀಣಾಭಿವೃದ್ಧಿ ಇಲಾಖೆ ಬದುಕಿದೆಯೇ? ಈ ಸಾವಿಗೆ ಜನರ ಅನಾರೋಗ್ಯಕ್ಕೆ #40PercentSarkara ಹೊಣೆಯಲ್ಲವೇ @BSBommai ಅವರೇ?#SayCM
ಕನಿಷ್ಠ ಮೂಲಸೌಕರ್ಯ ಒದಗಿಸಲಾಗದ ಅಸಮರ್ಥ ಸರ್ಕಾರವಿದು. pic.twitter.com/2Rwq9HNbcP
— Karnataka Congress (@INCKarnataka) October 27, 2022
ಗ್ರಾಮೀಣಾಭಿವೃದ್ಧಿ ಇಲಾಖೆ ಬದುಕಿದೆಯೇ? ಈ ಸಾವಿಗೆ ಜನರ ಅನಾರೋಗ್ಯಕ್ಕೆ #40 ಪರ್ಸೆಂಟ್ ಸರ್ಕಾರ ಹೊಣೆಯಲ್ಲವೇ ಬಸವರಾಜ ಬೊಮ್ಮಾಯಿ ಅವರೇ? ಕನಿಷ್ಠ ಮೂಲಸೌಕರ್ಯ ಒದಗಿಸಲಾಗದ ಅಸಮರ್ಥ ಸರ್ಕಾರವಿದು.
ಬಳ್ಳಾರಿಯಲ್ಲಿ ವಿದ್ಯುತ್ ಸರಬರಾಜು ಕೇಂದ್ರದಲ್ಲಿ ಒಳಚರಂಡಿ ನೀರು ನಿಂತು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಸಿನೆಮಾ ಒಂದನ್ನು ಹಿಡಿದು ವಿವಾದ ಸೃಷ್ಟಿಸಲು ಯತ್ನಿಸುವ ಇಂಧನ ಸಚಿವ ಸುನಿಲ್ ಕುಮಾರ್ ಅವರಿಗೆ ತಮ್ಮ ಇಲಾಖೆಯ ಇಂತಹ ಅವ್ಯವಸ್ಥೆ ಗಮನಿಸುವುದಿಲ್ಲವೇ?
ಸಚಿವರೇ, ಮೊದಲು ನಿಮ್ಮ ಜವಾಬ್ದಾರಿಯನ್ನ ಸರಿಯಾಗಿ ನಿರ್ವಹಿಸುವುದನ್ನು ಕಲಿಯಿರಿ ಎಂದು ಕಾಂಗ್ರೆಸ್ ಕುಟುಕಿದೆ.