ಮೆಲ್ಬೋರ್ನ್ : ವಿರಾಟ್ ಕೊಹ್ಲಿ (82*), ಹಾರ್ದಿಕ್ ಪಾಂಡ್ಯ(4೦) ಅವರ ಶತಕದ ಜತೆಯಾಟದ ನೆರವಿನಿಂದ ಭಾರತ ತಂಡ ಪಾಕಿಸ್ತಾನ ವಿರುದ್ಧ ಟಿ2೦ ವಿಶ್ವ ಕಪ್ ಸೂಪರ್ 12 ಪಂದ್ಯದಲ್ಲಿ 4 ವಿಕೆಟ್ಗಳ ಗೆಲುವು ದಾಖಲಿಸಿ ಹಾಲಿ ವಿಶ್ವ ಕಪ್ ಕೂಟದಲ್ಲಿ ಶುಭಾರಂಭ ಮಾಡಿದೆ.
ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಭಾನುವಾರದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ಆರಂಭಿಕ ಆಘಾತದ ಹೊರತಾಗಿಯೂ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ಬಳಿಕ ಗುರಿ ಬೆನ್ನಟ್ಟಿದ ಭಾರತ ಕೂಡ ಆರಂಭಿಕ ಆಘಾತ ಅನುಭವಿಸಿತು. ತಂಡದ ಮೊತ್ತ 31 ರನ್ ಒಟ್ಟುಗೂಡುವಷ್ಟರಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಕೊಹ್ಲಿ ಮತ್ತು ಹಾರ್ದಿಕ್ ಜತೆಗೂಡಿ ಆರಂಭದಲ್ಲಿ ತಾಳ್ಮೆಯುತ ಆಟವಾಡಿ ತಂಡಕ್ಕೆ ನೆರವಾದರು.
Century Partnership! 👏 👏
A 1⃣0⃣0⃣-run stand between @imVkohli & @hardikpandya7! 🤝#TeamIndia move past 130 in the chase.
Follow the match ▶️ https://t.co/mc9usehEuY #T20WorldCup | #INDvPAK pic.twitter.com/suqxUvtyHN
— BCCI (@BCCI) October 23, 2022
ಈ ಜೋಡಿ 5ನೇ ವಿಕೆಟ್ಗೆ 113 ರನ್ ಜತೆಯಾಟ ನಡೆಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಂತಿಮವಾಗಿ ಭಾರತ ತಂಡ 20 ಓವರ್ಗಳಲ್ಲಿ 6 ವಿಕೆಟ್ನಷ್ಟಕ್ಕೆ 160 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ವಿರಾಟ್ ಆಟ ಸಂಭ್ರಮಿಸಿದ ಪಾಕಿಸ್ತಾನಿ ಪ್ರಜೆ :ವಿರಾಟ್ ಕೊಹ್ಲಿಗೆ ವಿಶ್ವ ಮಟ್ಟದಲ್ಲಿ ಅಭಿಮಾನಿಗಳಿದ್ದಾರೆ. ಇವರ ಆಟ ನೋಡಲು ಅಭಿಮಾನಿಗಳು ಮುಗಿ ಬೀಳುತ್ತಾರೆ. ಇದೀಗ ಪಾಕಿಸ್ತಾನದ ಅಭಿಮಾನಿಯೊಬ್ಬ ತನ್ನ ತಂಡಕ್ಕಿಂತ ವಿರಾಟ್ ಕೊಹ್ಲಿ ಆಟನೋಡಲು ಪಾಕ್ನಿಂದ ಮೆಲ್ಬೋರ್ನ್ಗೆ ಬಂದಿದ್ದಾನೆ.
Virat Kohli fan from Pakistan, he is currently the face of world cricket. pic.twitter.com/I2U15LDMGj
— Johns. (@CricCrazyJohns) October 23, 2022
ಈ ಪಂದ್ಯದ ವೇಳೆ ಪಾಕಿಸ್ತಾನ ಅಭಿಮಾನಿಯೊಬ್ಬ ಪಾಕ್ ತಂಡದ ಜೆರ್ಸಿ ತೊಟ್ಟು ವಿರಾಟ್ ಹೆಸರು ಬರೆಸಿದ್ದಾನೆ. ಅದರಂತೆ ಆತ ನಾನು ಪಾಕಿಸ್ತಾನದವನು ಆದರೆ ವಿರಾಟ್ ಕೊಹ್ಲಿಯ ಅಪ್ಪಟ ಅಭಿಮಾನಿ. ಅವರ ಆಟ ನೋಡಲು ಪಾಕ್ನಿಂದ ಬಂದಿದ್ದೇನೆ ಎಂದು ಹೇಳುವ ಮೂಲಕ ವಿರಾಟ್ ಮೇಲಿನ ಅಭಿಮಾನ ತೋರಿಸಿದ್ದಾರೆ.