ಮಂಡ್ಯ: ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಸಕ್ಕರೆ ನಾಡಿನಲ್ಲಿ ಭಾರೀ ಅವಾಂತರ ಸೃಷ್ಠಿ ಮಾಡಿದೆ ಇದರಿಂದಾಗಿ, ಇಡೀ ಕಾಲೋನಿಯೇ ಮುಳುಗಡೆ ಆಗುತ್ತೆ. ನಮ್ಮ ಸಮಸ್ಯೆಗೊಂದು ಶಾಶ್ವತ ಪರಿಹಾರ ಕಲ್ಪಿಸಬೇಂದು ಜನರು ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಮಳೆಯಿಂದಾಗಿ ಜನತೆ ಹೈರಾಣಾಗಿದ್ದಾರೆ. ನಿನ್ನೆ ಸುರಿದ ಮಳೆಗೆ ಬೀಡಿ ಕಾಲೋನಿ ಸಂಪೂರ್ಣವಾಗಿ ಜಲಾವೃತವಾಗಿತ್ತು. ಆದರೆ ಇಲ್ಲಿನ ನಿವಾಸಿಗಳದ್ದು ನಿನ್ನೆ ಒಂದು ದಿನದ ಗೋಳಲ್ಲ, ಪ್ರತಿ ಬಾರಿ ಮಳೆ ಬಂದಾಗಲೂ ಇಲ್ಲಿನ ನಿವಾಸಿಗಳದ್ದು ಇದೇ ಪರಿಸ್ಥಿತಿಯಾಗಿದೆ. ಹೀಗಾಗಿ ಶಾಶ್ವತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದರು.
ಮಂಡ್ಯ ನಗರದ ಕೆರೆಯಂಗಳದಲ್ಲಿರುವ ಬೀಡಿ ಕಾಲೋನಿ ಭಾರಿ ಮಳೆಗೆ ಮುಳುಗಿತ್ತು. ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿದ ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿ ದ್ವಾರವನ್ನು ಮುರಿದು ಒಳನುಗ್ಗಿದ್ದರು. ಪೊಲೀಸರು ತಡೆದರೂ ಬಗ್ಗದೇ ಪ್ರತಿಭಟನೆ ನಡೆಸಿದರು. ಕೆಲಕಾಲ ತಳ್ಳಾಟ ನೂಕಾಟ ಉಂಟಾಯಿತು. ಸ್ಥಳಕ್ಕೆ ಜಿಲ್ಲಾಧಿಕಾರಿ ಬರುವಂತೆ ಪಟ್ಟು ಹಿಡಿದರು.