ಕೊರಿಯರ್‌ ಉದ್ಯೋಗಿಗೆ ಹೂಡಿಕೆ ಹೆಸರಲ್ಲಿ ಆನ್‌ಲೈನ್‌ ವಂಚನೆ; 11 ಲಕ್ಷ ಪಂಗನಾಮ

ಚಿಕ್ಕಬಳ್ಳಾಪುರ: ಅಮೆಜಾನ್‌ ಕಂಪನಿ ಹೆಸರಲ್ಲಿ ಆನ್‌ಲೈನ್‌ ನಕಲಿ ವಂಚಕರಿಂದ ಬರೋಬ್ಬರಿ ರೂ. 11 ಲಕ್ಷ ಮೊತ್ತವನ್ನು ಕೊರಿಯರ್‌ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಒಬ್ಬರಿಗೆ ವಂಚಿಸಿರುವ ಘಟನೆಯೊಂದಿಗೆ ನಡೆದಿದೆ.  

ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಬರುತ್ತದೆಯೆಂದು ನಂಬಿದ ಚಿಕ್ಕಬಳ್ಳಾಪುರ ತಾಲೂಕಿನ ಹೊಸಹುಡ್ಯ ಗ್ರಾಮದ ನಿವಾಸಿ ದೇವನಹಳ್ಳಿಯಲ್ಲಿ ಕೆಲಸ ಮಾಡುತ್ತಿರುವ ಮಹೇಶ್‌ (23) ಎಂಬ ವ್ಯಕ್ತಿಯಿಂದ ಹಣವನ್ನು ಪಡೆದು ವಂಚಿಸಿರುವ ಘಟನೆ ನಡೆದಿದೆ.

ಆನ್‌ಲೈನ್‌ ವಂಚಕರ ಜಾಲಕ್ಕೆ ಸಿಲುಕಿ ಮೋಸದ ಮಹೇಶ್‌ ಜಿಲ್ಲಾ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಹೇಶ್‌ ತಮ್ಮ ಮೊಬೈಲ್‌ನಲ್ಲಿ ಟೆಲಿಗ್ರಾಂ ಸಾಮಾಜಿಕ ಜಾಲತಾಣದಲ್ಲಿ ವರ್ಕ್‌ ಫ್ರಂ ಹೋಂ ಅಂತ ಅಮೆಜಾನ್‌ ಇ ಕಾಮರ್ಸ್‌ನಲ್ಲಿ ಐಟಂಗಳ ಮೇಲೆ ಹೂಡಿಕೆಯನ್ನು ಮಾಡಿದರೆ ನಿಮಗೆ ಉತ್ತಮ ಲಾಭ/ರಿಟರ್ನಸ್‌ ಬರುತ್ತದೆಂಬ ಸಂದೇಶ ನಂಬಿ ನಕಲಿ ಖಾತೆಯ 9860296816 ಮೊಬೈಲ್‌ ಸಂಖ್ಯೆಗೆ ಸಂಪರ್ಕಿಸಿದ್ದಾರೆ. ಅವರು ರಿಜಿಸ್ಪ್ರೇಷನ್‌ ಪೀ ಅಂತ 500 ರೂ. ಕಟ್ಟಿಸಿಕೊಂಡಿದ್ದಾರೆ.

ಒಮ್ಮೆ ಸಣ್ಣ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಿದ್ದು ಅದಕ್ಕೆ ಹಣ ಕೂಡ ಬಂದಿದೆ. ಇದೇ ರೀತಿ ಮಹೇಶ್‌ 3,86,893 ಹೂಡಿಕೆ ಮಾಡಿದಾಗ ಆತನ ಖಾತೆಗೆ 4,31,543 ಬಂದ ರೀತಿ ತೋರಿಸಿದೆ. ಆಗ ಡ್ರಾ ಮಾಡುವುದು ಬೇಡ ಅಂತ ಪುನಃ ಪುನಃ ಹೂಡಿಕೆ ಮಾಡಿದ್ದಾರೆ. ಆದರೆ ಆತನ ಬ್ಯಾಂಕ್‌ ಖಾತೆಗೆ ಕಮಿಷನ್‌ ಹಣ ಬಂದಹಾಗೆ ತೋರಿಸಿ ಮಹೇಶ್‌ನಿಂದ ಬರೋಬ್ಬರಿ 11,71,313 ರೂ, ಪಡೆದು ಅಮೆಜಾನ್‌ ಕಂಪನಿ ಹೆಸರಲ್ಲಿ ಆನ್‌ಲೈನ್‌ ವಂಚಕರು ಮೋಸ ಮಾಡಿರುವುದು ತಿಳಿದು ಬಂದಿದೆ.

Donate Janashakthi Media

Leave a Reply

Your email address will not be published. Required fields are marked *