ತಿರುವನಂತಪುರಂ: ಕೇರಳ ರಾಜ್ಯದ ಪತ್ತನಂತಿಟ್ಟ ಜಿಲ್ಲೆಯ ಎಂಳಥೂರು ಗ್ರಾಮದಲ್ಲಿ ಜರುಗಿದ ಇಬ್ಬರು ಮಹಿಳೆಯರ ನರಬಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಘಾತಕಾರಿ ವಿಷಯವೊಂದು ಬೆಳಕಿಗೆ ಬಂದಿದ್ದು, ಹೊಸ ತಿರುವು ಪಡೆದುಕೊಂಡಿದೆ.
ಆರೋಪಿಗಳಾದ ದಂಪತಿಯನ್ನು ವಾಸವಾಗಿರುವ ತಿರುವಲ್ಲಾದಲ್ಲಿನ ಮನೆಗೆ ಸಾಕ್ಷ್ಯ ಸಂಗ್ರಹಕ್ಕೆ ಕರೆದುಕೊಂಡು ಪೊಲೀಸರು ಕರೆದುಕೊಂಡು ಹೋದಾಗ ವಿಷಯ ಬೆಳಕಿಗೆ ಬಂದಿದ್ದು, ನರಬಲಿ ಕೊಟ್ಟ ಬಳಿಕ ಬಳಿಕ ಮಂತ್ರವಾದಿ ಹೇಳಿದನೆಂದು ದಂಪತಿಯು ಮೃತದೇಹದ ಕೆಲವು ಭಾಗಗಳನ್ನು ಬೇಯಿಸಿಕೊಂಡು ತಿಂದಿದ್ದಾರೆ. ಪೊಲೀಸರ ವಿಚಾರಣೆಯ ವೇಳೆ ದಂಪತಿ ಬಾಯ್ಬಿಟ್ಟಿದ್ದಾರೆ.
ಆರೋಪಿಗಳಾದ ಭಗವಾಲ್ ಸಿಂಗ್, ಅವರ ಪತ್ನಿ ಲೈಲಾ ಇಬ್ಬರು ತಮ್ಮ ಆರ್ಥಿಕ ಏಳಿಗೆಗಾಗಿ ಮಾಟ-ಮಂತ್ರ ಮಾಡಿಸಿ, ಇಬ್ಬರು ಮಹಿಳೆಯರನ್ನು ಬಲಿಕೊಟ್ಟ ಘಟನೆಯೀಗ ದೇಶವನ್ನೇ ಬೆಚ್ಚಿಬೀಳಿಸಿದೆ. ಮೊಹಮ್ಮದ್ ಶಫಿ ಎಂಬ ಮಾಂತ್ರಿಕನು ನಮ್ಮನ್ನು ನಂಬಿಸಿ, ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಬಲಿ ಪಡೆದ ಮೃತ ದೇಹದ ಭಾಗಗಳನ್ನು ಬೇಯಿಸಿ ತಿನ್ನುವಂತೆ ಹೇಳಿದ್ದ. ನಾವು ಹಾಗೆಯೇ ಮಾಡಿದ್ದೇವೆ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಮಹಿಳೆಯರ ಅಂಗಗಳನ್ನೆಲ್ಲ ಕೊಚ್ಚಿ ಹಾಕುತ್ತಿದ್ದಾಗ, ಅದರಿಂದ ರಕ್ತ ಸುರಿಯುತ್ತಿದ್ದರೆ ಮೊಹಮ್ಮದ್ ಶಫಿ ವಿಕೃತವಾಗಿ ಆನಂದ ಪಡುತ್ತಿದ್ದನು. ಅವನು ಹಿರಿಹಿರಿ ಹಿಗ್ಗುತ್ತಿದ್ದ ಎಂದು ದಂಪತಿಯು ತಿಳಿಸಿದ್ದಾರೆ. ಇಷ್ಟೆಲ್ಲ ಆದರೂ ಲೈಲಾಗೆ ಮಾತ್ರ ಸ್ವಲ್ಪವೂ ಪಶ್ಚಾತ್ತಾಪ ಇಲ್ಲ. ಆಕೆ ನರಬಲಿಯಿಂದ ತಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಎಂದು ಇನ್ನೂ ನಂಬುತ್ತಿದ್ದಾಳೆ. ನಮ್ಮೆದುರೂ ಅದನ್ನೇ ವಾದಿಸುತ್ತಿದ್ದಾಳೆ ಎಂದೂ ಪೊಲೀಸರು ತಿಳಿಸಿದ್ದಾರೆ.
ತನಿಖೆಯ ವೇಳೆ ಮತ್ತಷ್ಟು ಅಂಶಗಳನ್ನು ಬೆಳಕಿಗೆ ಬಂದಿದ್ದು, ಕಡವಂತರ ನಿವಾಸಿ ಪದ್ಮಮ್ ಮತ್ತು ಕಾಲಡಿ ನಿವಾಸಿ ರೋಸಿಲಿ ಎಂಬ ಇಬ್ಬರು ಮಹಿಳೆಯರನ್ನು ನರಬಲಿ ನೀಡಿದ್ದಲ್ಲದೇ, ಇನ್ನಷ್ಟು ಜನರ ಬಲಿಗೂ ಆರೋಪಿಗಳು ಸಂಚು ರೂಪಿಸಿದ್ದರು. ಆರೋಪಿ ದಂಪತಿ ಮತ್ತೊಬ್ಬ ಮಹಿಳೆಯನ್ನೂ ನರಬಲಿಗಾಗಿ ತಿರುವಳ್ಳಕ್ಕೆ ಕರೆತಂದಿದ್ದರು. ಆದರೆ ಮಹಿಳೆ ಮನೆಯವರಿಗೆ ತಾನಿರುವ ಸ್ಥಳದ ಬಗ್ಗೆ ತಿಳಿಸಿದ್ದರು. ಈ ವೇಳೆ ಅವರನ್ನು ಬಲಿಕೊಟ್ಟರೆ ಸಿಕ್ಕಿಬೀಳುವ ಕಾರಣ ಯೋಜನೆ ಕೈಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಇದೇ ವೇಳೆ ಮಂತ್ರವಾದಿ ಮೊಹಮ್ಮದ್ ಶಫಿ ಇದೇ ಉದ್ದೇಶಕ್ಕಾಗಿ ಚಿಕ್ಕ ಮಗು ಸಮೇತ ಕುಟುಂಬವೊಂದನ್ನು ಅದೇ ಸ್ಥಳಕ್ಕೆ ಕರೆತಂದಿದ್ದರು. ಬಳಿಕ ಅವರುಗಳು ಏನಾದರೂ ಎಂಬ ಬಗ್ಗೆ ಇನ್ನೂ ಮಾಹಿತಿ ಬಹಿರಂಗವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
14 ದಿನ ನ್ಯಾಯಾಂಗ ಬಂಧನ
ಆರೋಪಿಗಳನ್ನು ಇಂದು(ಅಕ್ಟೋಬರ್ 12) ಬೆಳಗ್ಗೆ ಎರ್ನಾಕುಲಂ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಎಷ್ಟು ಇದ್ದರೂ ಕೆಲವರಿಗೆ ಸಾಕಾಗಲ್ಲ. ಬೇರೊಬ್ಬರ ಪ್ರಾಣ ತೆಗೆದು, ಮಂತ್ರ ಮಾಡಿ ಹೇಗಾದರೂ ಶ್ರೀಮಂತ ರಾಗ ಬೇಕೆಂದು ಕೆಲವರು ಬಯಸುತ್ತಾರೆ. ಜೀವನ ನಶ್ವರ ಅಂತ ಅವರೆಲ್ಲಾ ಮರೆತಿರಾ ಬಹುದು. ಇಂತವರನ್ನು ಕೂಡಲೆ ಗಲ್ಲು ಶಿಕ್ಷೆಗೆ ಒಳ ಪಡಿಸ ಬೇಕು