ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಯಲ್ಲಿ ಯುವಕನ ಪೇಸಿಎಂ ಶರ್ಟ್ ಬಿಚ್ಚಿಸಿ ಹೊಡೆದ ಪೊಲೀಸ್

ಚಾಮರಾಜನಗರ : ಭಾರತ್ ಜೋಡೋ ಯಾತ್ರೆಯಲ್ಲಿ ಪೇಸಿಎಂ‌ ಎಂದು ಟೀ ಶರ್ಟ್ ಮತ್ತು ಧ್ವಜ ಹಿಡಿದು ಓಡಾಡುತ್ತಿದ್ದ ಯುವಕನನ್ನು ಯಾತ್ರೆ ವೇಳೆ ಹಿಡಿದ ಪೊಲೀಸರು ನಡುರಸ್ತೆಯಲ್ಲೇ ಟೀ ಶರ್ಟ್ ಬಿಚ್ಚಿಸಿದ್ದಾರೆ.

ಟೀ ಶರ್ಟ್ ಬಿಚ್ಚುತ್ತಿರುವಾಗ ಪೊಲೀಸ್ ಸಿಬ್ಬಂದಿ ಒಬ್ಬರು ಆತನ ತಲೆಗೆ, ಬೆನ್ನಿಗೆ ಹೊಡೆಯುವುದು ವಿಡಿಯೋದಲ್ಲಿ ಸೆರೆಯಾಗಿದೆ. ಸದ್ಯ ಟೀ ಶರ್ಟ್​ ಧರಿಸಿದ್ದ ಯುವಕ ಅಕ್ಷಯ್​ನನ್ನು ಚಾಮರಾಜನಗರ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ರಸ್ತೆಯಲ್ಲಿ ಯುವಕನ ಪೇಸಿಎಂ ಶರ್ಟ್ ಬಿಚ್ಚಿಸಿ, ಹೊಡೆದ ಪೊಲೀಸ್ ರಾಹುಲ್ ಯಾತ್ರೆಯಲ್ಲಿ ಈತ ಪೇಸಿಎಂ ಟೀ ಶರ್ಟ್ ಧರಿಸಿ, ಪೇಸಿಎಂ ಎಂಬ ಬಾವುಟ ಹಿಡಿದು ಅಕ್ಷಯ್ ಕುಮಾರ್ ಹೆಜ್ಜೆ ಹಾಕುತ್ತಿದ್ದರ ಸಂಬಂಧ ಚಾಮರಾಜನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸಾರ್ವಜನಿಕ ಜಾಗದಲ್ಲಿ ಈ ರೀತಿಯಾಗಿ Pay CM ಎಂಬ ಪ್ರದರ್ಶನ ಮಾಡಿದ್ದರಿಂದ ರಾಜ್ಯದ ಮುಖ್ಯಮಂತ್ರಿಗೆ ಅಪಮಾನವಾಗಿದೆ. ಹುದ್ದೆಯ ಗೌರವಕ್ಕೆ ಧಕ್ಕೆಯಾಗಿದೆ. ಹೀಗಾಗಿ ಮುಖ್ಯಮಂತ್ರಿ ಗೆ ಅವಮಾನ ಮಾಡಿರುವವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಗುಂಡ್ಲುಪೇಟೆ ಪುರಸಭಾ ಸದಸ್ಯರಾದ ಕಿರಣ್‌ಗೌಡ ಹಾಗು ಸುರೇಶ್ ಅವರು ಪೊಲೀಸರಿಗೆ ದೂರು ನೀಡಿದ್ದರು.

ಹೀಗಾಗಿ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 1860 (us505(1)(B), 507 ಹಾಗು ಐಟಿ ಆಕ್ಟ್ 2008 (us 66(D) ಅಡಿ ಎಫ್‌ಐಆರ್ ದಾಖಲಿಸಿದ್ದರು.
ಈತ ಶನಿವಾರ ಮತ್ತೆ ಮೆರವಣಿಗೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಆತನನ್ನು ಹಿಡಿಯಲಾಯಿತು. ಚಾಮರಾಜನಗರ ಎಸ್‌ಪಿ ಟಿ.ಪಿ ಶಿವಕುಮಾರ್ ಮುಂದಾಳತ್ವದಲ್ಲಿ ಆತನನ್ನು ವಶಕ್ಕೆ ಪಡೆದ ಪೊಲೀಸರು ಟಿ-ಶರ್ಟ್‌ ಬಿಚ್ಚಿಸಿದರು. ಇಷ್ಟೆಲ್ಲ ನಡೆದರೂ ಕಾಂಗ್ರೆಸ್‌ ಕಾರ್ಯಕರ್ತರು ಯಾರೂ ಪ್ರತಿಭಟನೆ ನಡೆಸಲಿಲ್ಲ. ಆತನ ಪರವಾಗಿ ನಿಲ್ಲಲಿಲ್ಲ ಎಂದು ವರದಿಯಾಗಿದೆ.

Donate Janashakthi Media

Leave a Reply

Your email address will not be published. Required fields are marked *