ಪರ್ಸೆಂಟೇಜ್‌ ಕಮಿಷನ್‌ ವ್ಯವಹಾರ ಕುದುರಿಸಿದ ಪಿಡಿಓ ಅಮರೇಶ್ ಅಮಾನತು

ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೈಗೊಳ್ಳುತ್ತಿರುವ ಕಾಮಗಾರಿಗಳಲ್ಲಿ ಪರ್ಸೆಂಟೇಜ್‌ ಕಮಿಷನ್ ಕುರಿತು ಮೊಬೈಲ್‌ ಮೂಲಕ‌ ವ್ಯವಹಾರಿಸುತ್ತಿದ್ದ ಸುದ್ದಿ ಜಾಹೀರಾಗಿದ್ದು, ಈ ಬಗ್ಗೆ ಕ್ರಮ ಕೈಗೊಂಡಿರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಪಿಡಿಓ ಅವರನ್ನು ಅಮಾನತು ಮಾಡಿದೆ.

ಪಾಮನಕಲ್ಲೂರು ಗ್ರಾಪಂ ಪಿಡಿಓ ಆಗಿದ್ದ ಅಮರೇಶ್ ತೋರಣದಿನ್ನಿ ಗ್ರಾಮ ಪಂಚಾಯತಿಗೆ ಪ್ರಭಾರಿ ಪಿಡಿಓ ಆಗಿಯೂ ಕೆಲಸ ಮಾಡುತ್ತಿದ್ದ. ಈತನ ಪರ್ಸೆಂಟೇಜ್‌ ವ್ಯವಹಾರದ ಬಗ್ಗೆ ವಿಡಿಯೋವೊಂದು ಹರಿದಾಡಿದ್ದು, ಸಾಕಷ್ಟು ಸುದ್ದಿ ಮಾಡಿತ್ತು. ಇದೀಗ ರಾಯಚೂರು ಸಿಇಓ ಶಶಿಧರ್‌ ಕುರೇರಾ ಅಮಾನತು ಆದೇಶ ಹೊರಡಿಸಿದ್ದಾರೆ ಎಂದು ವರದಿಯಾಗಿದೆ.

ಎರಡೂ ಪಂಚಾಯತಿಗಳಲ್ಲೂ ಕರ್ತವ್ಯ ಲೋಪ ಹಾಗೂ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ನಿರ್ಲಕ್ಷ್ಯ ತೋರಿರುವ ಆರೋಪ ಅಮರೇಶ್ ತೋರಣದಿನ್ನಿ ಮೇಲಿದೆ. ಕಾಮಗಾರಿಯೊಂದಕ್ಕೆ ಸಂಬಂಧಪಟ್ಟಂತೆ ನಡುರಸ್ತೆಯಲ್ಲೇ ಮೊಬೈಲ್‌ನಲ್ಲಿ ತನಗೆ ತಲುಪಬೇಕಾದ ಮೊತ್ತದ ಬಗ್ಗೆ ಚರ್ಚೆ ನಡೆಸಿದ್ದಾರೆ.

ಈ ಕುರಿತು ಕಾರಣ ಕೇಳಿ ನೋಟಿಸು ನೀಡಲಾಗಿದ್ದರೂ ಅಮರೇಶ್ ತೋರಣದಿನ್ನಿ ಉತ್ತರಿಸಿರಲಿಲ್ಲ. ಹೀಗಾಗಿ ರಾಯಚೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪಿಡಿಓ ಅಮರೇಶ್‌ ನನ್ನ ಅಮಾನತುಗೊಳಿಸಿ ಎಂದು ಆದೇಶ ಹೊರಡಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *