ಬೆಂಗಳೂರಿನಂಥಹ ನಗರದಲ್ಲಿ ಟೋಯಿಂಗ್ ಅವಶ್ಯಕತೆ ಇದೆ; ಐಪಿಎಸ್ ಪ್ರತಾಪ್‌ ರೆಡ್ಡಿ ಹೇಳಿಕೆ

ಬೆಂಗಳೂರು: ಕರ್ನಾಟಕ ಸರ್ಕಾರದ ಫೆಬ್ರುವರಿಯಿಂದ  ನೋ ಪಾರ್ಕಿಂಗ್ ಝೋನ್‌ಗಳಿಂದ ಟೋಯಿಂಗ್‌ ಮಾಡಿವುದನ್ನು  ಸ್ಥಗಿತಗೊಳಿಸಿದ್ದು ಈ ನಿರ್ಧಾರವು ನಾಗರಿಕರಿಗೆ ನಿರಾಳಗೊಳಿಸಿತ್ತು. ಆದರೆ ಈಗ ನಗರದಲ್ಲಿ ಮತ್ತೆ ಟೋಯಿಂಗ್‌ ಆರಂಭಿಸುವ ಸಾಧ್ಯತೆಗಳು ಕಂಡು ಬರುತ್ತಿವೆ.

ಹೈಕೋರ್ಟ್ ಟೋಯಿಂಗ್ ಬಗ್ಗೆ ಪರಿಶೀಲನೆಗೆಂದು ಕಾಲಾವಕಾಶ ನೀಡಿದ ಹಿನ್ನಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಂಥ ನಗರದಲ್ಲಿ ಟೋಯಿಂಗ್ ಅವಶ್ಯಕತೆ ಇದೆ. ಎಲ್ಲೆಲ್ಲಿ ಟೋಯಿಂಗ್ ಅವಶ್ಯಕತೆ ಇದೆ ಅನ್ನೋ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದರು. ಆದರೆ ಈ ನಿಯಮದಲ್ಲಿ ಕೆಲವು ಲೋಪದೋಷಗಳು ಹಾಗೂ ದೂರುಗಳಿದ್ದು, ಯಾವ ಪದ್ಧತಿ, ಮಾರ್ಗದರ್ಶನದಡಿ ಟೋಯಿಂಗ್ ಬಳಕೆ ಆಗಬೇಕು ಎಂದು ತೀರ್ಮಾನಿಸಲಿದ್ದೇವೆ. ಪೊಲೀಸ್ ಇಲಾಖೆಗೆ ಯಾವುದೇ ರೀತಿಯಾಗಿ ದೂರು ಬರದೆ ಇರುವ ರೀತಿಯಲ್ಲಿ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ” ಎಂದು ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ

ನಗರದಲ್ಲಿ ವಾಹನಗಳಿಗೆ ಟೋಯಿಂಗ್ ಮಾಡುವುದನ್ನು ಸರ್ಕಾರ ಸ್ಥಗಿತಗೊಳಿಸಿದ ಹಿನ್ನೆಲೆ ಟೋಯಿಂಗ್ ವಾಹನ ಮಾಲೀಕರು, ಕಾರ್ಮಿಕರ ಸಂಘ ಹೈಕೋರ್ಟ್​ಗೆ ರಿಟ್​ ಅರ್ಜಿ ಸಲ್ಲಿಸಿದ್ದವು. ರಿಟ್​ ಅರ್ಜಿಯಲ್ಲಿ ಆಂಧ್ರಪ್ರದೇಶ, ತೆಲಂಗಾಣ ಮಾದರಿಯ ಟೋಯಿಂಗ್ ಬೇಕು ಎಂದು ಹೈಕೋರ್ಟ್​ಗೆ ಮನವಿ ಮಾಡಿದ್ದವು. ಸಂಘದ ಮನವಿ ಕುರಿತು ತೀರ್ಮಾನ ಕೈಗೊಳ್ಳಲು ಸರ್ಕಾರ ವಿಳಂಬ ಮಾಡುತ್ತಿರುವುದಕ್ಕೆ ಹೈಕೋರ್ಟ್​ ತರಾಟೆಗೆ ತೆಗೆದುಕೊಂಡಿತ್ತು.

ಹೈಕೋರ್ಟ್ ಏಕಸದಸ್ಯ ಪೀಠ 6 ವಾರಗಳಲ್ಲಿ ಸಂಘದ ಮನವಿಯನ್ನು ಪರಿಗಣಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ. ಸಂವಿಧಾನ ಬಯಸಿದ್ದ ಕಲ್ಯಾಣ ರಾಜ್ಯ ಸಾಕಾರಗೊಂಡಿಲ್ಲ. ಸರ್ಕಾರದ ನಡೆಯನ್ನು ಕಂಡು ಹೈಕೋರ್ಟ್ ಡಿ.ವಿ.ಗುಂಡಪ್ಪನವರ ಮಂಕುತಿಮ್ಮನ ಕಗ್ಗ ಉಲ್ಲೇಖಿಸಿತ್ತು.

‘ಸರ್ಕಾರ ಹರಿಗೋಲು, ತೆರಸುಳಿಗಳತ್ತಿತ್ತ’ ‘ಸುರೆ ಕುಡಿದವರು ಕೆಲರು ಹುಟ್ಟು ಹಾಕುವರು’ ‘ಬಿರುಗಾಳಿ ಬೀಸುವುದು, ಜನರೆದ್ದು ಕುಣಿಯುವುದು’ ‘ಉರುಳದಿಹದಚ್ಚರಿಯೋ ಮಂಕುತಿಮ್ಮ’ ಎಂದು ನ್ಯಾ.ಕೃಷ್ಣ ಎಸ್.ದೀಕ್ಷಿತ್ ಡಿ.ವಿ.ಜಿಯವರ ಸಾಹಿತ್ಯ ಉಲ್ಲೇಖಿಸಿದ್ದಾದ್ದರು.

ಈಗಾಗಲೇ ಟೋಯಿಂಗ್‌ಗಾಗಿ ಹಲವು ನಿಯಮಗಳನ್ನು ಜಾರಿ ಮಾಡಿದ್ದರು ನಗರ ಸಂಚಾರಿ ಪೊಲೀಸರು ಮತ್ತಷ್ಟು ಕಠಿಣ ನಿಯಮ ಜಾರಿ ಮಾಡಲು ಮುಂದಾಗಿದೆ. ಟೋಯಿಂಗ್ ಮಾಡುವಾಗ ಗೈಡ್‌ ಲೈನ್‌ಗಳನ್ನು ಪಾಲಿಸಲು ಕಟ್ಟು ನಿಟ್ಟಿನ ಆಜ್ಞೆಯನ್ನು ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ. ಆರು ವಾರಗಳಲ್ಲಿ ಮತ್ತೆ ಟೋಯಿಂಗ್ ವಾಹನ ರೋಡಿಗಿಳಿಯುವುದು ಬಹುತೇಕ ಖಚಿತವಾಗುತ್ತಿದೆ.

Donate Janashakthi Media

Leave a Reply

Your email address will not be published. Required fields are marked *