ಬೆಂಗಳೂರು : ಇಂದು (ಸೆಪ್ಟೆಂಬರ್ 14) ದೇಶಾದ್ಯಾಂತ ರಾಷ್ಟೀಯ ಹಿಂದಿ ದಿನಾಚರಣೆ ಆಚರಿಸಲಾಗಿದೆ. ಹಲವೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದರೆ ಮತ್ತೊಂದಡೆ ತೀವ್ರ ವಿರೋಧ ವ್ಯಕ್ತವಾಗಿದೆ.
ಹಿಂದಿ ದಿವಸ್ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ, “ಹಿಂದಿ ಪ್ರಪಂಚದಾದ್ಯಂತ ಭಾರತಕ್ಕೆ ವಿಶೇಷ ಗೌರವವನ್ನು ತಂದಿದೆ. ಅದರ ಸರಳತೆ, ಸ್ವಾಭಾವಿಕತೆ ಮತ್ತು ಸೂಕ್ಷ್ಮತೆ ಯಾವಾಗಲೂ ಆಕರ್ಷಿಸುತ್ತದೆ. ಹಿಂದಿ ದಿವಸ್ನಲ್ಲಿ, ಇದನ್ನು ಸಮೃದ್ಧಗೊಳಿಸಲು ಮತ್ತು ಸಬಲೀಕರಣಗೊಳಿಸಲು ಕೊಡುಗೆ ನೀಡಿದ ಎಲ್ಲ ಜನರಿಗೆ ನಾನು ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ” ಎಂದು ಶುಭ ಕೋರಿದರು.
ಇದರ ಬೆನ್ನಲ್ಲೆ, ಹಿಂದಿ ದಿವಸ್ ಆಚರಣೆ ಕುರಿತು ವಿವಾದಗಳು ಎದ್ದಿದ್ದು, ಹಿಂದಿಯನ್ನು ರಾಷ್ಟ್ರ ಭಾಷೆಯನ್ನಾಗಿ ಸ್ವೀಕರಿಸಬೇಕೆಂದು ಕೆಲವರು ವಾದಿಸುತ್ತಿದ್ದಾರೆ. ಭಾರತವು ವೈವಿದ್ಯತೆಯ ದೇಶವಾಗಿದ್ದು, ನಮ್ಮಲ್ಲಿ ಸಾವಿರಾರು ಭಾಷೆಗಳನ್ನು ಮಾತನಾಡಲಾಗುತ್ತದೆ. ಆದರೆ ಕೇವಲ ಹಿಂದಿಯನ್ನು ಮಾತ್ರ ದೇಶದ ಭಾಷೆಯನ್ನಾಗಿ ಹೇರಿಕೆ ಮಾಡುವುದು ತಪ್ಪು ಎಂಬುದು ಹಲವರ ವಾದವಾಗಿದೆ. ಭಾರತದ ಸಂವಿಧಾನದ ಪ್ರಕಾರ ಒಟ್ಟು 22 ಅಧಿಕೃತ ಭಾಷೆಗಳಿದ್ದು, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಹಿಂದಿ, ಕನ್ನಡ, ಕಾಶ್ಮೀರಿ, ಕೊಂಕಣಿ, ಮಲಯಾಳಂ,ಮಣಿಪುರಿಮರಾಠಿ, ನೇಪಾಳಿ, ಒರಿಯಾ, ಪಂಜಾಬಿ, ಸಂಸ್ಕೃತ, ಸಿಂಧಿ, ತಮಿಳು, ತೆಲುಗು, ಉರ್ದು ಬೋಡೊ, ಸಂತಾಲಿ, ಮೈಥಿಲಿ ಮತ್ತು ಡೋಗ್ರಿ ಇವುಗಳು ಭಾರತದ ಅಧಿಕೃತ ಭಾಷೆಗಳಾಗಿವೆ. ಉತ್ತರ ಭಾರತದಲ್ಲಿ ಹಿಂದಿ ಭಾಷಿಗರು ಹೆಚ್ಚಿದ್ದು , ದಕ್ಷಿಣ ಭಾರತದಲ್ಲಿ ಕಡಿಮೆ ಪ್ರಮಾಣದಲ್ಲಿ ಹಿಂದಿ ಮಾತಾಡಲಾಗುತ್ತದೆ. ದಕ್ಷಣ ಭಾರತದಲ್ಲಿ ಹಿಂದಿ ಕಲಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಭಾರತದಲ್ಲಿ ದಕ್ಷಿಣ ಭಾಷೆಗಳಿಗೂ ಪ್ರಾಮುಖ್ಯತೆ ನೀಡಬೇಕೆಂಬುದು ಇವರ ಬೇಡಿಕೆ ಯಾಗಿದೆ. ಕರ್ನಾಟಕದಲ್ಲಿ ಸಹ ವಿರೋಧ ಜೋರಿದ್ದು, ಅನೇಕ ಪ್ರತಿಭಟನೆಗಳು ನಡೆಯುತ್ತಿದ್ದು, ಕೆಲವು ರಾಜಕರಣಿಗಳು, ಸಿನಿಮಾ ನಟರು ಹಿಂದಿ ಹೇರಿಕೆ ವಿರುದ್ದ ಹೇಳಿಕೆ ನೀಡಿದ್ದಾರೆ.
ಜೆಡಿಎಸ್ ಮುಖಂಡ ಕುಮಾರಸ್ವಮಿ ಯವರು ಸಿಎಂ ಬೊಮ್ಮಯಿಯವರಿಗೆ ಕರ್ನಾಟಕದಲ್ಲಿ ಹಿಂದಿ ದಿವಸ್ ಆಚರಿಸಕೂಡದೆಂದು ಪತ್ರ ಬರೆದಿದ್ದು, ಜೆಡಿಎಸ್ ಕಾರ್ಯಕರ್ತರು ವಿಧಾನಸೌದದ ಬಳಿ ಇರುವ ಗಾಂಧಿ ಪ್ರತಿಮೆಯ ಬಳಿ ನಿಂತು ಕನ್ನಡ ಹಾಡುಗಳನ್ನು ಹಾಡಿ ವಿರೋಧ ತೋರಿಸಿದ್ದಾರೆ. ಸಿಎಂ ಇಬ್ರಾಹಿಂ ಅವರು ” ನಮ್ಗೇನ್ ಹಿಂದಿ ಬೇಕಿಲ್ಲ.. ನಾವೇನ್ ಉತ್ತರ ಭಾರತಕ್ಕೆ ಪಾನಿಪೂರಿ ಮಾರೋಕ್ಕೆ ಹೋಗಲ್ಲ” ಎಂದು ಟ್ವೀಟ್ ಮಾಡಿದ್ದು, ಸಿ ಟಿ ರವಿ “ಹಿಂದಿ ದಿವಸ್ ಅಷ್ಟೇ ಅಲ್ಲ ಬೇರೆ ರಾಜ್ಯದ ಭಾಷೆ ಉತ್ಸವವನ್ನೂ ಆಚರಿಸಿದ್ರೆ ತಪ್ಪೇನು” ಎಂದು ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ”ಯಾವ ಭಾಷೆಯ ಕಲಿಕೆಯನ್ನೂ ವಿರೋಧಿಸುವುದಿಲ್ಲ,ಯಾವ ಭಾಷೆಯ ಹೇರಿಕೆಯನ್ನೂ ಸಹಿಸುವುದಿಲ್ಲ” ಎಂದು ತಮ್ಮ ಫೇಸ್ ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ. ‘ಹಿಂದಿ ದಿವಸ್’ ಬದಲು ನಾಡಭಾಷೆ ದಿನ ಆಚರಣೆಗೆ ಕೆಆರ್ಎಸ್ ಪಕ್ಷದ ಕರೆ ನೀಡಿದೆ.
ಹಿಂದಿ ದಿವಸ್ ಆಚರಣೆಯನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರು, ಕಾರ್ಯಕರ್ತರು ನಗರದ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಡಾ ನಾರಾಯಣಗೌಡ ಪ್ರತಿಭಟನೆಯಲ್ಲಿ ಪಾಲ್ಗೊಂಡು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಅಧ್ಯಕ್ಷ ಡಾ ನಾರಾಯಣಗೌಡ, ಕೇಂದ್ರ ಸರ್ಕಾರದ ಹಿಂದಿ ದಿವಸ್ ಆಚರಣೆಗೆ ನಮ್ಮ ತೀವ್ರ ವಿರೋಧವಿದೆ. ಸ್ವಾತಂತ್ರ್ಯ ಬಂದು 75 ವರ್ಷವಾಗಿ ಅಮೃತ ಮಹೋತ್ಸವ ಆಚರಿಸಿದ್ದೇವೆ. ಒಂದು ರಾಷ್ಟ್ರ, ಒಂದೇ ಭಾಷೆ ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ. ಆ ಮೂಲಕ ತಮ್ಮ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಭಾವನಾತ್ಮಕ ವಿಚಾರಗಳನ್ನು ಕೆದುಕುತ್ತಿದ್ದಾರೆ ಎಂದು ಟೀಕಿಸಿದರು.
ಹಿಂದಿ ದಿನಾಚರಣೆ ಬದಲಾಗಿ ಭಾಷೆಗಳ ದಿನಾಚರಣೆ ಆಚರಿಸಬೇಕು, ತ್ರಿಭಾಷಾ ಸೂತ್ರದ ಬದಲು ಧ್ವಿಬಾಷಾ ಸೂತ್ರ ಬಳಿಸಬೇಕೆಂದು, ಹಿಂದಿ ಭಾಷೆಯ ಹೇರಿಕೆ ನಿಲ್ಲಬೇಕೆಂದು, ಕರ್ನಾಟಕದಲ್ಲಿ ಸಾರ್ವಜನಿಕ ಸ್ಥಳಗಳಾದ ಬಾಂಕ್, ಬಸ್ ನಿಲ್ದಾಣ, ರೈಲು ನಿಲ್ದಾಣ ಮುಂತಾದಲ್ಲಿ60% ಕನ್ನಡವನ್ನೇ ಬಳಿಸಬೇಕೆಂದು, ರಾಜ್ಯದ ನಾನಾ ಕಡೆಗಳಲ್ಲಿ ಪ್ರತಿಭಟನೆಗಳು, ಹೋರಾಟಗಳು ನಡೆದಿವೆ.