23 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ವಿಜೇತೆ ಟೆನಿಸ್‌ ಕ್ರೀಡೆಗೆ ವಿದಾಯ ಘೋಷಿಸಿದ ಸೆರೆನಾ ವಿಲಿಯಮ್ಸ್‌

ವಾಷಿಂಗ್ಟನ್‌: ಈವರೆಗೂ ಒಟ್ಟು 23 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿರುವ ವಿಶ್ವದ ಶ್ರೇಷ್ಠ ಟೆನಿಸ್ ಆಟಗಾರ್ತಿ ಅಮೆರಿಕದ ಸೆರೆನಾ ವಿಲಿಯಮ್ಸ್, ಟೆನಿಸ್‌ ಕ್ರೀಡೆಗೆ ವಿದಾಯ ಘೋಷಿಸಿದ್ದಾರೆ.

ಟೆನಿಸ್ ವೃತ್ತಿ ಜೀವನದಲ್ಲಿ ಹಲವು ಏಳು-ಬೀಳುಗಳನ್ನು ಕಂಡಿರುವ 40 ವರ್ಷದ ಸೆರೆನಾ ವಿಲಿಯಮ್ಸ್‌, ತಲಾ ಏಳು ಬಾರಿ ಆಸ್ಟ್ರೇಲಿಯನ್ ಓಪನ್ ಹಾಗೂ ವಿಂಬಲ್ಡನ್, ಆರು ಬಾರಿ ಅಮೆರಿಕನ್ ಓಪನ್ ಮತ್ತು ಮೂರು ಸಲ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

‘ನನ್ನನ್ನು ಬೆಂಬಲಿಸಿದ ಎಲ್ಲರಿಗೂ ನಾನು ಧನ್ಯವಾದಗಳು. ಅವರಿಂದಾಗಿಯೇ ಇಷ್ಟು ದಶಕಗಳಿಂದ ಸ್ಪರ್ಧಿಸಲು ಸಾಧ್ಯವಾಯಿತು. ನನ್ನ ಪೋಷಕರಿಂದಾಗಿ ಇವೆಲ್ಲವೂ ಪ್ರಾರಂಭವಾಯಿತು. ಎಲ್ಲ ಶ್ರೇಯಕ್ಕೂ ಅವರು ಅರ್ಹರು. ಹೆತ್ತವರಿಗೆ ಆಭಾರಿಯಾಗಿದ್ದೇನೆ. ಇದು ನನ್ನ ಆನಂದಭಾಷ್ಪ ಎಂದು ಭಾವಿಸುತ್ತೇನೆ. ವೀನಸ್ ಇಲ್ಲದಿರುತ್ತಿದ್ದರೆ ನಾನು ಸೆರೆನಾ ಆಗಲು ಸಾಧ್ಯವಾಗುತ್ತಿರಲಿಲ್ಲ. ವೀನಸ್ ಅವರಿಂದಾಗಿಯೇ ಸೆರೆನಾ ಅಸ್ವಿತ್ವದಲ್ಲಿದ್ದಾಳೆ’ ಎಂದು ಸೋದರಿಗೆ ಧನ್ಯವಾದಗಳನ್ನು ಸಲ್ಲಿಸಿದರು.

1995ರಲ್ಲಿ 14ನೇ ಹರೆಯದಲ್ಲಿಯೇ ಟೆನಿಸ್‌ ಕ್ರೀಡಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಸೆರೆನಾ ವಿಲಿಯಮ್ಸ್‌, 1999ರಲ್ಲಿ ಮೊದಲ ಗ್ರ್ಯಾನ್‌ಸ್ಲಾಮ್ (ಅಮೆರಿಕನ್ ಓಪನ್) ಜಯಿಸಿದರು. ಬಳಿಕ, ಅಲ್ಲಿಂದ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಅಧಿಪತ್ಯ ಸಾಧಿಸಿದರು. ಸೋದರಿ ವೀನಸ್ ವಿಲಿಯಮ್ಸ್ ಜೊತೆ ಸೇರಿ ಮಹಿಳಾ ಡಬಲ್ಸ್‌ ವಿಭಾಗದಲ್ಲೂ ಅಮೋಘ ಸಾಧನೆ ಮಾಡಿರುವ ಸೆರೆನಾ, ಒಟ್ಟು 14 ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಈ ಮೂಲಕ ಮಹಿಳಾ ಸಿಂಗಲ್ಸ್ ಹಾಗೂ ಮಹಿಳಾ ಡಬಲ್ಸ್ ವಿಭಾಗದಲ್ಲಿ ‘ಕೆರಿಯರ್ ಗ್ರ್ಯಾನ್‌ಸ್ಲಾಮ್’ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ್ತಿ ಎನಿಸಿದ್ದಾರೆ.

ಸೆರೆನಾ ವಿಲಿಯಮ್ಸ್ ಕಳೆದ ತಿಂಗಳು ನಿವೃತ್ತಿಯಾಗುವ ಸೂಚನೆ ನೀಡಿದ್ದರು. ಆದರೆ, ಯುಎಸ್ ಓಪನ್ ಪಂದ್ಯವೇ ಅವರ ಕೊನೆಯ ಪಂದ್ಯವೆಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಆ ಸಂದರ್ಭದಲ್ಲಿ ಅವರು ತಾನು ಏನು ಮಾಡುತ್ತಿದ್ದೇನೆ ಎಂಬುದನ್ನು ವಿವರಿಸಲು ಅತ್ಯುತ್ತಮ ಪದವೆಂದರೆ “ವಿಕಸನ” ಎಂಬುದಾಗಿ ಸೂಚಿಸಿದ್ದರು. ಅಲ್ಲದೆ ತನ್ನ ಕುಟುಂಬವನ್ನು ಸಲಹಲು ಬಯಸುತ್ತಿರುವುದಾಗಿ ಹೇಳಿದರು.

ತವರು ನಾಡಿನಲ್ಲಿ ನಡೆಯುತ್ತಿರುವ ಅಮೆರಿಕನ್ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯ ಮೂರನೇ ಸುತ್ತಿನಲ್ಲಿ 46ನೇ ಶ್ರೇಯಾಂಕಿತ ಆಸ್ಟ್ರೇಲಿಯನ್‌ ಆಟಗಾರ್ತಿ ಅಜ್ಲಾ ಟೊಮ್ಲಜಾನೊವಿಕ್ ವಿರುದ್ಧ ಸೋಲುವ ಮೂಲಕ ಯುಎಸ್‌ ಓಪನ್‌ನಿಂದ ಹೊರಕ್ಕೆ ಬಿದ್ದರು. ಈ ಮೂಲಕ ಕೊನೆಯ ಪ್ರಶಸ್ತಿ ಗೆಲ್ಲುವ ಅವರ ಕನಸು ಈಡೇರಲಿಲ್ಲ. ಸ್ಪರ್ಧೆಯಲ್ಲಿ ಅಜ್ಲಾ ಟೊಮ್ಲಜಾನೊವಿಕ್‌ಗೆ ತೀವ್ರ ಪೈಪೋಟಿ ನೀಡಿದ್ದ ಸೆರೆನಾ ವಿಲಿಯಮ್ಸ್‌ಗೆ ಈ ಸೋಲು ಕಷ್ಟಕರವಾಗಿತ್ತು. ಅಜ್ಲಾ ಟೊಮ್ಲಜಾನೊವಿಕ್‌ ವಿರುದ್ಧ 7-5 6-7 (4) 6-1 ಅಂಕವನ್ನು ಸೆರೆನಾ ವಿಲಿಯಮ್ಸ್‌ ಪಡೆದರು.

ವಿಶ್ವ ದರ್ಜೆಯಲ್ಲಿ ಎರಡನೇ ಶ್ರೇಯಾಂಕದಲ್ಲಿರುವ ಸೆರೆನಾ ವಿಲಿಯಮ್ಸ್‌ ಅವರು ಅನೆಟ್ ಕೊಂಟಾವೀಟ್ ವಿರುದ್ಧ ಎರಡನೇ ಸುತ್ತಿನಲ್ಲಿ ಗೆಲುವನ್ನು ಪಡೆದ ಮೂರು ಪಂದ್ಯಗಳು ಅವಳ ಅಭಿಮಾನಿಗಳಿಗೆ ಉಡುಗೊರೆಯಾಗಿವೆ. ಪಟ್ಟುಬಿಡದೆ ದೃಢ ಮನೋಭಾವಿಂದಾಗಿ ಆಡಿದ್ದರಿಂದಾಗಿ ಅವರ ಎರಡು ದಶಕಗಳ ಟೆನಿಸ್‌ ಆಟವು ಪ್ರಬಲ ಸ್ಪರ್ಧೆಯನ್ನು ಅಂತಿಮ ಹಂತದವರೆಗೂ ಪ್ರದರ್ಶಿಸಿತು.

ಸೆರೆನಾ ವಿಲಿಯಮ್ಸ್ ಗ್ರ್ಯಾನ್‌ಸ್ಲಾಮ್ ಸಾಧನೆ (ಮಹಿಳಾ ಸಿಂಗಲ್ಸ್)

ಆಸ್ಟ್ರೇಲಿಯನ್ ಓಪನ್ (2003, 2005, 2007, 2009, 2010, 2015, 2017)
ಫ್ರೆಂಚ್ ಓಪನ್ (2002, 2013, 2015)
ವಿಂಬಲ್ಡನ್ (2002, 2003, 2009, 2010, 2012, 2015, 2016)
ಅಮೆರಿಕನ್ ಓಪನ್ (1999, 2002, 2008, 2012, 2013, 2014)

Donate Janashakthi Media

Leave a Reply

Your email address will not be published. Required fields are marked *