39 ಮಕ್ಕಳಿಗೆ ಒಂದೇ ಸಿರಿಂಜ್​ನಿಂದ ಕೋವಿಡ್‌ ಲಸಿಕೆ: ಎಫ್​ಐಆರ್ ದಾಖಲು

ಸಾಗರ್ (ಮಧ್ಯ ಪ್ರದೇಶ): 39 ಮಕ್ಕಳಿಗೆ ಒಂದೇ ಸಿರಿಂಜ್​ನಿಂದ ಕೋವಿಡ್​-19 ಲಸಿಕೆಯನ್ನು ನೀಡಿರುವ ಪ್ರಕರಣ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ. ಚುಚ್ಚುಮದ್ದು ನೀಡುವವರು ಎಲ್ಲ ಮಕ್ಕಳಿಗೂ ಒಂದೇ ಸಿರಿಂಜ್ ಉಪಯೋಗಿಸುವುದಂತ ಕಂಡ ಮಕ್ಕಳ ಪೋಷಕರು ಆಕ್ಷೇಪವೆತ್ತಿದಾಗ ಘಟನೆ ಬೆಳಕಿಗೆ ಬಂದಿದೆ.

ಲಸಿಕೆ ಹಾಕಿದ ಸಿಬ್ಬಂದಿ ಜಿತೇಂದ್ರ ಅಹಿರ್ವಾರ್‌ ಎನ್ನಲಾಗಿದ್ದು, ಆತನ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಬೃಹತ್‌ ಲಸಿಕೆ ಅಭಿಯಾನದ ಭಾಗವಾಗಿ ನಗರದ ಜೈನ್‌ ಹೈಯರ್ ಸೆಕಂಡರಿ ಶಾಲೆಯಲ್ಲಿ ಲಸಿಕೆ ನೀಡುವ ಸಿಬ್ಬಂದಿಯ ಬೇಜವಾಬ್ದಾರಿತನದಿಂದ ಈ ಪ್ರಕರಣ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

39 ಮಕ್ಕಳಿಗೆ ಒಂದೇ ಸಿರಿಂಜ್​ ಲಸಿಕೆಯನ್ನು ನೀಡಲಾಗಿದೆ. ಲಸಿಕೆ ನೀಡಿದ ಆರೋಪಿ ಅಹಿರ್ವಾರ್ ಸ್ಥಳದಿಂದ ಪರಾರಿಯಾಗಿದ್ದು, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ.

​​ಪಾಲಕರ ಆಕ್ರೋಶದಿಂದ ಸಾಗರ್​ ವಿಭಾಗೀಯ ಆರೋಗ್ಯ ಅಧಿಕಾರಿ ಕ್ಷಿತಿಜ್ ಸಿಂಘಾಲ್, ಜಿಲ್ಲಾ ಮುಖ್ಯ ವೈದ್ಯಾಧಿಕಾರಿ ಮತ್ತು ಆರೋಗ್ಯ ಅಧಿಕಾರಿಯಾಗಿರುವ ಡಾ. ಡಿ ಕೆ ಗೋಸ್ವಾಮಿ ಅವರನ್ನು ಕಳುಹಿಸಿ ಘಟನೆಯ ಪರಿಶೀಲನೆ ಮಾಡುವಂತೆ ಸೂಚಿಸಿದ್ದಾರೆ.

ಭಾರತೀಯ ದಂಡ ಸಂಹಿತೆ ಸೆಕ್ಷನ್ 336 ಅಡಿ (ಉದ್ವೇಗ ಅಥವಾ ನಿರ್ಲಕ್ಷ್ಯದ ಕ್ರಿಯೆ ಮಾನವ ಜೀವ ಅಥವಾ ಇತರರ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುತ್ತದೆ)ಯಲ್ಲಿ ಜಿತೇಂದ್ರ ಅಹಿರ್ವಾರ್‌ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಗೋಪಾಲ್ ಗಂಜ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಿಎಂಎಚ್‌ಒ ವರದಿಯ ಆಧಾರದ ಮೇಲೆ ಜಿಲ್ಲಾಧಿಕಾರಿ ಶಿಫಾರಸು ಮಾಡಿದ್ದಾರೆ. ವಿಭಾಗೀಯ ಆಯುಕ್ತರು ಇಲಾಖಾ ತನಿಖೆ ಮತ್ತು ಜಿಲ್ಲಾ ಲಸಿಕೆ ಅಧಿಕಾರಿ ಡಾ.ರಾಕೇಶ್ ರೋಷನ್ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.

ಲಸಿಕೆ ಪಡೆದ 39 ಮಕ್ಕಳೂ 15 ವರ್ಷ ಮೇಲ್ಪಟ್ಟ ಹಾಗೂ 9ರಿಂದ 12ನೇ ತರಗತಿ ಒಳಗಿನವರಾಗಿದ್ದಾರೆ. ಸದ್ಯ ಎಲ್ಲ ಮಕ್ಕಳ ತಪಾಸಣೆ ನಡೆಸಲಾಗಿದ್ದು, 19 ಮಕ್ಕಳ ಆರೋಗ್ಯ ಸ್ಥಿರವಾಗಿದೆ. ಉಳಿದ ಮಕ್ಕಳ ವರದಿಗಳು ಇನ್ನಷ್ಟೇ ಬರಬೇಕಿದೆ.

Donate Janashakthi Media

Leave a Reply

Your email address will not be published. Required fields are marked *