ಶಿಕ್ಷಣ ಎನ್ನುವುದು ವಿಸ್ತಾರ ನೆಲೆಯಲ್ಲಿ ಯೋಚಿಸುವ ಕ್ರಮವಾಗಬೇಕು

ಪಡುಕೋಣೆ: ಜನಶಕ್ತಿ ಸೇವಾ ಟ್ರಸ್ಟ್ (ರಿ) ನಾಡ ಹಾಗೂ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿವೈಎಫ್‌ಐ), ಪಡುಕೋಣೆ. ಇವರ ಸಹಯೋಗದೊಂದಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಜರುಗಿತು.

2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 600 ಕ್ಕಿಂತ ಅಧಿಕ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 95 ಶೇಕಡಾ ಕ್ಕಿಂತ ಅಧಿಕ ಅಂಕವನ್ನು ಪಡೆದ 15 ವಿದ್ಯಾರ್ಥಿಗಳನ್ನು ಗುರುತಿಸಿ ನಾಡ ಗುಡ್ಡೆಯಂಗಡಿಯಲ್ಲಿರುವ ಜನಶಕ್ತಿ ಕಛೇರಿಯಲ್ಲಿ ಸನ್ಮಾನಿಸಿ ಗೌರವಿಸಲಾಯಿತ್ತು.

ಸಮಾರಂಭ ಉದ್ಘಾಟಿಸಿದ ಸಮುದಾಯ ಕುಂದಾಪುರ ಇದರ ಸದಸ್ಯ ಸದಾನಂದ ಬೈಂದೂರು, ನಾನು 40 ವರ್ಷದಿಂದ ಶಿಕ್ಷಕ ವೃತ್ತಿಯನ್ನು ಮಾಡುತ್ತಿದ್ದೇನೆ. ನನಗೆ ಇಂದಿನ ದಿನಗಳಲ್ಲಿ ಮಕ್ಕಳ ಶಿಕ್ಷಣದ ವ್ಯವಸ್ಥೆ ಬಗ್ಗೆ ತುಂಬಾ ನೋವುವಿದೆ. ಮಕ್ಕಳು ಎಲ್ಲರಿಗೂ ಒಂದೇ ತೆರನಾದ ಶಿಕ್ಷಣ ಕಲಿಯಲು ಸಾಧ್ಯವಿಲ್ಲ ಎಂದರು.

ಮುಂದುವರೆದು ಮಾತನಾಡಿದ ಅವರು, ಪಾಠಗಳನ್ನು ಓದಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುವುದೆ ಸಾಧನೆ ಎಂದು ಮಕ್ಕಳಿಗೆ ಪೋಷಕರು, ಶಿಕ್ಷಕರು ಒತ್ತಡ ಹೇರುತೇವೆ. ನಾವು ಶಿಕ್ಷಕರು ಅನಿವಾರ್ಯ ಕಾರಣಗಳಿಂದಾಗಿ  ಎಲ್ಲಾ ಮಕ್ಕಳನ್ನು ಒಂದು ತರಗತಿಯಲ್ಲಿ ಕುಳಿರಿಸಿ ಪಾಠ ಮಾಡುತ್ತೇವೆ. ಆದರೆ ಕೆಲವು ಮಕ್ಕಳಿಗೆ ಅಲ್ಲಿ ಕುಳಿತುಕೊಳ್ಳಲು ತುಂಬಾ ಕಷ್ಟ ಪಡುವುದು ನೋಡಿದ್ದೇವೆ. ಅಂದರೆ ಶಿಕ್ಷಣ ಅನ್ನುವುದು ವಿಸ್ತಾರ ನೆಲೆಯಲ್ಲಿ ನಾವು ಆಲೋಚಿಸುವ ಅಗತ್ಯವಿದೆ ಎಂದರು.

ಮಕ್ಕಳಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆ ಅಲ್ಲಿ ಅವರಿಗೆ ತೊಡಗಲು ಅವಕಾಶವನ್ನು ಹೆಚ್ಚಿಸಬೇಕು. ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಆಸಕ್ತಿ ಇರುವ ಮಕ್ಕಳಿಗೆ ಇಂದು ಅವಕಾಶ ಸಿಗುತ್ತಿಲ್ಲ. ಇಂದು ಉತ್ತಮ ಅಂಕಗಳನ್ನು ಪಡೆದು ಗೆದ್ದವರು ನಿಮ್ಮ ಮುಂದಿನ ಜೀವನ ರೂಪಿಸಿಕೊಳ್ಳುವ ಅವಕಾಶ ಇದ್ದಂತೆ ಸೊತವರಿಗೂ ಹಲವಾರು ಅವಕಾಶಗಳನ್ನು ಹುಡುಕಿಕೊಂಡು ಜೀವನ ರೂಪಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಜನಶಕ್ತಿ ಸೇವಾ ಟ್ರಸ್ಟ್ (ರಿ) ನಾಡ ಇದರ ಅಧ್ಯಕ್ಷ ಪಿಲಿಪ್ ಡಿ.ಸಿಲ್ವಾ ವಹಿಸಿದ್ದರು. ಪಡುಕೋಣೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ರಾಜೀವ ಪಡುಕೋಣೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ  ನಾಗರಾಜ್ ಕುರು ಡಿವೈಎಫ್‌ಐ ಅಧ್ಯಕ್ಷರು, ದೀಕ್ಷಿತ ರಜಾರಂಗೊಲಿ ವಿದ್ಯಾರ್ಥಿ ನಾಯಕಿ, ಶೋಭಾ ನಾಡ ಗ್ರಾಮ ಪಂಚಾಯತ್ ಸದಸ್ಯೆ, ನಾಗರತ್ನ ನಾಡ, ಮನೋರಮ ಭಂಡಾರಿ, ಶಿಲಾವತಿ ಪಡುಕೋಣೆ ಇತರರು  ಉಪಸ್ಥಿತಿ ಇದ್ದರು.

ಡಿವೈಎಫ್‌ಐ ಪಡುಕೋಣೆ ಕಾರ್ಯದರ್ಶಿ ಕಿರಣ ಸ್ವಾಗತಿಸಿದರು. ಜನಪ್ರತಿನಿಧಿ ಸಂಪಾದಕ ಸುಬ್ರಹ್ಮಣ್ಯ ಪಡುಕೋಣೆ  ಕಾರ್ಯಕ್ರಮ ನಿರೂಪಿಸಿದರು, ಶ್ರೀಧರ ನಾಡ ವಂದಿಸಿದರು.

ವರದಿ: ಶ್ರೀಧರ ನಾಡ

Donate Janashakthi Media

Leave a Reply

Your email address will not be published. Required fields are marked *