ಮಳೆ ಅಬ್ಬರ-ಸಂಕಷ್ಟಕ್ಕೆ ಸಿಕ್ಕ ಜನರಿಗೆ ಪರಿಹಾರಕ್ಕಾಗಿ ಸಿಪಿಐ(ಎಂ) ಪ್ರತಿಭಟನೆ

ಬೆಂಗಳೂರು: ನಗರದಲ್ಲಿ ಸುರಿದ ಭಾರೀ ಮಳೆಯಿಂದ ಸೃಷ್ಟಿಯಾಗಿರುವ ಅವಾಂತರದಿಂದಾಗಿ ಎದುರಾಗಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ, ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಬೆಂಗಳೂರು ಪೂರ್ವ ವಲಯ ಸಮಿತಿ ವತಿಯಿಂದ ಮಹದೇವಪುರದಲ್ಲಿನ ಬಿಬಿಎಂಪಿ ಜಂಟೀ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಇತ್ತೀಚಿಗೆ ನಗರದಲ್ಲಿ ಜೂನ್‌ 17ರಂದು ಸುರಿದ ಅಬ್ಬರದ ಮಳೆಯಿಂದ ನೀರಿನ ರಭಸಕ್ಕೆ ಸಿಕ್ಕಿ ಗಾಯಿತ್ರಿ ಲೇಔಟ್‌ ಬಳಿ ರಾಜ ಕಾಲುವೆಯಲ್ಲಿ  ಮಿಥಿನ್ ಎಂಬ ಸಿವಿಲ್ ಇಂಜಿನಿಯರಿಂಗ್ , ತನ್ನ ದ್ವಿಚಕ್ರ ವಾಹನ ಮಳೆಯ ರಭಸಕ್ಕೆ ರಾಜಕಾಲುವೆಯೊಳಗೆ ಬಿದ್ದು ಕೊಚ್ಚಿಕೊಂಡು ಹೋಗುತ್ತಿತ್ತು. ವಾಹನವನ್ನು ರಕ್ಷಿಸುವ ಸಲುವಾಗಿ ರಾಜಕಾಲುವೆಗೆ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾನೆ. ಮಿಥಿನ್  ತನ್ನ ವಾಹನವನ್ನು ಕಾಲುವೆಯಿಂದ ಮೇಲಕ್ಜೆ ಎತ್ತಲು ಕೆಲವರ ಸಹಾಯ ದೊಂದಿಗೆ, ಕಾಲುವೆಯ ನೀರಿಗೆ ಇಳಿದ, ಮಳೆ ವಿಪರೀತವಾಗಿ ಹರಿಯುವ ನೀರಿನ ರಭಸಕ್ಕೆ ಕೊಚ್ಚಿ ಹೋದನು.

 

ತಕ್ಷಣ ಸ್ಥಳಕ್ಕೆ ಧಾವಿಸಿದ ಸಿಪಿಐ(ಎಂ)ನ ಕಾರ್ಯ ಕರ್ತರು ಪರಿಸ್ಥಿತಿಯನ್ನು ಅರಿತು ಬಿಬಿಎಂಪಿಯ ನಿರ್ಲಕ್ಷ್ಯ ‌ಮತ್ತು ಬಿಜೆಪಿಯ ದುರಾಡಳಿತದ ವಿರುದ್ದ ಪ್ರತಿಭಟಿಸಿದರು. ಸ್ಥಳಕ್ಕೆ ಆಗಮಿಸಿದ ಶಾಸಕ  ಮತ್ತು ಬಿಬಿಎಂಪಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಯುವಕನಿಗಾಗಿ ಹುಡುಕಾಟ ಆರಂಭ ಮಾಡಿದರು. ಸತತ ಎರಡು ದಿನಗಳ ಕಾರ್ಯಚರಣೆ ನಂತರ ಭಾನುವಾರ ಮೃತದೇಹ ಸಿಕ್ಕಿತು.  ಸತ್ತ ಅವರ ಕುಟುಂಬಕ್ಕೆ ಪರಿಹಾರ ‌ಮತ್ತು ಸತ್ತ ಮಿಥಿನ್ ಕುಟುಂಬದ ಒಬ್ಬರಿಗೆ  ಸೂಕ್ತ ಪರಿಹಾರ ಹಾಗೂ  ಉದ್ಯೋಗ ನೀಡಬೇಕೆಂದು ಸಿಪಿಐ(ಎಂ) ಪಕ್ಷವು ಒತ್ತಾಯಿಸಿತು.

ಪ್ರದೇಶದಲ್ಲಿ ರಾಜಕಾಲುವೆಗಳು ಈ ಹಿಂದೆ ವಿಸ್ತಾರವಾಗಿತ್ತು. ಅಕ್ಕಪಕ್ಕ ಅವೈಜ್ಞಾನಿಕವಾಗಿ ಕಾನೂನು ಉಲಂಘಿಸಿ, ಒತ್ತುವರಿ ಮಾಡಿಕೊಳ್ಳಲು ಬಿಬಿಎಂಪಿ ಅಧಿಕಾರಿಗಳು ‌ಮತ್ತು ಸ್ಥಳೀಯ ಮಾಜಿ ಬಿಬಿಎಂಪಿ ಸದಸ್ಯರುಗಳು ಶಾಮೀಲಾಗಿದ್ದಾರೆ. ಇದಕ್ಜೆ ಅಲ್ಲಿನ ಎಂಎಲ್ಎ ಮತ್ತು ಮಂತ್ರಿಗಳ ಬೆಂಬಲವಿದೆ ಎಂದು ಸಿಪಿಐ(ಎಂ) ನಾಯಕರು ತಿಳಿಸಿದರು. ಒತ್ತುವರಿ ಮಾಡಿರುವ ಸರ್ಕಾರಿ ಸ್ಥಳವನ್ನು ತೆರವು ಗೊಳಿಸಲು ಆಗ್ರಹಿಸಿದರು.

ಹೋರಾಟದ ಫಲದಿಂದಾಗಿ ಆಯುಕ್ತರ ಪರವಾಗಿ, ಮನವಿ ಸ್ವೀಕರಿಸಲು ಆಗಮಿಸಿದ ಕಂದಾಯ ಅಧಿಕಾರಿ, ರೂ.5 ಲಕ್ಷ ಹಣವನ್ನು ‌ಮೃತನ ತಂದೆಯ ಬ್ಯಾಂಕಿನ ಖಾತೆಗೆ ಹಣ ಸಂದಾಯ ಮಾಡಿರುವ ಈಕ್ಷಣವೇ ಕಳುಹಿಸಿದ್ದೇವೆ ಎಂದು ಘೋಷಿಸಿದರು.

ಪ್ರತಿಭಟನೆಯಲ್ಲಿ ಸಿಪಿಐ(ಎಂ) ಬೆಂಗಳೂರು ಪೂರ್ವ ವಲಯ ಸಮಿತಿ ಕಾರ್ಯದರ್ಶಿ ಎನ್ ನಾಗರಾಜ್, ಸಮಿತಿ ಮುಖಂಡರಾದ ಸಿ ರಮೇಶ್, ಶರಣಪ್ಪ, ಎಂ ನಂಜೇಗೌಡ, ಗೋಪಾಲ ಗೌಡ, ಮತ್ತು ಗೌರಮ್ಮ, ಗಾಯಿತ್ರಿ ಭಾಗವಹಿಸಿ, ಮಾತನಾಡಿದರು.

ಆಯುಕ್ತರಿಗೆ ಮನವಿಯನ್ನು ನೀಡಿ, ನೊಂದ ನೂರಾರು ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಲು ಒತ್ತಾಯಿಸಿದರು.

Donate Janashakthi Media

Leave a Reply

Your email address will not be published. Required fields are marked *