- ಸಮಬಲಕ್ಕೆ ಕಾರಣವಾದ ಆರು ನಿಮಿಷದಲ್ಲಿನ 2 ಗೋಲುಗಳು
- ತಂಡದ ಗೆಲುವಿಗೆ ಕಾರಣರಾದ ಮೂವರು ಆಟಗಾರರು
ಬೆಲ್ಜಿಯಂ: ಎಫ್ಐಎಚ್ ಪ್ರೊ ಲೀಗ್ ಹಾಕಿ ಪಂದ್ಯಾವಳಿಯಲ್ಲಿ ಆತಿಥೇಯ ಬೆಲ್ಜಿಯಂ ವಿರುದ್ಧ ಜಯ ಸಾಧಿಸಿದ ಭಾರತದ ಪುರುಷರ ಹಾಕಿ ತಂಡ.
ಗೋಲ್ಕೀಪರ್ ಪಿ.ಆರ್.ಶ್ರೀಜೇಶ್ ಅವರ ಅಮೋಘ ಪ್ರದರ್ಶನದ ನೆರವಿನಿಂದ ಭಾರತ ತಂಡ ಎಫ್ಐಎಚ್ ಪ್ರೊ ಹಾಕಿ ಲೀಗ್ನ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ ಜಯ ಸಾಧಿಸಿಲು ನೆರವಾಯಿತು.
ಶನಿವಾರ ನಡೆದ ಮೊದಲ ಲೀಗ್ ಪಂದ್ಯದಲ್ಲಿ ಭಾರತ ಮತ್ತು ಬೆಲ್ಜಿಯಂ ಉಭಯ ತಂಡಗಳು ನಿಗದಿತ ಅವಧಿಯ ಆಟದಲ್ಲಿ 3–3 ಗೋಲುಗಳನ್ನ ಪಡೆದುಕೊಂಡು ಡ್ರಾ ಸಾಧಿಸಿದ್ದವು. ನಂತರ ಪೆನಾಲ್ಟಿ ಶೂಟೌಟ್ ನಲ್ಲಿ 4-4 ಗೋಲುಗಳನ್ನ ಪಡೆದುಕೊಂಡು ಮತ್ತೆ ಸಮಬಲಸಾಧಿಸಿತು.
ಭಾರತ ತಂಡದ ಕೊನೆಯ ಅವಕಾಶವನ್ನ ಆಕಾಶ್ ದೀಪ್ ಸಿಂಗ್ ಸದುಪಯೋಗಪಡಿಸಿಕೊಂಡು ತಮ್ಮ ಚಾಣಾಕ್ಷತನದಿಂದ ಗೋಲು ಗಳಿಸಿ 5-4 ಗೋಲುಗಳಿಂದ ಭಾರತ ತಂಡವನ್ನು ಮುನ್ನಡೆಗೆ ತಂದರು, ನಂತರ ಬೆಲ್ಜಿಯಂ ತಂಡದ ಅಲೆಕ್ಸಾಂಡರ್ ಹೆಂಡ್ರಿಕ್ಸ್ ಅವರ ಕೊನೆಯ ಪ್ರಯತ್ನವನ್ನು ಗೋಲ್ ಕೀಪರ್ ಶ್ರೀಜೇಶ್ ತಡೆದುದರಿಂದ ತಂಡದ ಗೆಲುವಿಗೆ ಕಾರಣವಾಯಿತು.
ಆರಂಭದಲ್ಲಿ ಭಾರತ ತಂಡ ಎದುರಾಳಿ ತಂಡಕ್ಕಿಂತ ಕಡಿಮೆ ಗೋಲುಗಳನ್ನ(1-3) ಪಡೆದುಕೊಂಡು ಗೆಲುವಿನ ನಿರೀಕ್ಷೆ ಕಳೆದುಕೊಂಡಿತ್ತು. ಆದರೆ ಹರ್ಮನ್ಪ್ರೀತ್ ಸಿಂಗ್ (51ನೇ ನಿ.) ಮತ್ತು ಜರ್ಮನ್ಪ್ರೀತ್ ಸಿಂಗ್ (57) ಅವರ ನೆರವಿನಿಂದ ಆರು ನಿಮಿಷದಲ್ಲಿ ಎರಡು ಗೋಲುಗಳನ್ನಗಳಿಸಿದ್ದರಿಂದ ಭಾರತ ಬಿಲ್ಜಿಯಂ ವಿರುದ್ಧ ಸಮಬಲ ಸಾಧಿಸಲು ನೆರವಾಯಿತು. ಕೊನೆಗೆ ಪೆನಾಲ್ಟಿಯಲ್ಲಿ ಆಕಾಶ್ ದೀಪ್ ಸಿಂಗ್ ಮತ್ತು ಪಿ.ಆರ್.ಶ್ರೀಜೇಶ್ ಅವರ ಚಾಣಾಕ್ಷ ಆಟದ ಪ್ರದರ್ಶನದಿಂದ ಭಾರತೀಯ ಪುರುಷ ಹಾಕಿ ತಂಡ ತನ್ನ ಗೆಲುವನ್ನ ಸಾಧಿಸಿತು.