ಬೆಂಗಳೂರು : ರಾಷ್ಟ್ರಕವಿ ಕುವೆಂಪು ಅವರು ಕರ್ನಾಟಕವನ್ನು ʼಸರ್ವಾಜನಾಂಗದ ಶಾಂತಿಯ ತೋಟʼ ಎಂದು ವರ್ಣಿಸಿದ್ದರು, ವಿಪರ್ಯಾಸವೆಂದರೆ ಈ ವರ್ಣನೆಯನ್ನು ಇದೀಗ ಕರ್ನಾಟಕ ಕಳೆದುಕೊಳ್ಳುವ ಅಂಚಿನಲ್ಲಿದೆ. ದಿನೇ ದಿನೇ ಕೋಮು ಪ್ರಕರಣಗಳು ಹೆಚ್ಚಾಗುತ್ತಿದೆ. ಕಳೆದ ಮೂರೂವರೆ ವರ್ಷಗಳಲ್ಲಿ 700ಕ್ಕೂ ಹೆಚ್ಚು ಕೋಮು ಘರ್ಷಣೆಗಳು ಮತ್ತು ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿರುವ ಪ್ರಕರಣಗಳಿಗೆ ಸಾಕ್ಷಿಯಾಗಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಬಹಿರಂಗಪಡಿಸಿದೆ.
ಕಳೆದ ಮೂರುವರೆ ಧಾರ್ಮಿಕ ಮತ್ತು ಕೋಮು ವಿಷಯಗಳಿಗೆ ಸಂಬಂಧಿಸಿದ 700 ಕ್ಕೂ ಹೆಚ್ಚು ಅಪರಾಧ ಪ್ರಕರಣಗಳನ್ನು ರಾಜ್ಯವು ಕಂಡಿದೆ ಎಂದು ವರದಿ ತಿಳಿಸುತ್ತದೆ. ಕರ್ನಾಟಕ ರಾಜ್ಯ ಪೊಲೀಸರ ಮೂಲಗಳ ಪ್ರಕಾರ, ರಾಜ್ಯದಲ್ಲಿ ಕೇವಲ 3.4 ವರ್ಷಗಳ ಅವಧಿಯಲ್ಲಿ (ಜನವರಿ 2019 ರಿಂದ ಏಪ್ರಿಲ್ 2022) ಜಾತಿ, ಧರ್ಮ ಸೇರಿದಂತೆ ಕೋಮು ಸಂಬಂಧಿಸಿದ 752 ಕ್ಕೂ ಹೆಚ್ಚು ಪ್ರಕರಣಗಳು (IPC 295 ರಿಂದ 297) ದಾಖಲಾಗಿವೆ.
2019 ರಲ್ಲಿ 197 ರಷ್ಟಿತ್ತು. ಆದರೆ ನಂತರದ ಎರಡು ವರ್ಷಗಳಲ್ಲಿ 212 ಮತ್ತು 204 ಕ್ಕೆ ಏರಿದೆ. ಈ ವರ್ಷ ಕೇವಲ ನಾಲ್ಕು ತಿಂಗಳಲ್ಲಿ 97 ಕ್ಕೂ ಹೆಚ್ಚು ಪ್ರಕರಣಗಳು ಈಗಾಗಲೇ ದಾಖಲಾಗಿವೆ ಎಂಬ ಆತಂಕದ ವರದಿಯನ್ನು ಬಹಿರಂಗಪಡಿಸಿದೆ.