ಅಂಡಮಾನ್‌ ಜೈಲಲ್ಲಿ 18 ವರ್ಷ ಕಳೆದ ಕಿಶೋರಿಲಾಲ್‌ ಶರ್ಮಾ

ಅಂಡಮಾನಿನಲ್ಲಿ ಕರಿನೀರು ಶಿಕ್ಷೆ ಅನುಭವಿಸುವ ಸಂದರ್ಭ ಸತತವಾಗಿ ಬ್ರಿಟಿಷರಿಗೆ ಕ್ಷಮಾಪನಾ ಪತ್ರ ಬರೆದ ವಿ.ಡಿ. ಸಾವರ್ಕರ್ ಮಾತ್ರ ದೇಶಭಕ್ತ, ಕ್ರಾಂತಿಕಾರಿ ಸ್ವಾತಂತ್ರ ಹೋರಾಟಗಾರ ಅಂತ ಭಾವಿಸಿರುವ ಅಮಾಯಕ ಜನರ ಗಮನಕ್ಕೆ….

ಇವರು ಪಂಡಿತ್ ಕಿಶೋರಿಲಾಲ್ ಶರ್ಮಾ. ಭಗತ್ ಸಿಂಗ್ ಅವರ ಅತೀ ಕಿರಿಯ ಸಂಗಾತಿ. ಕ್ರಾಂತಿಕಾರಿ ಸಂಘಟನೆ ಹೆಚ್‌.ಎಸ್‌.ಆರ್‌.ಎ. ದಲ್ಲಿದ್ದು ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದು, ಬಾಂಬ್ ತಯಾರಿಯಲ್ಲಿ ಪರಿಣಿತರಾಗಿದ್ದವರು. ಲಾಹೋರ್ ಪಿತೂರಿ ಮೊಕದ್ದಮೆಯಲ್ಲಿ ಬಂಧಿಸಲ್ಪಟ್ಟು, ಜೈಲಿನಲ್ಲಿದ್ದೇ ತಮ್ಮ ಬೇಡಿಕೆ ಈಡೇರಿಕೆಗಾಗಿ ಉಪವಾಸ ಸತ್ಯಾಗ್ರಹ ಹೂಡಿ ಪೊಲೀಸರ ಚಿತ್ರಹಿಂಸೆಗೂ ಬಗ್ಗದೇ ಮುಷ್ಕರ ಮುಂದುವರೆಸಿದವರು. ಅಂಡಮಾನಿನ ಜೈಲಿನಲ್ಲಿ 18 ವರ್ಷ ಕರಿನೀರು ಶಿಕ್ಷೆ ಅನುಭವಿಸಿದರೂ ಬ್ರಿಟಿಷರಲ್ಲಿ ಕ್ಷಮೆಯಾಚನೆಯ ಪತ್ರ ಬರೆದು ಬಿಡುಗಡೆಯಾಗಿರಲಿಲ್ಲ.

ಜೈಲಿನಿಂದ ಹೊರಬಂದ ನಂತರವೂ ಬ್ರಿಟಿಷರ ಪಿಂಚಣಿಯಲ್ಲಿ ಬಾಳದೇ, ಕಮ್ಯೂನಿಸ್ಟ್‌ ಪಕ್ಷ ಸೇರಿ, ಕಾರ್ಮಿಕ ಸಂಘಟನೆಯಲ್ಲಿದ್ದು, ಬದುಕಿನ ಪೂರ್ಣಾವಧಿ  ಹೋರಾಟವನ್ನು ಮುಂದುವರೆಸಿದರು.

ಅಂದಹಾಗೆ, ಜೂನ್ 9 ಇವರ ಜನ್ಮದಿನ.

ಮಾಹಿತಿ : ಮುನೀರ್ ಕಾಟಿಪಳ್ಳ 

Donate Janashakthi Media

Leave a Reply

Your email address will not be published. Required fields are marked *