ಹೆಣ್ಣು ಮಗುವಿಗೆ ಜನ್ಮ ನೀಡಿದಕ್ಕೆ ಕುಟುಂಬಸ್ಥರಿಂದ ಥಳಿತ

ಮಹೋಬಾ: ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ಮಹಿಳೆಯೊಬ್ಬರಿಗೆ ಗಂಡು ಮಗುವಿಗೆ ಜನ್ಮ ನೀಡಿಲ್ಲವೆಂದು ಇಬ್ಬರು ಮಹಿಳೆಯರು ಅಮಾನುಶವಾಗಿ ನಡುರಸ್ತೆಯಲ್ಲಿ ಹೊಡೆದು, ಕಾಲಿನಿಂದ ಒದ್ದು ಚಿತ್ರಹಿಂಸೆ ನೀಡುತ್ತಿರುವ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ಹರಿಡಾಡುತ್ತಿದೆ.

ತನಗೆ ಹೆಣ್ಣು ಮಗಳಿದ್ದು, ಗಂಡು ಮಗುಬೇಕೆಂದು ಪತಿ ಮತ್ತು ಅತ್ತೆಯಂದಿರು ಪದೇ ಪದೇ ಕಿರುಕುಳ ಮತ್ತು ಹಲ್ಲೆ ನಡೆಸುತ್ತಿದ್ದಾರೆ ಎಂದು ಮಹಿಳೆ ನೊಂದು ಆಕ್ರಂದನ ವ್ಯಕ್ತಪಡಿಸಿದ್ದಾರೆ. ಗಂಡ ಮತ್ತು ಅತ್ತೆ-ಮಾವಂದಿರು ನನಗೆ ಗಂಡು ಮಗುವಾಗಲಿಲ್ಲ ಎಂದು ಪ್ರತಿದಿನವು ಹಿಂಸೆ ನೀಡುತ್ತಿದ್ದರು. ಎರಡನೇ ಮಗು ಸಹ ಹೆಣ್ಣು ಎಂದು ತಿಳಿದ ನಂತರ ಈ ಹಿಂಸೆ ವಿಕೃತ ರೂಪಕ್ಕೆ ಬದಲಾಗಿದೆ ಎಂದು ಮಹಿಳೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇಬ್ಬರು ಮಹಿಳೆಯರು ಆಕೆಯನ್ನು ನಿಂದಿಸುವುದನ್ನು, ಒದೆಯುವುದು ಮತ್ತು ಹೊಡೆಯುವುದನ್ನು ವಿಡಿಯೋದಲ್ಲಿ ಚಿತ್ರೀಕರಣಗೊಂಡಿದೆ. ನೊಂದ ಮಹಿಳೆಯ ಅಳು ಮತ್ತು ಹೊಡೆಯುವುದನ್ನು ನಿಲ್ಲಿಸುವಂತೆ ಬೇಡಿಕೊಂಡಿರುವುದು ವಿಡಿಯೋ ನೋಡಬಹುದಾಗಿದೆ. ಹಲ್ಲೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ಮಹಿಳೆಗೆ ತೀವ್ರವಾಗಿ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯನ್ನು ವೀಕ್ಷಿಸುತ್ತಿದ್ದ ಜನರು ಸಿನಿಮಾ ಶೂಟಿಂಗ್‌ ನೋಡುವಂತೆ ನೋಡುತ್ತಿದ್ದರೇ ವಿನಃ ಮಹಿಳೆಯ ಮೇಲಿನ ಹಲ್ಲೆಯನ್ನು ತಡೆಯುವುದಕ್ಕೆ ಯಾರೂ ಮುಂದಾಗಲಿಲ್ಲ ಎಂಬುದು ವರದಿಯಾಗಿದೆ. ಮಹಿಳೆ ನೀಡಿದ ದೂರಿನ ಮೇರೆಗೆ ಮಹೊಬ ಪೊಲೀಸರು ಪತಿ ನೀರಜ್ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *