ಹೈದರಬಾದ: ಜುಬ್ಲಿ ಹಿಲ್ಸ್ ಬಳಿ ನಡೆದ ಅಪ್ರಾಪ್ತೆ ತರುಣಿಯ ಸಾಮೂಹಿಕ ಅತ್ಯಾಚಾರದ ಪ್ರಕರಣದಲ್ಲೊಂದು ಹೊಸ ತಿರುವು ದೊರೆತಿದೆ. ಅತ್ಯಾಚಾರ ಮಾಡಿ ಬಂಧಿತರಾದ ಇಬ್ಬರಲ್ಲಿ ಒಬ್ಬ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ ಸ್ಥಳೀಯ ಮುಖಂಡರೊಬ್ಬರ ಪುತ್ರ ಎಂಬುದು ತಿಳಿದು ಬಂದಿದೆ.
ಇದನ್ನು ಓದಿ: ಅಪ್ರಾಪ್ತ ಬಾಲಕಿ ಮೇಲೆ ವಿದ್ಯಾರ್ಥಿಗಳಿಂದ ಸಾಮೂಹಿಕ ಅತ್ಯಾಚಾರ
ಪ್ರಕರಣದಲ್ಲಿ ರಾಜ್ಯದ ಗೃಹ ಸಚಿವರ ಮೊಮ್ಮಗ ಶಾಮೀಲಾಗಿದ್ದಾನೆ ಎಂಬ ಆರೋಪ ಸುಳ್ಳು ಎಂದು ಹಿರಿಯ ಪೊಲೀಸ್ ಅಧಿಕಾರಿ ಜೋಯಲ್ ಡೇವಿಸ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪ ಪೊಲೀಸ್ ಆಯುಕ್ತ ಜೋಯಲ್ ಡೇವಿಸ್ ಅವರು, ಆರೋಪಿ ಸದುದ್ದೀನ್ ಮಲಿಕ್ ಎಂಬಾತನನ್ನು ಬಂಧನಕ್ಕೊಳಪಡಿಸಲಾಗಿದ್ದು, ಪ್ರಕರಣ ಸಂಬಂಧ ಐವರು ಆರೋಪಿಗಳ ಗುರುತಿಸಲಾಗಿದೆ. ಐವರಲ್ಲಿ ಮೂವರು ಅಪ್ರಾಪ್ತರಾಗಿದ್ದಾರೆಂದು ಹೇಳಲಾಗಿದೆ.
ಆರೋಪಿಗಳ ಕುರಿತು ಸಂತ್ರಸ್ತ ಬಾಲಕಿ ಯಾವುದೇ ಮಾಹಿತಿಗಳನ್ನು ನೀಡಿರಲಿಲ್ಲ. ಒಬ್ಬನ ಮಾಹಿತಿ ನೀಡಿದ್ದಳು. ಆತನ ಬಂಧನಕ್ಕಾಗಿ ವಿಶೇಷ ತಂಡ ರಚಿಸಲಾಗಿದೆ. ಇದೀಗ ಸಿಸಿಟಿವಿ ದೃಶ್ಯಾವಳಿಗಳಿಂದ ಐವರು ಆರೋಪಿಗಳನ್ನು ಗುರುತಿಸಿ ಬಂಧಿಸಲು ಸಜ್ಜಾಗುತ್ತಿದೆ ಎಂದು ತಿಳಿಸಿದ್ದರು.
One more nabbed in Hyderabad gang-rape case, total 3 arrested so far
Read @ANI Story | https://t.co/qbHQNPOb9u#Hyderabadrapecase #ArrestedDevelopment #arrested #minorgirl #gangrape pic.twitter.com/c8csO4wPg9
— ANI Digital (@ani_digital) June 4, 2022
ಕಳೆದ ಶನಿವಾರ ಜುಬಲಿ ಹಿಲ್ಸ್ನ ರಸ್ತೆ ಪಬ್ಗೆ ಬಾಲಕಿ ಸ್ನೇಹಿತರೊಂದಿಗೆ ತೆರಳಿದ್ದರು. ಆಗ ಕೆಲವು ಹುಡುಗರು ಆಕೆಯನ್ನು ಪರಿಚಯ ಮಾಡಿಕೊಂಡಿದ್ದಾರೆ. ಬಳಿಕ ಪಬ್ನಿಂದ ಬಂಜಾರಾ ಹಿಲ್ಸ್ ನ ಬೇಕರಿಯಲ್ಲಿ ಸಮಯ ಕಳೆದ ನಂತರ ಹುಡುಗರು ತರುಣಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಬಳಿಕ ಪಬ್ಗೆ ತಂದು ಬಿಟ್ಟಿದ್ದಾರೆಂದು ಬಾಲಕಿಯ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.