2022ರ ಅಂತರರಾಷ್ಟ್ರೀಯ ವೈಮಾಂತರಿಕ್ಷ ಸಮ್ಮೇಳನದ ಎರಡನೇ ಆವೃತ್ತಿಗೆ ಚಾಲನೆ

  • ಉದ್ಘಾಟನಾ ಸಮಾರಂಭದಲ್ಲಿ ಎಸ್ಎಇ ಇಂಡಿಯಾದ ಅಧ್ಯಕ್ಷೆ ರಶ್ಮಿ ಊರ್ಧ್ವರ್ಸೆ
  • ದೇಶಿ-ವಿದೇಶಿ ವೈಮಾನಿಕ ಮತ್ತು ಬಾಹ್ಯಾಕಾಶ ಸಂಸ್ಥೆಗಳ ಪ್ರತಿನಿಧಿಗಳು ಭಾಗಿ

ಬೆಂಗಳೂರು: ನಗರದಲ್ಲಿ ಸೊಸೈಟಿ ಆಫ್ ಆಟೊಮೊಟಿವ್ ಎಂಜಿನಿಯರ್ಸ್‌ ಇಂಡಿಯಾ(ಎಸ್ಎಇ ಇಂಡಿಯಾ) ಮತ್ತು ಎಸ್ಎಇ ಇಂಟರ್‌ನ್ಯಾಷನಲ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ವೈಮಾಂತರಿಕ್ಷ ಸಮ್ಮೇಳನದ ಎರಡನೇ ಆವೃತ್ತಿಯ ‘ಏರೋಕಾನ್‌–2022’ಕ್ಕೆ ಚಾಲನೆ ನೀಡಲಾಯಿತು.

ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಎಸ್ಎಇ ಇಂಡಿಯಾದ ಅಧ್ಯಕ್ಷೆ ರಶ್ಮಿ ಊರ್ಧ್ವರ್ಸೆ, ಎಸ್ಎಇ ಇಂಟರ್‌ ನ್ಯಾಷನಲ್‌ನ ಜಾಗತಿಕ ವ್ಯವಹಾರಗಳ ಕಾರ್ಯನಿರ್ವಾಹಕ ಸಲಹೆಗಾರ ಡಾ. ಮುರಳಿ ಅಯ್ಯರ್, ಕಾಲಿನ್ಸ್ ಏರೋಸ್ಪೇಸ್‌ನ ಡಾ.ರವಿಶಂಕರ್ ಮೈಸೂರು, ಎಚ್‌ಎಎಲ್‌ನ ಡಾ.ಶ್ರೀಕಾಂತ್ ಶರ್ಮಾ, ಏರೊನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿಯ (ಎಡಿಎ) ಡಾ.ಗಿರೀಶ್ ಎಸ್. ದೇಡೋಧರೆ, ಬೋಯಿಂಗ್ ಸಂಶೋಧನೆ ಮತ್ತು ತಂತ್ರಜ್ಞಾನ ನಿರ್ದೇಶಕ ಡಾ.ಬಾಲಗುರುನಾ ಚಿದಂಬರಂ ಭಾಗವಹಿಸಿದ್ದರು.

ಈ ಎರಡು ದಿನಗಳ ಸಮ್ಮೇಳನವನ್ನು ಎಚ್‌ಎಎಲ್‌ ಅಕಾಡೆಮಿಯಲ್ಲಿ ನಡೆದಿದ್ದು, ಈ ಸಮ್ಮೇಳನದಲ್ಲಿ ಹಲವಾರು ದೇಶಿ ಮತ್ತು ವಿದೇಶಿ ವೈಮಾನಿಕ ಮತ್ತು ಬಾಹ್ಯಾಕಾಶ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಸಮ್ಮೇಳನದಲ್ಲಿ ಪ್ರದರ್ಶನಕ್ಕೇಂದು ಡ್ರೋನ್‌ಗಳು, ಮಿನಿ ವಿಮಾನಗಳು, ಹೆಲಿಕಾಪ್ಟರ್‌ಗಳನ್ನ ಆಯೋಜಿಸಲಾಗಿತ್ತು.

Donate Janashakthi Media

Leave a Reply

Your email address will not be published. Required fields are marked *