ನಾಗ್ಪುರ್: ಗ್ಯಾನವಾಪಿ ವಿವಾದದ ಕುರಿತು ನ್ಯಾಯಾಲಯ ನಿರ್ಧರಿಸುವ ತೀರ್ಪನ್ನು ಎಲ್ಲರು ಒಪ್ಪಬೇಕು .ಪ್ರತಿಯೊಂದು ಮಸೀದಿಯಲ್ಲೂ ಶಿವಲಿಂಗವನ್ನು ಹುಡುಕುವ ಮತ್ತು ಹೊಸ ವಿವಾದ ಸೃಷ್ಟಿಸುವ ಅಗತ್ಯವಿಲ್ಲ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಗುರುವಾರ ಹೇಳಿದ್ದಾರೆ.
ಅಯೋಧ್ಯೆ ಆಂದೋಲನದಲ್ಲಿ ಭಾಗವಹಿಸಿದ್ದು ಒಂದು ದೊಡ್ಡ ಅಪವಾದವಾಗಿದೆ. ಇಂತಹ ಆಂದೋಲನಗಳನ್ನು ಭವಿಷ್ಯದಲ್ಲಿ ಕೈಗೊಳ್ಳುವುದಿಲ್ಲ ಎಂದು ಆರ್ಎಸ್ಎಸ್ ಈಗಾಗಲೇ ಸ್ಪಷ್ಟಪಡಿಸಿದೆ. ಈಗ ವಾರಾಣಾಸಿಯಲ್ಲಿರುವ ಜ್ಞಾನವಾಪಿ ಮಸೀದಿ ಕುರಿತು ಚರ್ಚೆ ನಡೆಯುತ್ತಿದೆ ಎಂದು ಆರ್ಎಸ್ಎಸ್ನ ಮೂರನೇ ಅಧಿಕಾರಿ ತರಬೇತಿ ಶಿಬಿರದ ಸಮಾರಂಭದಲ್ಲಿ ಮಾತನಾಡಿದರು,
ಇತಿಹಾಸವನ್ನು ತಿರುಚಲು ಎಂದಿಗೂ ಸಾಧ್ಯವಿಲ್ಲ. ಈಗಿನ ಹಿಂದೂಗಳು ಮತ್ತು ಮುಸ್ಲಿಂರು ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಿಲ್ಲ. ಮುಸ್ಲಿಂ ಆಕ್ರಮಣಕಾರರು ಭಾರತಕ್ಕೆ ಆಗಮಿಸಿದ ವೇಳೆ ಇವೆಲ್ಲವು ಸಂಭವಿಸಿದವು. ಸ್ವಾತಂತ್ರ್ಯ ಬಯಸುವ ಜನರ ಆತ್ಮಸ್ಥೈರ್ಯ ಕುಂದಿಸಲು ದೇಗುಲಗಳನ್ನು ಧ್ವಂಸಗೊಳಿಸಿದರು ಸಹ ಇನ್ನೂ ಇಂತಹ ಸಾವಿರಾರು ದೇವಸ್ಥಾನಗಳಿವೆ. ಈ ಬಗ್ಗೆ ಸಂಘವು ಯಾವುದೇ ಪ್ರತಿಕ್ರಿಯಿಸಲು ಇಚ್ಛಿಸುವುದಿಲ್ಲ ಎಂದು ತಿಳಿಸಿದರು.
‘ಕೆಲವು ಪ್ರದೇಶಗಳ ಬಗ್ಗೆ ನಮಗೆ ಭಕ್ತಿ ಇರುತ್ತದೆ.ಆದರೆ ಪ್ರತಿದಿನ ನೂತನ ಸ್ಥಳಗಳ ಬಗ್ಗೆ ಪ್ರಸ್ತಾಪಿಸುವುದು ಸರಿಯಾಗಲಾರದು. ನಾವು ಪ್ರತಿದಿನ ಹೊಸಹೊಸ ವಿವಾದಗಳನ್ನು ಹುಟ್ಟುಹಾಕಬಾರದು. ಜ್ಞಾನವಾಪಿ ಮಸೀದಿ ಬಗ್ಗೆ ನಮಗೆ ಶ್ರದ್ಧೆಯಿದೆ. ಆ ವಿಚಾರದಲ್ಲಿ ನಾವು ಏನು ಮಾಡುತ್ತಿದ್ದೇವೆಯೋ ಅದು ಶ್ರದ್ಧೆಗೆ ಅನುಗುಣವಾಗಿದೆ. ಹಾಗೆಂದು ಎಲ್ಲ ಮಸೀದಿಗಳಲ್ಲಿ ಶಿವಲಿಂಗ ಹುಡುಕುವುದು ಸರಿಯೇ’ ಎಂದು ಪ್ರಶ್ನಿಸಿದರು.
ಗ್ಯಾನವಾಪಿ ಮತ್ತು ಶೃಂಗಾರ ಗೌರಿ ಪೂಜೆಯ ಪ್ರಕರಣಗಳ ಕುರಿತು ನಮ್ಮ ನಮ್ಮ ಸಮುದಾಯಗಳೇ ಸಭೆ ಸೇರಿ ಬಗೆಹರಿಸಬಹುದು ಆದರೆ ಅದನ್ನು ಹೊರೆತು ಪಡೆಸಿ ಕೋರ್ಟಿನ ಮುಖಾಂತರವೆಂದರೆ ಪೀಠ ನೀಡುವ ತೀರ್ಪನ್ನು ಎರಡು ಸಮುದಾಯಗಳು ಒಪ್ಪಿಕೊಳ್ಳಲೇ ಬೇಕೆಂದು ತಿಳಿಸಿದ್ದಾರೆ.
ಹಿಂದೂಗಳು ಎಂದಿಗೂ ಮುಸ್ಲಿಮರಿಗೆ ಕೆಡುಕು ಬಯಸುವುದಿಲ್ಲ. ಇಂದಿನ ಮುಸ್ಲಿಮರ ಪೂರ್ವಜರು ಹಿಂದೂಗಳೇ ಆಗಿದ್ದರು. ತಮಗೆ ವಿಶೇಷವಾದ ಶ್ರದ್ಧೆಯಿರುವ ಸ್ಥಳಗಳ ಬಗ್ಗೆ ಮಾತ್ರ ಹಿಂದೂಗಳು ಧ್ವನಿ ಎತ್ತುತ್ತಿದ್ದಾರೆ. ತಮ್ಮ ಆತ್ಮಸ್ಥೈರ್ಯ ಕುಗ್ಗಿಸಲೆಂದು ಹಿಂದಿನ ಆಡಳಿತಗಾರರು ಮಾಡಿದ್ದ ತಪ್ಪು ಸರಿಪಡಿಸಬೇಕು ಎಂದು ಹಿಂದೂಗಳು ಒತ್ತಾಯಿಸುತ್ತಿದ್ದಾರೆ. ಇಂಥ ವಿವಾದಗಳನ್ನು ಪರಸ್ಪರ ವಿಶ್ವಾಸದಿಂದ ಶಾಶ್ವತವಾಗಿ ಪರಿಹರಿಸಬೇಕು. ನ್ಯಾಯಾಲಯದ ಬಗ್ಗೆ ಗೌರವ ಇರಿಸಿಕೊಳ್ಳಬೇಕು. ಎಂದಿಗೂ ತೀರ್ಪುಗಳನ್ನು ಅವಮಾನಿಸಬಾರದು ಎಂದು ಸಲಹೆ ಮಾಡಿದರು.