- ತಿಂಗಳಲ್ಲಿ ಎರೆಡು ಬಾರಿ ಬೆಲೆ ಹೆಚ್ಚಿಸಿದ್ದ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ದರ ಇಳಿಕೆ
- ಸದ್ಯಕ್ಕೆ ಬೆಂಗಳೂರಿನಲ್ಲಿ 14,2 ಕೆ.ಜಿ ತೂಕದ ಸಿಲಿಂಡರ್ ಬೆಲೆ 1,006
ಬೆಂಗಳೂರು: ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ದರವನ್ನು ಬುಧವಾರ ₹135ರಷ್ಟು ಇಳಿಕೆ ಮಾಡಲಾಗಿದೆ. ಇದರಿಂದಾಗಿ ಬೆಂಗಳೂರಿನಲ್ಲಿ 19 ಕೆ.ಜಿ. ತೂಕದ ಪ್ರತಿ ಸಿಲಿಂಡರ್ ಬೆಲೆಯು ₹ 2,300ಕ್ಕೆ ಇಳಿಕೆಯಾಗಿದೆ.
ಮೇ 19 ರಂದು ಭಾರತದಲ್ಲಿ ಗೃಹೋಪಯೋಗಿ ಮತ್ತು ವಾಣಿಜ್ಯ ಬಳಕೆ ಎಲ್ಪಿಜಿ ಸಿಲಿಂಡರ್ ಗಳ ಬೆಲೆಯನ್ನು ಹೆಚ್ಚಿಸಲಾಗಿತ್ತು. ಹಾಗೂ ಒಂದೇ ತಿಂಗಳಲ್ಲಿ ಎರಡು ಬಾರಿ ಅಡುಗೆ ತೈಲದ ಬೆಲೆ ಹೆಚ್ಚಿಸಲಾಗಿತ್ತು. ಮತ್ತು14 ಕೆಜಿ ಗೃಹಬಳಕೆಯ ಸಿಲಿಂಡರ್ ದರವನ್ನು 3.50 ರೂಪಾಯಿ ಹೆಚ್ಚಿಸಲಾಗಿತ್ತು ಮತ್ತು 19 ಕೆಜಿಯ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 8 ರೂಪಾಯಿ ಹೆಚ್ಚಿಸಲಾಗಿತ್ತು.
ಆದರೆ ದೇಶದಾದ್ಯಂತ ಇಂದು ಎಲ್ಪಿಜಿ ದರವು ಇಳಿಕೆಯಾಗಿದೆ. ಆದ್ದರಿಂದ ದೆಹಲಿ, ಚೆನ್ನೈ, ಕೊಲ್ಕತ್ತಾ, ಮುಂಬೈ ಸೇರಿದಂತೆ ಉಳಿದ ರಾಜ್ಯಗಳಲ್ಲೂ ಎಲ್ಪಿಜಿ ಸಿಲಿಂಡರ್ ದರ ಇಳಿಕೆಯಾಗಿದೆ. ಇಳಿಕೆಯಾಗಿರುವ ಪರಿಣಾಮ, ದೆಹಲಿಯಲ್ಲಿ ₹ 2,219. ಕೊಲ್ಕಾತ್ತಾದಲ್ಲಿ ₹ 2,332. ಮುಂಬೈನಲ್ಲಿ. ₹2,171.50 ಚೆನೈನಲ್ಲಿ ₹2,373 ರಷ್ಟಿದೆ.
ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಸದ್ಯ 14.2 ಕೆ.ಜಿ. ತೂಕದ ಸಿಲಿಂಡರ್ ದರವು ಬೆಂಗಳೂರಿನಲ್ಲಿ ₹ 1,006 ರಷ್ಟಿದೆ.