- 2022-23 ನೇ 15 ನೇ ಆವೃತ್ತಿಯ ಟಾಟಾ ಐಪಿಎಲ್‌ನ ಅಂತಿಮ ಪಂದ್ಯ
- ಗುಜರಾತ್ ಮತ್ತು ರಾಜಸ್ಥಾನ್ ತಂಡಗಳು ಇಂದು ಟ್ರೋಫಿಗಾಗಿ ಸೆಣಸಾಟ
ಅಹಮದಾಬಾದ್ : 2022-23 ನೇ ಸಾಲಿನ ಟಾಟಾ ಐಪಿಎಲ್ ನ ಅಂತಿಮ ಪಂದ್ಯದಲ್ಲಿ ಗುಜುರಾತ್ ಟೈಟನ್ಸ್ ಮತ್ತು ರಾಯಲ್ ರಾಜಸ್ಥಾನ್ ಉಭಯ ತಂಡಗಳು ಇಂದು ಅಹಮದಾಬಾದ್‌ನ ಮೊಟೆರಾದ ನರೇಂದ್ರ ಮೋದಿ ಸ್ಟೆಡಿಯಂನಲ್ಲಿ ಮುಖಾಮುಖಿಯಾಗಲಿದ್ದು, ಈ ಬಾರಿಯ ಗೆಲುವು ಯಾರದು ಎಂಬುದನ್ನ ಇಂದು ಕಾದುನೋಡಬೇಕಾಗಿದೆ.
ಈಗಾಗಲೇ ಕ್ವಾಲಿಫೈಯರ್ 1 ರಲ್ಲಿ ಗುಜರಾತ್ ಟೈಟಾನ್ಸ್ ತಂಡದ ವಿರುದ್ಧ 7 ವಿಕೇಟ್‌ಗಳಿಂದ ಸೋತು ಮುಗ್ಗರಿಸಿರುವ ರಾಜಸ್ಥಾನ್ ತಂಡಕ್ಕೆ ಇಂದು ನಡೆಯಲಿರುವ ಅಂತಿಮ ಪಂದ್ಯವು ಮತ್ತೋಂದು ಯಶಸ್ಸಿನ ಮಾರ್ಗಕ್ಕೆ ದಾರಿಯಾಗಲಿದೆ. ಮೊನ್ನೆ ನಡೆದ ರಾಯಲ್ ಚಾಲೆಂಜೆರ್ಸ್ ಬೆಂಗಳೂರು ತಂಡವನ್ನು 7ವಿಕೆಟ್‌ಗಳಿಂದ ಜಯಗಳಿಸಿದ್ದು ಇದಕ್ಕೆ ಸಾಕ್ಷಿಯಾಗಿದೆ.
ಈ ಆವೃತ್ತಿಯ ನೂತನ ತಂಡವೆನಿಸಿಕೊಂಡಿರುವ ಗಜರಾತ್ ಟೈಟಾನ್ಸ್… ತನ್ನ ಮೊದಲ ಗೆಲುವಿನ ನಿರೀಕ್ಷೆಯಲ್ಲಿ ಕಾದುಕಳಿತಿದ್ದರೆ 2008 ರ ಮೊದಲ ಆವೃತ್ತಿಯಲ್ಲಿ ಐಪಿಎಲ್ ಕಿರೀಟವನ್ನ ತನ್ನದಾಗಿಸಿಕೊಂಡಿದ್ದ ರಾಯಲ್ ರಾಜಸ್ಥಾನ್ ತಂಡವು ಇನ್ನೋಂದು ಗೆಲುವಿನ ಗರಿಯನ್ನ ತನ್ನದಾಗಿಸಿಕೊಳ್ಳಲು ಸಜ್ಜಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಈ ಬಾರಿಯ ಐಪಿಯಲ್ ಕ್ರಿಕೇಟ್ ಅಭಿಮಾನಿಗಳಿಗೆ ಅಚ್ಚರಿ, ಮತ್ತು ಸಂತಸ ತಂದಿದೆ ಎಂದು ಹೇಳಬಹುದು. ಏಕೆಂದರೆ ಈ ಬಾರಿ ಯಾವ ತಂಡ ಪೈನಲ್ ಪ್ರವೇಶಿಸುತ್ತದೆ ಎಂಬುದೆ ಒಂದು ಅಚ್ಚರಿಉಂಟುಮಾಡುವ ಸಂಗತಿಯಾಗಿತ್ತು. ಈ ಪ್ರೇಶ್ನೆಗೆ ಈ ಎರೆಡು ತಂಡಗಳು ತಮ್ಮ ಉತ್ತಮ ಪ್ರದರ್ಶನದ ಮೂಲಕ ಉತ್ತರ ಕೊಟ್ಟು ಅಭಿಮಾನಿಗಳಿಂದ ಸೈ ಎನಿಸಿಕೊಂಡಿವೆ.
ಇನ್ನು ಈ ಬಾರಿಯ ಐಪಿಎಲ್‌ನ ಫೈನಲ್ ಪಂದ್ಯದ ಆರಂಭಕ್ಕೂ ಮುನ್ನ ಐಪಿಎಲ್ 2022ರ ಆವೃತ್ತಿಯ ಸಮಾರೋಪ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಬಾಲಿವುಡ್‌ನ ಖ್ಯಾತ ನಟ ರಣ್ವೀರ್ ಸಿಂಗ್ ಹಾಗೂ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಮನರಂಜಿಸಲಿದ್ದಾರೆ.
ಸಂಭವನೀಯ ಆಟಗಾರ ಪಟ್ಟಿ
ಗುಜರಾತ್ ಟೈಟಾನ್ಸ್: ಶುಭ್‌ಮನ್ ಗಿಲ್, ವೃದ್ಧಿಮಾನ್ ಸಾಹ, ಮ್ಯಾಥ್ಯೂ ವೇಡ್, ಹಾರ್ದಿಕ್ ಪಾಂಡ್ಯ(ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಸಾಯಿ ಕಿಶೋರ್, ಜೋಸೆಫ್/ಫಗ್ರ್ಯೂಸನ್, ಮೊಹಮದ್ ಶಮಿ, ಯಶ್ ದಯಾಳ್.
ರಾಜಸ್ಥಾನ ರಾಯಲ್ಸ್: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್(ನಾಯಕ), ದೇವದತ್ ಪಡಿಕ್ಕಲ್, ಶಿಮ್ರೊನ್ ಹೆಟ್ಮೇಯರ್, ರಿಯಾನ್ ಪರಾಗ್, ಆರ್.ಅಶ್ವಿನ್, ಟ್ರೆಂಟ್ ಬೌಲ್ಟ್, ಒಬೆಡ್ ಮೆಕಾಯ್, ಯಜುವೇಂದ್ರ ಚಹಲ್, ಪ್ರಸಿದ್ ಕೃಷ್ಣ.
ಪಿಚ್ ರಿಪೋರ್ಟ್
ಅಹ್ಮದಾಬಾದ್ ನಲ್ಲಿರುವ ಮೋದಿ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್‌ಗೆ ಸಹಕಾರಿಯಾಗಿರಲಿದ್ದು, ಕೆಂಪು ಮಣ್ಣಿನಿಂದ ಕೂಡಿರುವ ಈ ಪಿಚ್ ಸ್ಪಿನ್ನರ್ ಬೌಲರ್‌ಗಳಿಗೂ ಅನೂಕೂಲಕರಾಗಲಿದೆ. ಈ ಪಂದ್ಯದಲ್ಲೂ ಟಾಸ್ ಮುಖ್ಯ ಪಾತ್ರ ವಹಿಸಲಿದೆ. ಸಮಯ ಕಳೆದಂತೆ ಇಬ್ಬನಿ ಬೀಳುವ ಕಾರಣ ಟಾಸ್ ಗೆಲ್ಲುವ ತಂಡ ಮೊದಲು ಫೀಲ್ಡ್ ಮಾಡಲು ನಿರ್ಧರಿಸುವ ಸಾಧ್ಯತೆಯೇ ಹೆಚ್ಚು. ಮೊದಲು ಬ್ಯಾಟ್ ಮಾಡುವ ತಂಡ ಕನಿಷ್ಠ 190-200 ರನ್ ದಾಖಲಿಸಿದರಷ್ಟೇ ತಮ್ಮ ತಂಡದ ಗೆಲುವನ್ನ ರಕ್ಷಿಸಿಕೊಳ್ಳುವ ಸಾಧ್ಯತೆ ಇರಲಿದೆ.
ಸ್ಥಳ: ಅಹಮದಾಬಾದ್, ಮೋದಿ ಕ್ರೀಡಾಂಗಣ
ಪಂದ್ಯ: ರಾತ್ರಿ 8ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್