ಲಖನೌ:ಉತ್ತರ ಪ್ರದೇಶ ಸರ್ಕಾರವು ಉದ್ಯೋಗದಲ್ಲಿರುವ ಮಹಿಳೆಯರಿಗೆ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಮಹಿಳೆಯರ ಸುರಕ್ಷತೆಯನ್ನು ಕಾಪಾಡುವ ಅಂಗವಾಗಿ ಕೆಲಸ ಮಾಡುವ ಮಹಿಳೆಯರನ್ನು ಸಂಜೆ 7 ರಿಂದ ಬೆಳಿಗ್ಗೆ 6 ರ ನಡುವೆ ಕೆಲಸ ಮಾಡಲು ಒತ್ತಾಯಿಸುವಂತಿಲ್ಲ ಎಂದು ಆದೇಶ ಹೊರಡಿಸಿದ್ದಾರೆ.
ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಸುರಕ್ಷಿತ ವಾತಾವರಣವನ್ನು ಒದಗಿಸುವ ಸಲುವಾಗಿ, ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಶನಿವಾರದ ಆದೇಶವನ್ನು ಹೊರಡಿಸಿದೆ. ರಾಜ್ಯಾದ್ಯಂತ ಕಾರ್ಖಾನೆಗಳಲ್ಲಿ ಯಾವುದೇ ಮಹಿಳಾ ಕಾರ್ಮಿಕರು ರಾತ್ರಿ ಪಾಳಿ ಮಾಡಲು ಬದ್ಧರಾಗಿರುವುದಿಲ್ಲ ಎಂದು ಹೇಳಿದೆ. ಯೋಗಿ ಆದಿತ್ಯನಾಥ್ ಸರ್ಕಾರ ಮಾಡಿರುವ ಈ ನಿಯಮ ಸರ್ಕಾರಿ ಮತ್ತು ಖಾಸಗಿ ವಲಗಳಿಗೆ ಅನ್ವಯಿಸುತ್ತದೆ .
ಮಹಿಳೆಯರು ಸಂಜೆ 7 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಕರ್ತವ್ಯದಲ್ಲಿ ತೊಡಗಿದ್ದರೆ, ಕಂಪನಿಯು ಅವರ ಒಪ್ಪಿಗೆಯನ್ನು ಹೊಂದಿರಬೇಕು ಎಂದು ಸರ್ಕಾರ ಖಡಕ್ ಸೂಚನೆ ನೀಡಿದೆ. ಸೂಚನೆಗಳನ್ನು ಉಲ್ಲಂಘಿಸಿಯೂ ವ್ಯಕ್ತಿಯ ಮೇಲೆ ಕರ್ತವ್ಯವನ್ನು ವಿಧಿಸಿದ್ದರೆ ಸಂಸ್ಥೆಯು ಸರ್ಕಾರದಿಂದ ನೇರ ಕ್ರಮ ತೆಗೆದುಕೊಳ್ಳುವ ಸಾಧ್ಯತೆಗಳಿದೆ. ಮಹಿಳೆಯರು ಸಂಜೆ 7 ಗಂಟೆಯ ನಂತರ ಕೆಲಸ ಮಾಡಲು ನಿರಾಕರಿಸಿದರೆ ಆಕೆಯನ್ನು ಕೆಲಸದಿಂದ ತೆಗೆದುಹಾಕಬಾರದು. ಹೊಸ ನಿಯಮ ಉಲ್ಲಂಘಿಸಿದರೆ ಸಂಸ್ಥೆ ಅಥವಾ ಕಂಪನಿಗೆ ದೊಡ್ಡ ಮೊತ್ತದ ದಂಡ ಅಥವಾ ಜೈಲು ಶಿಕ್ಷೆಗೆ ಕಾರಣವಾಗಬಹುದು ಎಂದು ಸೂಚನೆಯಲ್ಲಿ ತಿಳಿಸಿದೆ.
ಮಹಿಳೆಯರು ಸಂಜೆ 7 ಮತ್ತು ಬೆಳಗ್ಗೆ 6 ವರೆಗೆ ಕೆಲಸ ಮಾಡಬಹುದು, ಈ ಮನೆಯಿಂದ ಮಾಡುವ ಕೆಲಸ ಅಥವಾ ಕಚೇರಿಯಿಂದ ಮಾಡುವ ಕೆಲಸಯಾವುದಾದರು ಆಗಿರಬಹುದು. ಉದ್ಯೋಗಿ ಕೆಲಸ ಮಾಡುತ್ತಿದ್ದರೆ ಕಚೇರಿಯಲ್ಲಿ ಮಹಿಳಾ ಉದ್ಯೋಗಿಗೆ ಉಚಿತ ಕ್ಯಾಬ್ ಸೌಲಭ್ಯವನ್ನು ಒದಗಿಸಬೇಕು. ಒಂದು ವೇಳೆ ಈ ಆದೇಶಗಳನ್ನು ಪಾಲಿಸದಿದ್ದಲ್ಲಿ ಅದು ಕಾರ್ಮಿಕ ಕಾನೂನಿನ ಉಲ್ಲಂಘನೆಯಾಗುತ್ತದೆ ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶ ಸರ್ಕಾರವು 2022 ರಿಂದ 2023 ರವರೆಗೆ ತನ್ನ ರಾಜ್ಯ ಬಜೆಟ್ ಅನ್ನು ಅನಾವರಣಗೊಳಿಸಿದ ಕೆಲವೇ ದಿನಗಳಲ್ಲಿ ಈ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಇದು ಮೂಲಸೌಕರ್ಯ, ಉದ್ಯೋಗಗಳ ಸೃಷ್ಟಿ, ಆರೋಗ್ಯ ಮತ್ತು ಸುರಕ್ಷತೆ ಮತ್ತು ಮಹಿಳೆಯರ ಸಬಲೀಕರಣದ ಮೇಲೆ ಪ್ರಮುಖ ಗಮನ ಸೆಳೆಯುವ ಉದ್ದೇಶ ಹೊಂದಿದೆ ಎಂದು ಹೇಳಲಾಗಿದೆ.