“ಸಕರ್ಾರಿ ಶಾಲೆಗಳಲ್ಲಿ ಕಲಿತವರು ಕ್ರೂರಿಗಳೂ, ನಕ್ಸಲರೂ ಆಗಿದ್ದಾರೆ'' ಕಾಪರ್ೊರೇಟ್ ಗುರು ರವಿಶಂಕರ ಅಣಿಮುತ್ತು.

ಸಂಪುಟ – 06, ಸಂಚಿಕೆ 15, ಏಪ್ರೀಲ್ 08, 2012

6

ಖಾಸಗಿ ಶಾಲೆಯೊಂದರ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ರವಿಶಂಕರ ಗರೂಜಿಯವರು ಸಕರ್ಾರಿ ಶಾಲೆಗಳು ನಕ್ಸಲರನ್ನು ಉತ್ಪಾದಿಸುವ ಕೇಂದ್ರಗಳು ಆದ್ದರಿಂದ ಸಕರ್ಾರ ಶಾಲೆಗಳನ್ನು ನಡೆಸುವ ಬದಲು ಖಾಸಗಿ ಸಂಸ್ಥೆಗಳಿಗೆ ವಹಿಸಲಿ ಎಂದು ತಿಳಿಸಿದ್ದಾರೆ. ಅವರ ಹೇಳಿಕೆಯನ್ನು ಸಮಥರ್ಿಸಲು ಅವರು ಖಾಸಗಿ ಶಾಲೆಗಳಲ್ಲಿ ಕಲಿತ ಮಕ್ಕಳು ಶೀಲವಂತರೂ, ಆದರ್ಶಮಯಿಗಳೂ ಆಗಿದ್ದಾರೆ ಮತ್ತು ಅದಕ್ಕೆ ಆ ಶಾಲೆಗಳ ಶಿಕ್ಷಕರೇ ಕಾರಣ ಆದರೆ ಸಕರ್ಾರಿ ಶಾಲೆಗಳಲ್ಲಿ ಕಲಿತವರು ಕ್ರೂರಿಗಳು ಮತ್ತು ನಕ್ಸಲ್ಗಳೂ ಆಗಿರುವುದು ಅನೇಕ ಸಂದರ್ಭಗಳಲ್ಲಿ ಕಂಡುಬಂದಿದೆ ಎಂದು ಹೇಳಿದ್ದಾರೆ. ಇವರ ಹೇಳೀಕೆ ಆಧಾರವಿಲ್ಲದ್ದು ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿ ಖಂಡಿಸಿದೆ.

ಸಕರ್ಾರಿ ಶಿಕ್ಷಣ ವ್ಯವಸ್ಥೆ ಗಣನೀಯವಾಗಿರುವಾಗಲೇ ದೇಶದ ಅರ್ಧಕ್ಕರ್ಧ ಜನತೆ ಅನಕ್ಷರಸ್ಥರಾಗಿದ್ದಾರೆ. ಹಾಗಿರುವಾಗ ಮಾನ್ಯ ಗುರೂಜಿಯವರ ಫಮರ್ಾನಿನಂತೆ ಸಕರ್ಾರ ಖಾಸಗಿಯವರಿಗೆ ಶಾಲೆಗಳನ್ನು ಮಾರಿದಲ್ಲಿ ನಮ್ಮ ಸಮಾಜ 100 ವರ್ಷ ಹಿಂದೆ ಓಡುವುದು ಖಂಡಿತ. ಸ್ವತಃ ಗುರೂಜಿ 185 ಪೂರ್ವಪ್ರಾಥಮಿಕ ಶಾಲೆಗಳನ್ನು ನಡೆಸುತ್ತಿದ್ದು, ಅವರು ತೆರೆಯುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಮಕ್ಕಳ ಕೊರತೆ ಬರದಂತೆ ಈಗಲೇ ಪಿತೂರಿಯೊಂದನ್ನು ಹೆಣೆಯುತ್ತಿರುವಂತೆ ತೋರುತ್ತದೆ ಎಂದೂ ಬಿಜೆವಿಎಸ್ ಶಂಕೆ ವ್ಯಕ್ತ ಪಡಿಸಿದೆ.

ಶಿಕ್ಷಕರು ಮತ್ತು ಶಿಕ್ಷಕ ಸಂಘಟನೆಗಳು ಈ ಹೇಳಿಕೆಯನ್ನು ಬಲವಾಗಿ ಖಂಡಿಸಬೇಕು ಕರೆ ನೀಡಿರುವ ಬಿಜಿವಿಎಸ್ ಸಕರ್ಾರ ರವಿಶಂಕರರ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡಬೇಕೆಂದು ಆಗ್ರಹಿದೆ. ತಮ್ಮ ಹೇಳಿಕೆಗೆ ವಿರೋಧ ಬಂದ ಹಿನ್ನೆಲೆಯಲ್ಲಿ ರವಿಶಂಕರ ಗುರೂಜಿ ಯವರು ನನ್ನ ಹೇಳಿಕೆಯನ್ನು ಸಾಮಾನ್ಯೀಕರಿಸಬಾರದು. ಅದು ನಕ್ಸಲ್ ಪೀಡಿದ ರಾಜ್ಯಗಳ ಸಕರ್ಾರಿ ಶಾಲೆಗಳಿಗೆ ಸಂಬಂಧಿಸಿದ್ದು ಎಂದು ಸಮಥರ್ಿಸಲು ಹೊರಟಿದ್ದಾರೆ ಎಂದಿರುವ ಬಿಜಿವಿಎಸ್ ಈ ಕುರಿತು ಎಚ್ಚರಿಕೆ ವಹಿಸುವಂತೆ ಶಿಕ್ಷಕರು, ವಿದ್ಯಾಥರ್ಿಗಳು ಹಾಗೂ ಸಾರ್ವಜನಿಕರಿಗೆ ಕರೆ ನೀಡಿದೆ.

ಎಸ್ಎಫ್ಐನಿಂದ ಪ್ರತಿಭಟನೆಗೆ ಕರೆ
ರವಿಶಂಕರರ ಈ ಹೇಳಿಕೆಯು ಸಮಾಜದ ದಲಿತರು, ಹಿಂದುಳಿದವರು, ಬಡವರು ಮುಂತಾದ ಅವಕಾಶ ವಂಚಿತ ವಿಭಾಗದ ವಿದ್ಯಾಥರ್ಿಗಳಿಗೆ ಶಿಕ್ಷಣವನ್ನು ವಂಚಿಸುವ ಹುನ್ನಾರ ಮತ್ತು ಶಿಕ್ಷಣದ ನಿರ್ದಯ ವ್ಯಾಪಾರೀಕರಣದ ಪರವಾದ ಲಾಬಿ ಎಂದು ಭಾರತ ವಿದ್ಯಾಥರ್ಿ ಪೇಡರೇಷನ್ನ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸಿದೆ.

ಖಾಸಗೀಕರಣದ ನೆಪದಲ್ಲಿ ಸಕರ್ಾರಿ ಶಾಲೆಗಳನ್ನು ಸಂಘ ಪರಿವಾರದ ತಕ್ಕೆಗೆ ತೆಗೆದುಕೊಳ್ಳುವ ಸಂಚು ಹಾಗೂ ಸಕರ್ಾರಿ ಶಾಲೆಗಳಿಗೆ ಸೇರಿರುವ ಅಪಾರ ಪ್ರಮಾಣದ ಆಸ್ತಿಯನ್ನು ಲಪಟಾಯಿಸುವ ಸಂಚು ಈ ಹೇಳಿಕೆಯ ಹಿಂದಿದೆ ಎಂದು ಖಂಡಿಸಿರುವ ಎಸ್ಸೆಫೈ ಏಪ್ರಿಲ್ 2,2012 ರಂದು ರಾಜ್ಯವ್ಯಾಪಿ ಬೂತ ದಹನ ಇತ್ಯಾದಿ ಪ್ರತಿಭಟನೆಗೆ ಕರೆ ನೀಡಿದೆ.

0

Donate Janashakthi Media

Leave a Reply

Your email address will not be published. Required fields are marked *