ಸಿನಿಮಾಸಕ್ತ ವಿದ್ಯಾರ್ಥಿಗಳಿಗೆ ಅಧ್ಯಯನ ಶಿಬಿರ

ಬೆಂಗಳೂರು: ಸಿನಿಮಾ ಅಧ್ಯಯನದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೊಂದು ಒಳ್ಳೆಯ ಅವಕಾಶ. ಕನ್ನಡ ವಿಶ್ವವಿದ್ಯಾಲಯ, ಹಂಪಿಯ ನಾಡೋಜ ಡಾ. ರಾಜ್‌ಕುಮಾರ್ ಅಧ್ಯಯನ ಪೀಠ ಹಾಗೂ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಡಾ. ರಾಜ್‌ಕುಮಾರ್‌ ಕನ್ನಡ ಅಧ್ಯಯನ ಕೇಂದ್ರ, ಬೆಂಗಳೂರು ಹಾಗೂ ಕೋಲಾರ ಇವರಿಂದ ಸಿನಿಮಾ ಅಧ್ಯಯನ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ.

ಶಿಬಿರವು 7 ಜೂನ್ 2022ರಿಂದ 14 ಜೂನ್ 2022ರವರೆಗೆ ಎಂಟು ದಿನಗಳು ನಡೆಯಲಿದೆ. ಆಸಕ್ತಿ ಉಳ್ಳವರು ಅರ್ಜಿ ಸಲ್ಲಿಸಬಹುದು. ಛಾಯಾಗ್ರಹಣ, ಸಿನಿಮಾಟೊಗ್ರಫಿ, ಬೆಳಕು ವಿನ್ಯಾಸ, ಕಲಾನಿರ್ದೇಶನ, ಪಾತ್ರ ನಿರ್ವಹಣೆ, ಚಿತ್ರಕಥೆ, ಸಂಗೀತ, ಗೀತ ರಚನೆ, ಡಬ್ಬಿಂಗ್ ಇಂತಹ ವಿಷಯಗಳನ್ನು ಸಿನಿಮಾಟೊಗ್ರಾಫರ್ಸ್, ಸಿನಿಮಾ ತಂತ್ರಜ್ಞರು, ಸಂಗೀತ ನಿರ್ದೇಶಕರು, ಗೀತ ರಚನಾಕಾರರು, ಹೆಸರಾಂತ  ಸಿನಿಮಾ ಕ್ಷೇತ್ರದಲ್ಲಿ ಪ್ರಖ್ಯಾತಿ ಪಡೆದವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಅಧ್ಯಯನ ನಡೆಸಿಕೊಡಲಿದ್ದಾರೆ.

ಪ್ರವೇಶ ಪಡೆಯಲು ಆಸಕ್ತಿ ಇರುವ ವಿದ್ಯಾರ್ಥಿಗಳು ಯಾವುದೇ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವವರು ಭಾಗವಹಿಸಬಹುದು. ಆಸಕ್ತ ಇರುವವರಿಗೆ ವಿಷಯ ಕ್ಷೇತ್ರದ ಸಮತೋಲನಕ್ಕೆ ಅನುಗುಣವಾಗಿ ಆಯ್ಕೆ ಮಾಡಲಾಗುತ್ತದೆ.

ಪ್ರವೇಶ ಶುಲ್ಕ ರೂ.500 ಮತ್ತು ಉಚಿತ ಊಟ, ವಸತಿ ಕಲ್ಪಿಸಲಾಗಿದೆ. ಬೆಳಗ್ಗೆಯಿಂದ ರಾತ್ರಿಯವರೆಗೂ ಕಲಿಕೆ ನಿರಂತರವಾಗಿರುತ್ತದೆ. ಶಿಬಿರಾರ್ಥಿಗಳು ಎಂಟು ದಿನ ಹಗಲು-ರಾತ್ರಿ ಸಕ್ರಿಯವಾಗಿ ಭಾಗವಹಿಸಬೇಕು.

ಶಿಬಿರದಲ್ಲಿ ಭಾಗವಹಿಸುವವರು  ಮೇ 27ರ ಒಳಗಾಗಿ  ಅರ್ಜಿ ಸಲ್ಲಿಸಬೇಕು. ಸಮೂಹ ಮಾಧ್ಯಮದ ಮುಖ್ಯಸ್ಥರಿಗೆ ಅಂಚೆಯ ಮೂಲಕ ಅರ್ಜಿ ಸಲ್ಲಿಸಲು ʻಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗʼ ಬೆಂಗಳೂರು ನಗರ ವಿಶ್ವವಿದ್ಯಾಲಯ ಪಿ.ಕೆ.ಬ್ಲಾಕ್, ಅರಮನೆ ರಸ್ತೆ, ಬೆಂಗಳೂರು-560009 ಅಥವಾ  ಇಮೇಲ್ ಮುಖಾಂತರ ಅರ್ಜಿ ಸಲ್ಲಿಸಲು [email protected] ಮತ್ತುಅರ್ಜಿಗಾಗಿ http://www.kannadauniversity.org ಅನ್ನು ಸಂಪರ್ಕಿಸಬಹುದು.

Donate Janashakthi Media

Leave a Reply

Your email address will not be published. Required fields are marked *