75 ನೇ ಕಾನ್‌ ಚಿತ್ರೋತ್ಸವದಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡ ದೀಪಿಕಾ ಪಡುಕೋಣೆ

  • ಭಾರತೀಯ ಸಿನಿಮಾಗಳ ಬೆಳವಣಿಗೆ ಕುರಿತು ಸಂತಸ ವ್ಯಕ್ತಪಡಿಸಿದ ನಟಿ
  • 28ರ ವರೆಗೆ ನಡೆಯಲಿರುವ ಚಿತ್ರೋತ್ಸವ

ಪ್ಯಾರಿಸ್: ಕಾನ್ ಚಿತ್ರೋತ್ಸವದಲ್ಲಿ ಇದೇ ಮೊದಲ ಬಾರಿಗೆ ಜ್ಯೂರಿಯಾಗಿ ಕಾಣಿಸಿಕೊಂಡಿರುವ ದೀಪಿಕಾ ಪಡುಕೋಣೆ ಅವರ ಫೋಟೊಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ.

2013ರಲ್ಲಿ ವಿದ್ಯಾ ಬಾಲನ್ ಅವರು ತೀರ್ಪುಗಾರರಾಗಿದ್ದರು, ಆ ನಂತರದಲ್ಲಿ ಆ ಆಸನವನ್ನು ಭಾರತದ ಪ್ರತಿನಿಧಿಯಾಗಿ ದೀಪಿಕಾ ತುಂಬುತ್ತಿದ್ದಾರೆ. ಇಂಡಿಯಾ ಪೆವಿಲಿಯನ್ ಉದ್ಘಾಟನೆಯಲ್ಲಿ ನಟಿ ದೀಪಿಕಾ ಪಡುಕೋಣೆ ಇದುವರೆಗಿನ ಭಾರತದ ಸಿನಿಮಾ ಪ್ರಯಾಣದ ಬಗ್ಗೆ ಮಾತನಾಡಿದರು.  ‘ನಾವು ಒಂದು ದೇಶವಾಗಿ ನಮ್ಮ ಪ್ರಯತ್ನಗಳ ಮೂಲಕ ಬಹಳ ದೂರ ಹೋಗಬೇಕಾಗಿದೆ ಎಂದು ನಾನು ಭಾವಿಸುತ್ತೇನೆ. ಈ ಸ್ಥಳದಲ್ಲಿ ಭಾರತೀಯಳಾಗಿ ಮತ್ತು ದೇಶವನ್ನು ಪ್ರತಿನಿಧಿಸುತ್ತಿರುವುದಕ್ಕೆ ನನಗೆ ನಿಜವಾಗಿಯೂ ಹೆಮ್ಮೆ ಅನಿಸುತ್ತದೆ. ಆದರೆ ನಾವು 75 ವರ್ಷಗಳ ಕಾನ್ ಚಲನಚಿತ್ರೋತ್ಸವವನ್ನ ಹಿಂತಿರುಗಿ ನೋಡಿದಾಗ, ಕೇವಲ ಬೆರಳೆಣಿಕೆಯಷ್ಟು ಭಾರತೀಯ ಚಲನಚಿತ್ರಗಳು ಮತ್ತು ಭಾರತೀಯ ಪ್ರತಿಭೆಗಳಿಂದ ಇಲ್ಲಿ ನಿಲ್ಲಲು ಸಾಧ್ಯವಾಯಿತು. ಆದರೆ ಇಂದು ನಾವೆಲ್ಲ ಒಟ್ಟಾಗಿ ನಿಂತಿದ್ದೇವೆ.  ‘ನಮ್ಮಲ್ಲಿ ಪ್ರತಿಭೆ ಇದೆ, ನಮ್ಮಲ್ಲಿ ಸಾಮರ್ಥ್ಯವಿದೆ. ನಾವೆಲ್ಲ ಸೇರಿದರೆ ಭಾರತ ಸಿನಿಮಾಗಳು ಒಂದು ಹೆಜ್ಜೆ ಮುಂದಿಡಬಹುದು. ಇದು ನಮಗೆಲ್ಲರಿಗು ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ ಮತ್ತು ನಾನು ಬಲವಾಗಿ ನಂಬುತ್ತೇನೆ. ಏನೆಂದರೆ ಮುಂದೊಂದು ದಿನ ಭಾರತ ಕಾನ್ ನಲ್ಲಿ  ಕಾಣಿಸಿಕೊಳ್ಳುವುದಿಲ್ಲ. ಬದಲಾಗಿ ಕಾನ್ ಭಾರತದಲ್ಲಿ ಕಾಣಿಸಿಕೊಳ್ಳುತ್ತದೆ’ ಎಂದು ದೀಪಿಕಾ ಹೇಳಿದರು.

‘ಭಾರತವು ಶ್ರೇಷ್ಠತೆಯ ತುತ್ತತುದಿಯಲ್ಲಿದೆ. ಇದು ಆರಂಭವಷ್ಟ, ಭಾರತವನ್ನುಈ ಸ್ಥಾನದಲ್ಲಿ  ಇರಿಸಿದ್ದಕ್ಕಾಗಿ ರೆಹಮಾನ್  ಮತ್ತು ಶೇಖರ್ ಅವರಿಗೆ ಧನ್ಯವಾದಗಳನ್ನ ವ್ಯಕ್ತಪಡಿಸಿದರು. ಉತ್ಸವದಲ್ಲಿ ಭಾರತೀಯ ನಿಯೋಗದ ನೇತೃತ್ವವನ್ನ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ವಹಿಸಿದ್ದು, ಶೇಖರ್ ಕಪೂರ್, ರಿಕಿ ಕೇಜ್, ಪ್ರಸೂನ್ ಜೋಶಿ, ಜಾನಪದ ಗಾಯಕ ಮಾಮ್ ಖಾನ್ ಮತ್ತು ನಟರಾದ ನವಾಜುದ್ದೀನ್ ಸಿದ್ದಿಕಿ ಮತ್ತು ಆರ್ ಮಾಧವನ್ ಕಾನ್ ಚಲನಚಿತ್ರೋತ್ಸವದಲ್ಲಿ ಕಾಣಿಸಿಕೊಂಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *