ರನ್ವೇನಲ್ಲಿ ಚೀನಾ-ಟಿಬೇಟ್ ವಿಮಾನದಲ್ಲಿ ಬೆಂಕಿ-ಪ್ರಯಾಣಿಕರು ಪಾರು

ಚಾಂಗ್‌ಗಿಂಗ್: ಟಿಬೇಟ್ ಏರ್‌ಲೈನ್ಸ್‌ ವಿಮಾನವೊಂದು ರನ್ವೇನಲ್ಲಿ ಬೆಂಕಿಗಾಹುತಿಯಾದ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಎಲ್ಲ ಸಿಬ್ಭಂದಿಗಳು ಮತ್ತು ಪ್ರಯಾಣಿಕರನ್ನು ವಿಮಾನ ದುರಂತದಿಂದ ಪಾರುಮಾಡಲಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಲಾಗಿದೆ. ಸಣ್ಣಪುಟ್ಟ ಗಾಯಗೊಂಡ ಪ್ರಯಾಣಿಕರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಟಿವಿ9833/ಎ319/ಬಿ-6425 ವಿಮಾನದಲ್ಲಿ 113 ಪ್ರಯಾಣಿಕರು ಮತ್ತು ಒಂಭತ್ತು ಸಿಬ್ಬಂದಿ ವರ್ಗದವರಿದ್ದರು ಎಂದು ತಿಳಿದು ಬಂದಿದೆ. ವಿಮಾನವು ನೈಋತ್ಯ ಭಾಗದ ಚಾಂಗ್‌ಗಿಂಗ್‌ ನಗರದಿಂದ ಟಿಬೆಟ್‌ನ ನ್ಯಿಂಗ್ಚಿ ನಗರಕ್ಕೆ ಹೊರಟಿತ್ತು. ವಿಮಾನ ಹಾರಾಟ ಪ್ರಾರಂಭವಾಗುತ್ತಿದ್ದಂತೆಯೇ ವಿಮಾನದಲ್ಲಿ ತೊಂದರೆ ಎದುರಾಗಿದ್ದನ್ನು ಗಮನಿಸಿ ಕೂಡಲೇ ವಿಮಾನ ಹಾರಾಟವನ್ನು ರದ್ದುಗೊಳಿಸಲಾಯಿತು. ಈ ವೇಳೆ ಜೆಟ್‌ ವಿಮಾನವೊಂದು ರನ್ವೇನಲ್ಲಿ ಅಡ್ಡಾದಿಡ್ಡಿ ಓಡಾಡಿತು ಎಂದು ಕಂಪೆನಿ ಹೇಳಿಕೆಯಲ್ಲಿ ತಿಳಿಸಿದೆ.

“ಚಾಂಗ್‌ಕಿಂಗ್ ಜಿಯಾಂಗ್‌ಬೀ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಾಂಗ್‌ಕಿಂಗ್‌ನಿಂದ ಲಾಸಾಗೆ ವಿಮಾನವು ರನ್‌ವೇಯನ್ನು ಅತಿಕ್ರಮಿಸಿತು. ಇದರಿಂದಾಗಿ ವಿಮಾನವು ಬೆಂಕಿಗೆ ಆಹುತಿಯಾಗಿದೆ” ಎಂದು ಅಲ್ಲಿನ ಸರ್ಕಾರ ಮಾಹಿತಿ ನೀಡಿದೆ. ವಿಮಾನದ ತುದಿಯ ಎಡಬಾಗದಲ್ಲಿ ಬೆಂಕಿ ಕಂಡುಬಂದಿದ್ದು, ಬೆಂಕಿಗಾಹುತಿಗೆ ನಿರ್ದಿಷ್ಠ ಕಾರಣವನ್ನು ತನಿಖೆ ನಂತರ ತಿಳಿದುಬರಲಿದೆ.

ಕಳೆದ ತಿಂಗಳಲ್ಲಿ ಚೀನಾದ ಚೀನಾ ‘ಈಸ್ಟರ್ನ ಏರ್ ಲೈನ್ಸ್’ ನ ವಿಮಾನವೊಂದು ಆನಾಹುತಕ್ಕೀಡಾಗಿ 132 ಜನ ಮೃತಪಟ್ಟಿದ್ದರು. ಈ ಅನಾಹುತಕ್ಕು ಅಧಿಕೃತ ಮಾಹಿತಿ ತಿಳಿದುಬಂದಿಲ್ಲ.

Donate Janashakthi Media

Leave a Reply

Your email address will not be published. Required fields are marked *