ಮುಂಬೈ: ಸಂಸದೆ ನವನೀತ್ ರಾಣಾ ಹಾಗು ಆಕೆಯ ಪತಿ ಶಾಸಕ ರವಿ ಇತ್ತೀಚೆಗೆ ಜೈಲಿನಲ್ಲಿದ್ದಾಗ ಮಹಾರಾಷ್ಟ್ರದ ಅಧಿಕಾರಿಗಳು ತಮ್ಮನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆಂದು ಪ್ರಧಾನಿ ನರೇಂದ್ರ ಮೋದಿ ಹಾಗು ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಂದೆ ಪ್ರಸ್ತಾಪಿಸುವುದಾಗಿ ತಿಳಿಸಿದ್ದಾರೆ.
ಇದೇ ವೇಳೆ, ಅಧಿಕಾರಕ್ಕಾಗಿ ಶಿವಸೇನೆ ಮುಖ್ಯಸ್ಥರು ಇತರರಿಗೆ ಉಪದೇಶ ನೀಡಬಾರದು ಎಂದಿರುವ ಅಮರಾವತಿಯ ಲೋಕಸಭಾ ಸದಸ್ಯೆ ನವನೀತ್ ರಾಣಾ ಮುಂಬರುವ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ತಮ್ಮ ಪಕ್ಷವನ್ನು ಗೆಲ್ಲಿಸಿ ಶಿವಸೇನೆಗೆ ತಕ್ಕ ಪಾಠ ಕಲಿಸಲಾಗುವುದು ಎಚ್ಚರಿಕೆ ನೀಡಿತ್ತು.
ಇದನ್ನು ಓದಿ: ರಾಣಾ ದಂಪತಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಮುಂಬೈ ಹೈಕೋರ್ಟ್
ಮೇ 4ರಂದು, ಇಲ್ಲಿನ ವಿಶೇಷ ನ್ಯಾಯಾಲಯವು ಜಾಮೀನು ನೀಡುವಾಗ, ಪ್ರಕರಣಕ್ಕೆ ಸಂಬಂಧಿಸಿದಂತೆ, ಮತ್ತೊಮ್ಮೆ ಇಂತಹುದ್ದೇ ಅಪರಾಧವನ್ನು ಮಾಡಬಾರದು ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ವಿಷಯದ ಬಗ್ಗೆ ಸುದ್ದಿಗಾರರ ಬಳಿ ಮಾತನಾಡಬಾರದೆಂದು ಹೇಳಿದ್ದರು.
ಜೈಲಿನಲ್ಲಿದ್ದ ವೇಳೆ ಅಲ್ಲಿನ ಪೊಲೀಸ್ ಅಧಿಕಾರಿಗಳು ತಮ್ಮೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದಾರೆಂಬುದರ ಕುರಿತು ಈಗಾಗಲೇ ನವನೀತ್ ಕೌರ್, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಸಹ ಬರೆದಿದ್ದಾರೆ. ನಾವು ದೆಹಲಿಗೆ ಹೋಗುತ್ತೇವೆ ಮತ್ತು ನಾಯಕರನ್ನು ಭೇಟಿಯಾಗುತ್ತೇವೆ. ಪ್ರಧಾನಿ, ಕೇಂದ್ರ ಗೃಹ ಸಚಿವರು ಮತ್ತು ಲೋಕಸಭಾ ಸ್ಪೀಕರ್ ಅವರನ್ನು ಭೇಟಿ ಮಾಡಲಿದ್ದೇನೆ ಮತ್ತು ಜೈಲಿನಲ್ಲಿದ್ದ ಸಂದರ್ಭದಲ್ಲಿ ನಮ್ಮನ್ನು ಹೇಗೆ ಕೆಟ್ಟದಾಗಿ ನಡೆಸಿಕೊಳ್ಳಲಾಯಿತು ಎಂದು ಹೇಳುತ್ತೇನೆ. ನಾನು ಅದರ ಬಗ್ಗೆ ದೂರು ನೀಡಲಿದ್ದೇನೆ” ಎಂದು ಸಂಸದೆ ನವನೀತ್ ರಾಣಾ ಹೇಳಿದರು.
ಇದೇ ವೇಳೆ, ಅಮರಾವತಿಯ ಬದ್ನೇರಾದ ಶಾಸಕ ರವಿ ರಾಣಾ ಅಕ್ರಮ ನಿರ್ಮಾಣದ ದೂರಿನ ನಂತರ ಇಲ್ಲಿನ ಉಪನಗರ ಖಾರ್‌ನಲ್ಲಿ ವಾಸಿಸುವ ಹೌಸಿಂಗ್ ಸೊಸೈಟಿಗೆ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ನೋಟಿಸ್ ಜಾರಿ ಮಾಡಿರುವ ಬಗ್ಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನು ಓದಿ: ಸಂಸದನಿಂದ ಆಸಿಡ್ ದಾಳಿ ಬೆದರಿಕೆ: ನವನೀತ್ ಕೌರ್ ರಾಣಾ ಆರೋಪ
ಜೈಲಿನಲ್ಲಿದ್ದಾಗ ರಾಣಾ ನವನೀತ್ ಅವರನ್ನು ಹೇಗೆ ಕೆಟ್ಟದಾಗಿ ನಡೆಸಿಕೊಳ್ಳಲಾಯಿತು ಎಂಬುದರ ಕುರಿತು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಮಾಹಿತಿ ಪಡೆಯಬೇಕು ಎಂದು ರವಿ ರಾಣಾ ತಿಳಿಸಿದ್ದಾರೆ.
ಮತ್ತೊಮ್ಮೆ ನೋಟಿಸ್ ಜಾರಿ
ಕಳೆದ ಮೂರು ದಿನಗಳ ಹಿಂದೆ ಷರತ್ತುಬದ್ಧ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿರುವ ರಾಣಾ ದಂಪತಿಗೆ ಇದೀಗ ಮುಂಬೈ ಸೆಷನ್ಸ್ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ‘ನಿಮ್ಮ ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರೆಂಟ್ ಯಾಕೆ ಹೊರಡಿಸಬಾರದು? ಎಂಬುದಕ್ಕೆ ಪ್ರತಿಕ್ರಿಯೆ ನೀಡುವಂತೆ ಸೂಚನೆ ನೀಡಿದೆ.
ಜಾಮೀನು ಪಡೆದು ಜೈಲಿನಿಂದ ಹೊರ ಬರುತ್ತಿದ್ದಂತೆ ರಾಣಾ ದಂಪತಿ ತಮ್ಮ ಹೇಳಿಕೆಗಳ ಮೂಲಕ ಷರತ್ತು ಉಲ್ಲಂಘನೆ ಮಾಡಿದ್ದು, ಈವರೆಗೆ ಮಂಜೂರು ಮಾಡಲಾಗಿರುವ ಜಾಮೀನು ರದ್ದುಗೊಳಿಸುವಂತೆ ಮುಂಬೈ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದರು.
ಶಾಸಕ ರವಿ ರಾಣಾ ಹಾಗೂ ಸಂಸದೆ ನವನೀತ್ ಕೌರ್ಗೆ ಕೋರ್ಟ್ ನೀಡಿರುವ ಷರತ್ತು ಬದ್ಧ ಜಾಮೀನು ನಿಯಮ ಉಲ್ಲಂಘಣೆ ಮಾಡಿದ್ದಾರೆಂಬುದು ಮುಂಬೈ ಪೊಲೀಸರ ವಾದವಾಗಿದೆ.