ಬಹುತ್ವ ಸಂಸ್ಕೃತಿ ಪರಂಪರೆ ಉಳಿವಿಗಾಗಿ ಸೌಹಾರ್ದ ಸಂಸ್ಕೃತಿ ಸಮಾವೇಶ

ಭಾರತಕ್ಕೆ ಬಹುದೊಡ್ಡ ಸೌಹಾರ್ದ ಪರಂಪರೆಯಿದೆ. ಬಹು ಸಂಸ್ಕೃತಿ, ಬಹು ಭಾಷೆ ಮತ್ತು ಬಹು ಧರ್ಮಗಳ ಎಲ್ಲರೂ ಪರಸ್ಪರ ಸೌಹಾರ್ದದಿಂದ ಬದುಕುತ್ತ, ಆರೋಗ್ಯಕರ ಸಮಾಜ ನಿರ್ಮಾಣ ಮಾಡಬೇಕೆಂಬ ಸಂಕಲ್ಪದೊಂದು ಬಹು ದೊಡ್ಡ ಕಾರ್ಯಕ್ರಮವೊಂದು ಇಂದು( ಮೇ 5) ನಡೆಯಲಿದೆ.

ಸೌಹಾರ್ದ ಕರ್ನಾಟಕ – ವಿವಿಧ ಸಂಘಟನೆಗಳ ಸಂಯುಕ್ತ ಸಮಿತಿ ಬೆಂಗಳೂರು ವತಿಯಿಂದ ಜಂಟಿಯಾಗಿ ʻಸೌಹಾರ್ದ ಸಂಸ್ಕೃತಿ ಸಮಾವೇಶʼವನ್ನು ಹಮ್ಮಿಕೊಂಡಿದೆ. ಇಂದು ಸಂಜೆ 4.30ಕ್ಕೆ ಬೆಂಗಳೂರು ನಗರದ ಡಾ. ಅಂಬೇಡ್ಕರ್‌ ಭವನ, ವಸಂತ ನಗರ ಇಲ್ಲಿ ಸಮಾವೇಶ ನಡೆಯಲಿದ್ದು, ಧರ್ಮಗುರುಗಳು, ಸಂವಿಧಾನ ತಜ್ಞರು ಸಂದೇಶ ನೀಡಲಿದ್ದಾರೆ.

ಜಾತಿ, ಮತ ಧರ್ಮಗಳನ್ನು ಮೀರಿ ಒಟ್ಟಾಗಿ ಜೀವಿಸಿದ ಸೋದರತ್ವದ ಮೌಲ್ಯವನ್ನು ಪ್ರತಿನಿಧಿಗಳಿದ್ದಾರೆ. ವಿವಿಧ ಹಬ್ಬಾದಿ ಆಚರಣೆಗಳನ್ನು ಒಟ್ಟಾಗಿ ಮಾಡಿ ಸಂಭ್ರಮಿಸಿದ ನಿದರ್ಶನಗಳಿಗೂ ನಮ್ಮ ದೇಶದವು ಉತ್ತಮ ಸಾಕ್ಷಿ ಸ್ವರೂಪಿಯಾಗಿದೆ. ಬಹುತ್ವದ ಬದುಕಿನ ಮಾದರಿಯಾಗಿ ವಿಶ್ವಕ್ಕೆ ದಾರಿತೋರಿಸಿದೆ. ಕರ್ನಾಟಕದ ಇಂತಹ ಸೌಹಾರ್ದ ಪರಂಪರೆಯನ್ನು ಉನ್ನತ ಮಟ್ಟದಲ್ಲಿ ಪಾಲಿಸಿಕೊಂಡು ಬರಲಾಗಿದೆ. ವಚನಕಾರರು, ದಾಸರು, ಸೂಫಿ ಸಂತರು, ತತ್ವಪದಕಾರರು, ಕವಿಗಳು ವಿವಿಧ ಧಾರ್ಮಿಕ ಗುರುಗಳು, ಚಿಂತಕರು, ಕ್ರಿಯಾಶೀಲರು ಮತ್ತು ಇನ್ನೂ ಹಲವು ಮಂದಿ ಸಮಾನತೆ ಮತ್ತು ಸಹಿಷ್ಣುತೆಯ ಆದರ್ಶ ಮಾದರಿಗಳನ್ನು ಬಿತ್ತಿದ್ದಾರೆ.

ಆದರೆ, ರಾಜ್ಯದಲ್ಲಿ ಇತ್ತೀಚಿನ ಕೆಲವು ಘಟನೆಗಳಿಂದಾಗಿ ಸೌಹಾರ್ದ ಸಂಸ್ಕೃತಿಗೆ ಧಕ್ಕೆ ತರುತ್ತಿದ್ದಾರೆ. ಇಂತಹ ಎಲ್ಲಾ ಅಪಮೌಲ್ಯಗಳನ್ನು ನಾಶಪಡಿಸಿ ರಾಜ್ಯದ ಪರಂಪರೆಯ ಭರವಸೆಯನ್ನು ಮೂಡಿಸುವ ಅವಶ್ಯಕತೆಯಿಂದಿಗೆ ಸೌಹಾರ್ದ ಸಂಸ್ಕೃತಿ ಸಮಾವೇಶ ನಡೆಯಲಿದೆ.

ವಿಶೇಷವಾಗಿ, ಇಂದು ಧರ್ಮಗುರುಗಳ ಮತ್ತು ಸಂವಿಧಾನ ತಜ್ಞರ ಪಾತ್ರ ಮಹತ್ವದ್ದಾಗಿದೆ. ಕದಡಿದ ವಾತಾವರಣವನ್ನು ತಿಳಿಗೊಳಿಸುವುದು ಸದ್ಯದ ಆದ್ಯತೆಯಾಗಬೇಕಾಗಿದೆ., ಈ ಹಿನ್ನೆಲೆಯಲ್ಲಿ ಪರ-ವಿರೋಧಗಳನ್ನು ಮೀರಿದ ಸೌಹಾರ್ದ ಸಂಸ್ಕೃತಿ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಸವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಎನ್‌. ಸಂತೋಷ್‌ ಹೆಗ್ಡೆ ಹಾಗೂ ನ್ಯಾಯಮೂರ್ತಿ ವಿ. ಗೋಪಾಲಗೌಡ, ಕರ್ನಾಟಕ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ ದಾಸ್‌ ಅವರು ಸಂವಿಧಾನ ತಜ್ಞರ ಸಂದೇಶವನ್ನು ಪ್ರಸ್ತುತಪಡಿಸಲಿದ್ದಾರೆ.

ಧರ್ಮ ಗುರುಗಳ ಸಂದೇಶವನ್ನು ಶ್ರೀ ಪ್ರಸನ್ನನಾಥ ಸ್ವಾಮೀಜಿ, ಶ್ರೀ ಕ್ಷೇತ್ರ ಆದಿಚುಂಚನಗಿರಿ, ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಸಿರಿಗೆರೆ ತರಳಬಾಳು ಬೃಹನ್ಮಠ, ಸಾಣೇಹಳ್ಳಿ, ಶ್ರೀ ಶಿವರುದ್ರ ಮಹಾಸ್ವಾಮೀಜಿ, ಶ್ರೀ ಬೇಲಿಮಠ, ಮಹಾಸಂಸ್ಥಾನ, ಬೆಂಗಳೂರು., ಶ್ರೀ ವಿದ್ಯಾಧರ ವಿದ್ಯಾರಣ್ಯ ಭಾರತಿ ಸ್ವಾಮಿ, ಕೂಡಲಿ ಶೃಂಗೇರಿ ಮಹಾಸಂಸ್ಥಾನ, ಶಿವಮೊಗ್ಗ, ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಶ್ರೀ ಮಹರ್ಷಿ ವಾಲ್ಮೀಕಿ ಮಹಾಮಠ, ರಾಜನಹಳ್ಳಿ, ಶ್ರೀ ಭಂತೆ ಮಾತಾ ಮೈತ್ರೇಯಾ, ಬೌದ್ಧದಮ್ಮ ಗುರುಗಳು, ಸ್ಫೂರ್ತಿಧಾಮ, ಬೆಂಗಳೂರು., ಶ್ರೀ ಮೌಲಾನ ಸಗೀರ್‌ ಅಹ್ಮದ್‌ ಖಾನ್‌ ರಷಾದಿ, ಆಮೀರ್‌ ಎ ಷರೀಯತ್‌ ಕರ್ನಾಟಕ., ಶ್ರೀ ಮೌಲಾನಾ ಶಾಫಿ ಸಅದಿ, ಅಧ್ಯಕ್ಷರು, ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿ, ರೆ. ಫಾ. ಡಾ. ಪೀಟರ್‌ ಮಜಾದೊ, ಮೆಟ್ರೊಪಾಲಿಟನ್‌ ಆರ್ಚ್‌ಬಿಷಪ್‌, ಬೆಂಗಳೂರು., ಶ್ರೀ ಮೌಲಾನಾ ಶಾಹುಲ್‌ ಹಮೀದ್‌ ಮೌಲ್ವಿ, ಆಲ್‌ ಹಿದಾಯ ಮಸ್ಜಿದ್‌ ಸೇರಿದಂತೆ ಮತ್ತಿತರರು ಮಾತನಾಡಲಿದ್ದಾರೆ.

ಕಾರ್ಯಕ್ರಮದ ಆಶಯ ನುಡಿಯನ್ನು ಬರಗೂರು ರಾಮಚಂದ್ರಪ್ಪ ಮಾಡಲಿದ್ದಾರೆ. ಸಮಾವೇಶದ ಸಂಚಾಲಕರಾಗಿ ಮಾವಳ್ಳಿ ಶಂಕರ್‌, ಆರ್.‌ ಮೋಹನ್‌ ರಾಜ್‌, ಎಸ್‌.ವೈ.ಗುರುಶಾಂತ್‌, ಬಿ.ಎಂ. ಹನೀಫ್‌, ಎ. ಜ್ಯೋತಿ, ಮಲ್ಲಿಗೆ, ಪೆರಿಕೊ ಪ್ರಭು, ಬಿ. ರಾಜಶೇಖರಮೂರ್ತಿ, ಬಡಗಲಪುರ ನಾಗೇಂದ್ರ, ಎಸ್‌. ಆಶಾ, ಮನೋಹರ ಚಂದ್ರಪ್ರಸಾದ್‌ ಇದ್ದಾರೆ.

ಕಾರ್ಯಕ್ರಮದಲ್ಲಿ ದಲಿತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ಮಹಿಳಾ-ಯುವಜನ-ವಿದ್ಯಾರ್ಥಿ ಸಂಘಟನೆಗಳು, ಜನಪರ-ಪ್ರಗತಿಪರ ಸಮಾನ ಮನಸ್ಕ ಸಂಘಟನೆಗಳು, ವಕೀಲರ ಸಂಘಟನೆಗಳು, ರೈತ, ಸಾಂಸ್ಕೃತಿಕ ಮತ್ತು ಇನ್ನೂ ಹಲವು ಜನ ಕಾಳಜಿಯ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *